ಒಬ್ಬ ಹಿಂದೂ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ
ಗೋಪಾಲಗಂಜ್ (ಬಿಹಾರ) – ಇಲ್ಲಿನ ಇಜ್ಮಾಲಿ ಗ್ರಾಮದ ಪಂಚಮುಖಿ ಹನುಮಾನ್ ದೇವಸ್ಥಾನಕ್ಕೆ ದೇಣಿಗೆ ಸಂಗ್ರಹಿಸಲು ಹೋದ ಭಕ್ತರ ಮೇಲೆ ಮತಾಂಧ ಮುಸ್ಲಿಮರು ಮಾರಣಾಂತಿಕ ದಾಳಿ ನಡೆಸಿದ್ದಾರೆ. ಇದರಲ್ಲಿ ಹಲವರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗೋಪಾಲಗಂಜ್ ಮತ್ತು ಸಿವಾನ್ ಜಿಲ್ಲೆಗಳ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದಲ್ಲಿ ನಿಯೋಜಿಸಲಾಗಿದೆ. ಪೊಲೀಸರು ಎರಡೂ ಕಡೆಯವರೊಂದಿಗೆ ಚರ್ಚೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಘಟನಾಸ್ಥಳದಿಂದ 3 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮೊದಲು ಕಲ್ಲು ತೂರಾಟ, ನಂತರ ಕೋಲು ಮತ್ತು ಮಾರಕಾಸ್ತ್ರಗಳಿಂದ ದಾಳಿ
ಬದರ್ಜಿಮಿ ಗ್ರಾಮದ ಕೆಲವು ಹನುಮಾನ್ ಭಕ್ತರು ಪಂಚಮುಖಿ ಹನುಮಾನ್ ದೇವಾಲಯದ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದರು. ಮಾರ್ಚ್ 20 ರಂದು ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಮತ್ತು ರಥಯಾತ್ರೆ ಆಯೋಜಿಸಲು ಪ್ರಸ್ತಾಪವಿದೆ. ಇದಕ್ಕಾಗಿ ಪ್ರಚಾರ ಮತ್ತು ನಿಧಿ ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ಭಕ್ತರ ತಂಡ ಸಿವಾನ್ ಜಿಲ್ಲೆಯ ಇಜ್ಮಾಲಿ ಗ್ರಾಮಕ್ಕೆ ತಲುಪಿದಾಗ ಅವರ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಲಾಯಿತು. ಗಾಯಗೊಂಡ ಹಿಂದೂಗಳು, ಮುಸ್ಲಿಮರ ಮಸೀದಿ ಬಳಿ ನಾವು ತಲುಪಿದಾಗ ಅಲ್ಲಿಂದ ದಾಳಿ ಮಾಡುವಂತೆ ಘೋಷಣೆ ಮಾಡಲಾಯಿತು ಮತ್ತು ನಂತರ ಕಲ್ಲು ಮತ್ತು ಕೋಲುಗಳಿಂದ ನಮ್ಮ ಮೇಲೆ ದಾಳಿ ಮಾಡಲಾಯಿತು. ಕೆಲವು ಮುಸ್ಲಿಮರು ಹರಿತವಾದ ಆಯುಧಗಳಿಂದ ದಾಳಿ ಮಾಡಿದರು, ಎಂದು ಆರೋಪಿಸಿದರು. (ಮಸೀದಿಗಳಲ್ಲಿ ಇದರ ಸಂಗ್ರಹವಿದೆ ಎಂದು ಇಲ್ಲಿಯವರೆಗಿನ ಘಟನೆಗಳಿಂದ ತಿಳಿದುಬಂದಿದೆ. ಅಂತಹ ಮಸೀದಿಗಳಿಗೆ ಸರಕಾರ ಏಕೆ ಬೀಗ ಹಾಕುವುದಿಲ್ಲ? – ಸಂಪಾದಕರು) ಇದರಲ್ಲಿ ಮಿರ್ಗಂಜ್ ನಿವಾಸಿ ನಿತೀಶ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
🚨 Brutal Attack on Hindus in Bihar! 🚨
🔴 Hindus collecting donations for a temple in Gopalganj were attacked from a mosque—one youth seriously injured!
In a Hindu-majority nation, why elect governments that stay silent on repeated attacks against Hindus?
When will Hindus… pic.twitter.com/zsrGZ4cJiq
— Sanatan Prabhat (@SanatanPrabhat) March 16, 2025
ಕಾವಿ ಬಟ್ಟೆ ಧರಿಸಿದ್ದರಿಂದ ದಾಳಿ !
ಗಾಯಗೊಂಡ ಹಿಂದೂಗಳು ನಾವು ಕಾವಿ ಬಟ್ಟೆ ಧರಿಸಿದ್ದರಿಂದ ನಮ್ಮನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ದಾಳಿಯ ಹಿಂದೆ ಧಾರ್ಮಿಕ ಕಟ್ಟರವಾದ ಮತ್ತು ಯೋಜಿತ ಸಂಚು ಇದೆ ಎಂದು ಶಂಕಿಸಲಾಗಿದೆ.
ಸಂಪಾದಕೀಯ ನಿಲುವು
|