Nerul Police Iftar Party : ಹಿಂದುತ್ವನಿಷ್ಠರ ವಿರೋಧದ ನಂತರ ಪೊಲೀಸರಿಂದ ಆಯೋಜಿಸಿದ್ದ ಇಫ್ತಾರ್ ಕೂಟ ರದ್ದು !

  • ನೆರೂಳ ಪೊಲೀಸ್ ಠಾಣೆ ಮತ್ತು ಮರ್ಕಜ್-ಎ-ಫಲಾಹ್ ಜಂಟಿಯಾಗಿ ಇಫ್ತಾರ್ ಕೂಟ ಆಯೋಜನೆ

  • ವಿಶ್ವ ಹಿಂದೂ ಪರಿಷತ್ತಿನಿಂದ ಪೊಲೀಸರಿಗೆ ಪ್ರತಿಭಟನಾ ಪತ್ರ !

ಮುಂಬಯಿ – ನೆರೂಳ ಪೊಲೀಸ್ ಠಾಣೆ ಮತ್ತು ‘ಮರ್ಕಜ್-ಎ-ಫಲಾಹ್’ ಇವರು ಜಂಟಿಯಾಗಿ ಮಾರ್ಚ್ 18 ರಂದು ನೆರೂಳ ಪೂರ್ವದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆ ‘ಮರ್ಕಜ್-ಎ-ಫಲಾಹ್’ ಎಂಬ ಧಾರ್ಮಿಕ ಸಂಘಟನೆಯ ಹೆಸರಿನಲ್ಲಿ ಮತ್ತು ನೆರೂಳ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯ ಸಹಿ ಮತ್ತು ‘ಲೋಗೋ’ದೊಂದಿಗೆ ಪ್ರಸಾರವಾಗಿತ್ತು; ಆದರೆ ಕಾರ್ಯಕ್ರಮಕ್ಕೆ ಹಿಂದುತ್ವನಿಷ್ಠರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಕೂಟವನ್ನು ರದ್ದುಗೊಳಿಸಲಾಯಿತು. (ಎಚ್ಚರಿಕೆ ವಹಿಸಿ ತ್ವರಿತವಾಗಿ ಕ್ರಮ ಕೈಗೊಂಡ ನೆರೂಳದ ಹಿಂದುತ್ವನಿಷ್ಠರಿಗೆ ಅಭಿನಂದನೆಗಳು! – ಸಂಪಾದಕರು)

೧. ಪೊಲೀಸರು ಕಾರ್ಯಕ್ರಮ ಆಯೋಜಿಸಿದ್ದಾರೆಂದು ತಿಳಿದ ನಂತರ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ನೆರೂಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ನಾಗ್ಪುರದಲ್ಲಿ ನಡೆದ ಗಲಭೆ ಮತ್ತು ಪೊಲೀಸರ ಮೇಲೆ ನಡೆದ ಮಾರಣಾಂತಿಕ ದಾಳಿಯ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮವನ್ನು ವಿರೋಧಿಸಿದರು. ಈ ಬಗ್ಗೆ ಪರಿಷತ್ತಿನಿಂದ ನೆರೂಳ ಪೊಲೀಸರಿಗೆ ಪತ್ರವನ್ನೂ ನೀಡಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಫ್ತಾರ್ ಕೂಟವನ್ನು ರದ್ದುಗೊಳಿಸಲಾಯಿತು.

೨. ಒಂದು ಸುದ್ದಿಪತ್ರಿಕೆಯ ವರದಿಗಾರರು ನೆರೂಳ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬ್ರಹ್ಮಾನಂದ ನಾಯಕ್ವಾಡಿ ಅವರನ್ನು ಸಂಪರ್ಕಿಸಿದರು; ಆದರೆ ಅವರು ಈ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರು.

೩. ಕೂಟದ ಕರಪತ್ರದಲ್ಲಿ ಬಳಸಲಾದ ‘ಲೋಗೋ’ ಕಾನೂನುಬಾಹಿರವಾಗಿತ್ತು ಎಂದು ವಕೀಲ ಆಕಾಶ್ ಜಗತಾಪ್ ಮಾಹಿತಿ ನೀಡಿದರು. (ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ? – ಸಂಪಾದಕರು)

ಸಂಪಾದಕೀಯ ನಿಲುವು

  • ಇಫ್ತಾರ್ ಕೂಟ ಆಯೋಜಿಸಲು ಮುಂದಾಗುವ ಪೊಲೀಸರು ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಎಂದಿಗೂ ಕಾಣಿಸುವುದಿಲ್ಲ ! ಪೊಲೀಸರು ಇತರ ಧರ್ಮೀಯರನ್ನು ಬೆಂಬಲಿಸುತ್ತಿದ್ದಾರೆ ಎಂಬ ಭಾವನೆ ಹಿಂದೂಗಳ ಮನಸ್ಸಿನಲ್ಲಿ ಬಂದರೆ ತಪ್ಪೇನು ?
  • ಮೂಲತಃ ಇಂತಹ ಕೂಟಗಳ ಮೂಲಕ ಅತಿಥಿಗಳ ಗಡ್ಡಗಳನ್ನು ಸವರುವ ಪೊಲೀಸರು ಗಲಭೆಗಳ ಸಮಯದಲ್ಲಿ ಇದೇ ಅತಿಥಿಗಳಿಂದ ಹೊಡೆತ ತಿನ್ನುತ್ತಾರೆ. ನಾಗ್ಪುರ ಗಲಭೆ ನಿನ್ನೆಯಷ್ಟೇ ನಡೆದಿದೆ. ಆದರೂ ಈ ರೀತಿಯ ಗಾಂಧಿಗಿರಿ ತಾಳುವ ನೆರೂಳ ಪೊಲೀಸ್ ಠಾಣೆಯ ಆಘಾತವೇ ಆಗಿದೆ ಎಂದು ಯಾರಾದರೂ ಹೇಳಿದರೆ ತಪ್ಪೇನು ?
  • ಸರಕಾರಿ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಮಾಡಿದರೆ ಜಾತ್ಯತೀತ ಪ್ರಜಾಪ್ರಭುತ್ವದ ಹತ್ಯೆಯಾಗುತ್ತದೆ ಎಂದು ಕೂಗುವವರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ?