ಶವಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ!
ನವದೆಹಲಿ – ಇಲ್ಲಿ ಕೋಮಲ ಎಂಬ ಯುವತಿಯನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆಸಿಫ್ ಎಂಬಾತನನ್ನು ಬಂಧಿಸಿದ್ದಾರೆ. ಆಸಿಫ್ ಕೋಮಲಳ ಕೊಲೆ ಮಾಡಿ ಶವಕ್ಕೆ ಕಲ್ಲು ಕಟ್ಟಿ “ಛಾವ್ಲಾ ಕಾಲುವೆ”ಗೆ ಎಸೆದಿದ್ದ. ಪೊಲೀಸರಿಗೆ ಇಲ್ಲಿ ಶವ ಪತ್ತೆಯಾದ ನಂತರ ನಡೆಸಿದ ವಿಚಾರಣೆಯಿಂದ ಆಸಿಫ್ ನನ್ನು ಬಂಧಿಸಲಾಯಿತು. ಆಸಿಫ್ ಟ್ಯಾಕ್ಸಿ ಚಾಲಕನಾಗಿದ್ದಾನೆ.
ಕೋಮಲ್ ಮತ್ತು ಆಸಿಫ್ ಪರಸ್ಪರ ಪರಿಚಯಸ್ಥರಾಗಿದ್ದರು. ಇಬ್ಬರೂ ಸುಂದರನಗರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮಾರ್ಚ್ 12 ರಂದು ಆಸಿಫ್ ಮತ್ತು ಕೋಮಲ್ ಸೀಮಾಪುರಿ ಪ್ರದೇಶದಲ್ಲಿ ಭೇಟಿಯಾಗಿದ್ದರು. ಆಸಿಫ್ ಕೋಮಲನ್ನು ತನ್ನ ವಾಹನದಲ್ಲಿ ಕೂರಿಸಿಕೊಂಡು ಛಾವ್ಲಾ ಕಾಲುವೆಯ ಬಳಿ ಕರೆದುಕೊಂಡು ಹೋಗಿದ್ದ. ನಂತರ ಇಬ್ಬರ ನಡುವೆ ದೊಡ್ಡ ಜಗಳ ನಡೆದು, ಆಸಿಫ್ ಕೋಮಲನ್ನು ಕೊಲೆ ಮಾಡಿ ಶವವನ್ನು ಕಾಲುವೆಗೆ ಎಸೆದಿದ್ದಾನೆ.
ಸಂಪಾದಕೀಯ ನಿಲುವು
|