ಅಮೃತಸರ (ಪಂಜಾಬ) – ಇಲ್ಲಿನ ಠಾಕೂರದ್ವಾರಾ ದೇವಸ್ಥಾನದ ಹೊರಗೆ 3 ದಿನಗಳ ಹಿಂದೆ ಬೈಕ್‌ನಲ್ಲಿ ಬಂದು ಕೈ ಬಾಂಬ್ ಸ್ಫೋಟ ನಡೆಸಿದ್ದರು. ಪೊಲೀಸರು ಈ 2 ಆರೋಪಿಗಳ ಪೈಕಿ ಒಬ್ಬನನ್ನು ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡಿದ್ದಾರೆ, ಮತ್ತೊಬ್ಬ ಪರಾರಿಯಾಗಿದ್ದಾನೆ. ಈ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಗುರಸಿದ್ದಕ ಉರ್ಫ್ ಸಿದಕಿ ಉರ್ಫ್ ಅಲಿಯಾಸ್ ಜಗಜಿತ ಸಿಂಗ್ ಹತನಾಗಿದ್ದು, ಚುಯಿ ಉರ್ಫ್ ರಾಜು ಪರಾರಿಯಾಗಿದ್ದಾನೆ. ಈ ಇಬ್ಬರೂ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್’ ಗೆ ಸೇರಿದವರಾಗಿದ್ದಾರೆ.
https://twitter.com/SanatanPrabhat/status/1901658428696924341