Khalistani Terrorists Attack Himachal Bus : ಪಂಜಾಬ್‌ನಲ್ಲಿ ಖಲಿಸ್ತಾನಿಗಳಿಂದ ಹಿಮಾಚಲ ಪ್ರದೇಶದ ಸಾರಿಗೆ ಇಲಾಖೆಯ ಬಸ್ಸಿನ ಮೇಲೆ ದಾಳಿ

ಖಲಿಸ್ತಾನಿ ಭಯೋತ್ಪಾದಕ ಭಿಂದ್ರನ್ವಾಲೆಯವರ ಭಾವಚಿತ್ರವಿರುವ ಕರಪತ್ರವನ್ನು ಅಂಟಿಸದ ಕಾರಣ ಬಸ್ಸಿನ ಮೇಲೆ ದಾಳಿ

ಅಮೃತಸರ (ಪಂಜಾಬ) – ಪಂಜಾಬ್‌ನ ಖರಾರನಲ್ಲಿ ಹಿಮಾಚಲ ಪ್ರದೇಶ ಸಾರಿಗೆ ನಿಗಮದ ಬಸ್ಸಿನ ಮೇಲೆ ದಾಳಿ ನಡೆಸಲಾಗಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಬಸ್ಸಿನ ಕಿಟಕಿಗಳನ್ನು ಒಡೆದಿದ್ದಾರೆ. ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಸಂದರ್ಭದಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಹೇಗೋ ತಮ್ಮ ಪ್ರಾಣ ಉಳಿಸಿಕೊಂಡರು. ನಂತರ ದಾಳಿಕೋರರು ಪರಾರಿಯಾಗಿದ್ದಾರೆ. ಈ ದಾಳಿಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

1. ಈ ದಾಳಿಯ ಮೊದಲು ಪಂಜಾಬ್‌ನಲ್ಲಿ ಹಿಮಾಚಲದಿಂದ ಬಂದ ಬಸ್ಸುಗಳನ್ನು ನಿಲ್ಲಿಸಿ ಅವುಗಳ ಮೇಲೆ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯವರ ಭಾವಚಿತ್ರವಿರುವ ಕರಪತ್ರಗಳನ್ನು ಅಂಟಿಸಲಾಯಿತು. ‘ಒಂದು ವೇಳೆ ಹಿಮಾಚಲದಿಂದ ಬರುವ ಯಾವುದೇ ಬಸ್ಸಿನಲ್ಲಿ ಭಿಂದ್ರನ್ವಾಲೆಯವರ ಕರಪತ್ರ ಅಂಟಿಸಿರದಿದ್ದರೆ, ಅವುಗಳನ್ನು ಪಂಜಾಬ ಪ್ರವೇಶಿಸಲು ಬಿಡುವುದಿಲ್ಲ’ ಎಂದು ಖಲಿಸ್ತಾನಿಗಳು ಬೆದರಿಕೆ ಹಾಕಿದ್ದರು.

2. ಬಸ್ಸಿನ ಮೇಲೆ ದಾಳಿ ಮಾಡಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪಂಜಾಬ್‌ನ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಜನರಿಗೆ ಶಾಂತಿಯನ್ನು ಕಾಪಾಡುವಂತೆ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳಬಾರದೆಂದು ಮನವಿ ಮಾಡಿದ್ದಾರೆ.

3. ಕೆಲವು ದಿನಗಳ ಹಿಂದೆ ಭಿಂದ್ರನವಾಲೆಯ ಕರಪತ್ರದ ಕಾರಣದಿಂದ ಹಿಮಾಚಲ ಪ್ರದೇಶದಲ್ಲಿ ವಿವಾದ ಉಂಟಾಗಿತ್ತು. ಸ್ಥಳೀಯರು ಮತ್ತು ಪೊಲೀಸರು ಸಿಖ್ ಯುವಕರ ದ್ವಿಚಕ್ರ ವಾಹನಗಳ ಮೇಲೆ ಪ್ರದರ್ಶಿಸಲಾಗಿದ್ದ ಖಲಿಸ್ತಾನ ಧ್ವಜಗಳನ್ನು ತೆಗೆದುಹಾಕಿದ್ದರು.

ಸಂಪಾದಕೀಯ ನಿಲುವು

ಖಲಿಸ್ತಾನಿಗಳು ಬಹಿರಂಗವಾಗಿ ಕೃತ್ಯಗಳನ್ನು ಎಸಗುತ್ತಿದ್ದರೂ ಪಂಜಾಬ್ ಪೊಲೀಸರು ನಿದ್ರಿಸುತ್ತಿದ್ದಾರೆಯೇ? ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಬಂದ ನಂತರ ಖಲಿಸ್ತಾನಿಗಳ ಬಗ್ಗೆ ಮೃದು ಧೋರಣೆ ನೀತಿಯನ್ನು ಅನುಸರಿಸಲಾಗುತ್ತಿದೆ. ಇದನ್ನು ಗಮನಿಸಿದರೆ ದೇಶದ ಭದ್ರತೆಯ ದೃಷ್ಟಿಯಿಂದ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಅವಶ್ಯಕವಾಗಿದೆ!