ಕಠುವಾ ಅತ್ಯಾಚಾರ ಪ್ರಕರಣ : ಹಿಂದೂಗಳನ್ನು ಜಮ್ಮುವಿನಿಂದ ಹೊರದಬ್ಬುವ ಸಂಚು ! – ಪ್ರಾ. ಮಧು ಕಿಶ್ವರ್, ಲೇಖಕಿ
2018 ರಲ್ಲಿ, ಜಮ್ಮುವಿನ ರಸಾನಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದ ನಕಲಿ ಅತ್ಯಾಚಾರ ಪ್ರಕರಣವನ್ನು ವಿಶ್ವಾದ್ಯಂತ ‘ಕಠುವಾ ಅತ್ಯಾಚಾರ’ ಪ್ರಕರಣ ಎಂದು ಪ್ರಚಾರ ಮಾಡಲಾಯಿತು ಮತ್ತು ಪಿತೂರಿಯಿಂದ ಹಿಂದೂಗಳನ್ನು ಸಿಲುಕಿಸಿ ಅಪಕೀರ್ತಿಗೊಳಿಸಲಾಯಿತು. ದೇಶಾದ್ಯಂತ ಜಾತ್ಯತೀತರು, ಬಾಲಿವುಡ್ ನಟರು ಮತ್ತು ಹಿಂದೂ-ವಿರೋಧಿಗಳು ಈ ಪ್ರಕರಣವನ್ನು ವಿಶ್ವಾದ್ಯಂತದ ಹಿಂದೂಗಳನ್ನು ನಿಂದಿಸಲು ಬಳಸಿಕೊಂಡರು.