Sambhal Neja Mela Permission Denied : ಸಂಭಲ (ಉತ್ತರ ಪ್ರದೇಶ) ಇಲ್ಲಿ ದರೋಡೆಕೋರ ಮಸೂದ ಗಾಜಿಯ ಸ್ಮರಣಾರ್ಥ ನಡೆಯುವ ‘ನೇಜಾ ಮೇಳ’ಕ್ಕೆ ಅನುಮತಿ ನಿರಾಕರಣೆ !

ಅಂತಹ ಉತ್ಸವ ಆಚರಿಸುವವರ ವಿರುದ್ಧ ದೇಶದ್ರೋಹಿ ಎಂದು ದೂರು ದಾಖಲಿಸಲಾಗುವುದು ಪೊಲೀಸರಿಂದ ಎಚ್ಚರಿಕೆ

ಸಂಭಲ (ಉತ್ತರ ಪ್ರದೇಶ) – ಆಕ್ರಮಣಕಾರ ಮಹಮ್ಮದ ಘಜನಿಯ ದರೋಡೆಕೋರ ಸೇನಾಪತಿ ಸಯ್ಯದ ಸಾಲಾರ ಮಸೂದ ಗಾಜಿ ಹೆಸರಿನಲ್ಲಿ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಆಯೋಜಿಸಲಾಗುವ ‘ನೇಜಾ ಮೇಳ’ಕ್ಕೆ ಅನುಮತಿ ನಿರಾಕರಿಸಲಾಗಿದೆ. ಸೋಮನಾಥ ದೇವಸ್ಥಾನವನ್ನು ಲೂಟಿ ಮಾಡಿದ ಮತ್ತು ಭಾರತದಲ್ಲಿ ಲೂಟಿ ಹಾಗೂ ಹತ್ಯಾಕಾಂಡ ನಡೆಸಿದ ದರೋಡೆಕೋರರ ಸ್ಮರಣಾರ್ಥ ಯಾವುದೇ ಮೇಳವನ್ನು ಆಯೋಜಿಸಬಾರದು ಎಂದು ಸಂಭಲನ ಹಿರಿಯ ಪೊಲೀಸ ಅಧೀಕ್ಷಕರು ‘ನೇಜಾ ಮೇಳ’ ಸಮಿತಿಗೆ ಸಲಹೆ ನೀಡಿದ್ದಾರೆ. ನೀವು ಈವರೆಗೆ ದರೋಡೆಕೋರನ ಹೆಸರಿನಲ್ಲಿ ಮೇಳ ನಡೆಸಿ ಅಪರಾಧಗಳನ್ನು ಮಾಡುತ್ತಿದ್ದೀರಿ; ಆದರೆ ಇನ್ನು ಮುಂದೆ ಇದನ್ನು ಸಹಿಸಲಾಗುವುದಿಲ್ಲ, ಎಂದು ಅವರು ಹೇಳಿದರು.

1. ಸಯ್ಯದ್ ಸಲಾರ್ ಮಸೂದ್ ಗಾಜಿ ವಿದೇಶಿ ಆಕ್ರಮಣಕಾರ ಮಹಮ್ಮದ್ ಘಜನಿಯ ಸೋದರನ ಮಗ ಮತ್ತು ಸೇನಾಪತಿಯಾಗಿದ್ದನು. ಘಜನಿಯು ಕ್ರಿ.ಶ. 1 ಸಾವಿರದಿಂದ 1 ಸಾವಿರದ 27 ರ ಅವಧಿಯಲ್ಲಿ 17 ಬಾರಿ ಭಾರತದ ಮೇಲೆ ಆಕ್ರಮಣ ಮಾಡಿದ್ದನು. ಈ ಅವಧಿಯಲ್ಲಿ ಅವನು ಹಿಂದೂಗಳ ಶ್ರದ್ಧಾಸ್ಥಾನವಾದ ಸೋಮನಾಥ ದೇವಸ್ಥಾನ ಸೇರಿದಂತೆ ಅನೇಕ ದೊಡ್ಡ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದನು.

2. ಸಂಭಲನ ಹಿರಿಯ ಪೊಲೀಸ ಅಧೀಕ್ಷಕ ಶ್ರೀಶಚಂದ್ರ ಅವರು ‘ನೇಜಾ ಮೇಳ’ ಸಮಿತಿಯವರಿಗೆ, ಈ ದರೋಡೆಕೋರನ ಹೆಸರಿನಲ್ಲಿ ಯಾರು ಮೇಳ ಆಯೋಜಿಸಿದರೂ ಅವರನ್ನು ದೇಶದ್ರೋಹಿ ಎಂದು ವರ್ಗೀಕರಿಸಲಾಗುವುದು, ಎಂದು ಹೇಳಿದರು. ‘ನೇಜಾ ಮೇಳ’ ಒಂದು ಕೆಟ್ಟ ಪದ್ಧತಿ. ಯಾವುದೇ ದರೋಡೆಕೋರನ ಹೆಸರಿನಲ್ಲಿ ಮೇಳ ನಡೆಸುವುದು ಸಂಪೂರ್ಣವಾಗಿ ತಪ್ಪು. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

3. ಈ ಹಿಂದೆ ‘ನೇಜಾ ಮೇಳ ಸಮಿತಿ’ಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ಬಂದನಾ ಮಿಶ್ರಾ ಅವರನ್ನು ಭೇಟಿ ಮಾಡಿದ್ದರು. ಈ ಸಮಿತಿಯು ಮೇಳ ಆಯೋಜಿಸಲು ಅವರಲ್ಲಿ ಅನುಮತಿ ಕೇಳಿತ್ತು; ಆದರೆ ಜಿಲ್ಲಾಧಿಕಾರಿಗಳು ‘ನೇಜಾ ಮೇಳ’ಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಸಂಪಾದಕೀಯ ನಿಲುವು

ಇಂತಹ ಉತ್ಸವಕ್ಕೆ ಈವರೆಗೆ ಕಾಂಗ್ರೆಸ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮೊದಲಾದವು ಎಂದಿಗೂ ವಿರೋಧಿಸಲಿಲ್ಲ, ಬದಲಿಗೆ ಅದು ನಡೆಯಲು ಸಹಾಯ ಮಾಡಿದವು, ಎಂಬುದನ್ನು ಗಮನಿಸಬೇಕು!