‘ತಮಿಳುನಾಡಿನ ಪೆರಂಬಲೂರ ಜಿಲ್ಲೆಯ ವಿ ಕಲಾಥುರ ಗ್ರಾಮದ ದೇವಸ್ಥಾನಗಳಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಉತ್ಸವ ಮತ್ತು ಮೆರವಣಿಗೆಗಳಿಗೆ ಮತಾಂಧರ ವಿರೋಧವಿತ್ತು. ಈಸಂದರ್ಭದಲ್ಲಿ ಮದ್ರಾಸ ಉಚ್ಚ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯ ಪೀಠವು ಇತ್ತೀಚೆಗೆ ಮತಾಂಧರ ಅರ್ಜಿಯನ್ನು ತಿರಸ್ಕರಿಸಿತು. ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪು ಹಿಂದೂಗಳಿಗೆ ಸ್ಪೂರ್ತಿಯನ್ನು ನೀಡುವಂತಹದ್ದಾಗಿದೆ.
೧. ವಿ ಕಲಾಥುರನಲ್ಲಿ ನಡೆಯುವ ಉತ್ಸವಗಳ ಮೇಲೆ ಮತಾಂಧರು ಮತ್ತು ಸರಕಾರ ಹೇರಿದ್ದ ನಿರ್ಬಂಧದ ವಿರುದ್ಧ ಹಿಂದೂಗಳ ಹೋರಾಟ !
ಅ. ವಿ ಕಲಾಥುರ ಗ್ರಾಮದಲ್ಲಿ ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನ, ಶ್ರೀ ಸೆಲಿಮ್ಮನ ದೇವಸ್ಥಾನ, ಶ್ರೀ ರಾಯಪ್ಪಾ ದೇವಸ್ಥಾನ, ಶ್ರೀ ಮಾರಿಯಮ್‌ನ ದೇವಸ್ಥಾನ ಹೀಗೆ ಒಟ್ಟು ೫ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಪುರಾತನ ಕಾಲದಿಂದಲೂ ದೇವತೆಗಳ ಉತ್ಸವ ನಡೆಯುತ್ತಿತ್ತು. ಅಲ್ಲದೇ ಮೆರವಣಿಗೆಗಳನ್ನು ನಡೆಸುವ ಪರಂಪರೆಯಿತ್ತು. ಈ ಮಹೋತ್ಸವವು ೩ ದಿನಗಳ ಕಾಲ ನಡೆಯುತ್ತಿತ್ತು. ಮೊದಲ ದಿನ ಇಡೀ ಗ್ರಾಮದಲ್ಲಿ ಹಗಲು-ರಾತ್ರಿ ದೇವತೆಗಳ ಮೆರವಣಿಗೆ ಹೊರಡುತ್ತಿತ್ತು. ಎರಡನೇಯ ದಿನ ಹಾಲು ಮತ್ತು ಅಗ್ನಿಯ ಕಲಶವನ್ನು ತೆಗೆದುಕೊಂಡು ಮೆರವಣಿಗೆ ನಡೆಯುತ್ತಿತ್ತು. ಅದೇ ದಿನ ರಾತ್ರಿ ಪುನಃ ದೇವತೆಗಳೊಂದಿಗೆ ಮೆರವಣಿಗೆ ಹೊರಡುತ್ತಿತ್ತು. ಮೂರನೇ ದಿನ ಮೆರವಣಿಗೆಯಲ್ಲಿ ಅರಿಶಿಣದ ನೀರನ್ನು ಸಿಂಪಡಿಸಗುತ್ತಿತ್ತು. ಇವೆಲ್ಲ ಮೆರವಣಿಗೆಗಳು ಗ್ರಾಮದ ಎಲ್ಲ ದೇವಸ್ಥಾನಗಳ ಎದುರಿನಿಂದ ಹಾದು ಹೋಗುತ್ತಿದ್ದವು.
ಆ. ಗ್ರಾಮದಲ್ಲಿ ಮತಾಂಧರ ಜನಸಂಖ್ಯೆ ಹೆಚ್ಚಾದ ಬಳಿಕ ಅವರು ತಮ್ಮ ಪ್ರಾರ್ಥನಾಸ್ಥಳಗಳನ್ನು ಕಟ್ಟಿಕೊಂಡರು. ತದನಂತರ ಭಾರತಾದ್ಯಂತ ಏನು ನಡೆಯುತ್ತದೆಯೋ, ಅದು ಇಲ್ಲಿಯೂ ನಡೆಯತೊಡಗಿತು. ೨೦೧೨ ನೇ ಇಸವಿಯಿಂದ ಮತಾಂಧರು ದೇವಸ್ಥಾನಗಳ ಪಾರಂಪಾರಿಕ ಉತ್ಸವಗಳೊಂದಿಗೆ ಮೆರವಣಿಗೆಗಳಿಗೂ ವಿರೋಧ ಮಾಡತೊಡಗಿದರು. ‘ನಮ್ಮ ಮಸೀದಿಗಳ ಎದುರಿನಿಂದ ಮೆರವಣಿಗೆಗಳನ್ನು ಒಯ್ಯಬೇಡಿರಿ, ‘ವಾದ್ಯಗಳನ್ನು ಬಾರಿಸಬೇಡಿರಿ, ಎಂದು ಹಿಂದೂಗಳಿಗೆ ಹೇಳಿದರು. ಮುಂದೊಂದು ದಿನ ಅವರು ಉತ್ಸವ ಮತ್ತು ಮೆರವಣಿಗೆಗಳನ್ನು ನಿರ್ಬಂಧಿಸುವಂತೆ ಪೊಲೀಸರು ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದರು.
ಇ. ಮತಾಂಧರ ಇಚ್ಛೆಯನ್ನು ತಕ್ಷಣ ಪೂರೈಸಲು ತತ್ಪರರಾಗಿರುವ ತಮಿಳುನಾಡು ಸರಕಾರವು ವಿ. ಕಲಾಥುರ ದೇವಸ್ಥಾನಗಳ ಉತ್ಸವಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿತು. ಎಲ್ಲಕ್ಕಿಂತ ಮೊದಲು ೩ ದಿನಗಳ ವರೆಗೆ ನಡೆಯುವ ಉತ್ಸವ ಮತ್ತು ಮೆರವಣಿಗೆಗಳನ್ನು ಒಂದು ದಿನಕ್ಕೆ ಮೊಟಕುಗೊಳಿಸಿತು. ಹಾಗೆಯೇ ಇಡೀ ಗ್ರಾಮದಲ್ಲಿ ಹೊರಡುತ್ತಿದ್ದ ಮೆರವಣಿಗೆಯನ್ನು ಕೇವಲ ಒಂದು ರಸ್ತೆಗೆ ಸೀಮಿತಗೊಳಿಸಲಾಯಿತು. ಇದರೊಂದಿಗೆ ಹಿಂದೂಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಯಿತು. ೨೦೧೨ ರಿಂದ ೨೦೧೫ ಈ ಇಸವಿಯವರೆಗೆ ಈ ಉತ್ಸವಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಯಿತು.
೨. ಧರ್ಮಾಭಿಮಾನಿ ಹಿಂದೂಗಳು ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸುವುದು
ಅ. ಧರ್ಮಾಭಿಮಾನಿ ಹಿಂದೂಗಳು ೨೦೧೫ ನೇ ಇಸವಿಯ ಬಳಿಕ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ವಿವಿಧ ಅರ್ಜಿಗಳನ್ನು ದಾಖಲಿಸಿದರು. ಅವರು ‘ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಪರಂಪರೆಗಳನ್ನು ನಿರ್ಬಂಧಿಸಬಾರದು, ಎಂದು ವಿನಂತಿಸಿದರು. ಇದಕ್ಕಾಗಿ ಸಂಘರ್ಷವನ್ನು ಮಾಡಿದ ಸದ್ಯದ ಅರ್ಜಿದಾರರಾಗಿರುವ ಶ್ರೀ. ರಾಮಸ್ವಾಮಿ ಉದ್ಯಾನ ಮತ್ತು ಅವರ ತಂದೆ ಶ್ರೀ. ಮುತ್ತುಸ್ವಾಮಿ ಉದ್ಯಾನ ಇವರು ಅಭಿನಂದನೆಗೆ ಪಾತ್ರರಾಗಿದ್ದಾರೆ.
ಆ. ನ್ಯಾಯಾಲಯವು ಈ ಪ್ರಕರಣವನ್ನು ಮಧ್ಯಸ್ಥರ ಮುಖಾಂತರ, ಅಂದರೆ, ನ್ಯಾಯಾಲಯದ ಆಯುಕ್ತರ ಮುಖಾಂತರ ಇತ್ಯರ್ಥಗೊಳಿಸಲು ಪ್ರಯತ್ನಿಸಿತು. ಇದಕ್ಕಾಗಿ ಒಬ್ಬ ನ್ಯಾಯವಾದಿಯನ್ನು ನಿಯುಕ್ತಗೊಳಿಸಿತು; ಆದರೆ ನ್ಯಾಯವಾದಿ ಸಮಿತಿಗೆ ಯಶಸ್ಸು ಸಿಗಲಿಲ್ಲ. ಆದುದರಿಂದ ನ್ಯಾಯಾಲಯವು ೮ ಮಂದಿ ಹಿಂದೂಗಳು, ೮ ಮಂದಿ ಮತಾಂಧರು ಮತ್ತು ಇಬ್ಬರು ಸರಕಾರಿ ಅಧಿಕಾರಿಗಳ ಒಂದು ಸಮಿತಿಯನ್ನು ರಚಿಸಿ, ಹೊಂದಾಣಿಕೆ ಮಾಡಲು ಪ್ರಯತ್ನಿಸಿತು. ಈ ಶಾಂತಿ ಸಮಿತಿಯ ಸಭೆಯಿಂದ ಯಾವುದೇ ಉಪಯೋಗವಾಗಲಿಲ್ಲ ಮತ್ತು ನಿರ್ಬಂಧಗಳೊಂದಿಗೆ ಉತ್ಸವಕ್ಕೆ ಅನುಮತಿಯನ್ನು ನೀಡಲಾಯಿತು.
ಇ. ಈ ನಿರ್ಬಂಧಗಳನ್ನು ಶ್ರೀ ರಾಮಸ್ವಾಮಿ ಉದ್ಯಾನ ಇವರು ಉಚ್ಚ ನ್ಯಾಯಾಲಯದಲ್ಲಿ ವಿರೋಧಿಸಿದರು. ಪ್ರಾರಂಭದಲ್ಲಿ ಈ ಪ್ರಕರಣದ ವಿಚಾರಣೆಯನ್ನು ಏಕ ಸದಸ್ಯ ಪೀಠದಲ್ಲಿ ನಡೆಸಲಾಯಿತು. ಪೀಠವು ಈ ಉತ್ಸವದ ಇಂದಿನವರೆಗಿನ ಪರಂಪರೆಯ ಮಾಹಿತಿಯನ್ನು ಪಡೆದುಕೊಂಡಿತು. ಆಗ ಅವರಿಗೆ ೧೯೫೨ ರಿಂದ ೨೦೧೨ ಇಸವಿಯ ವರೆಗೆ ಉತ್ಸವದ ಕುರಿತು ಯಾವುದೇ ವಿವಾದಗಳಿರಲಿಲ್ಲ ಎಂಬುದು ಗಮನಕ್ಕೆ ಬಂದಿತು. ಗ್ರಾಮದಲ್ಲಿ ಮತಾಂಧರ ಸಂಖ್ಯೆ ಹೆಚ್ಚಾದ ನಂತರ ೨೦೧೨ ಇಸವಿಯಲ್ಲಿ ಮತಾಂಧರು ನೇರವಾಗಿ ನಾವು ಮೂರ್ತಿ ಪೂಜೆಯನ್ನು ವಿರೋಧಿಸುತ್ತೇವೆ, ಆದ್ದರಿಂದ ಗ್ರಾಮದಲ್ಲಿನ ಉತ್ಸವಗಳನ್ನು, ಶೋಭಾಯಾತ್ರೆ ಮತ್ತು ದೇವತೆಗಳ ಮೆರವಣಿಗೆಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.
೩. ಏಕಸದಸ್ಯ ಪೀಠವು ಹಿಂದೂಗಳ ನ್ಯಾಯಯುತ ಬೇಡಿಕೆಗಳ ಕುರಿತು ಸಕಾರಾತ್ಮಕ ವಿಚಾರ ಮಾಡಿತು
ಏಕ ಸದಸ್ಯ ಪೀಠವು ತೀರ್ಪು ನೀಡುವ ಮೊದಲು ಈ ದೇವಸ್ಥಾನಗಳ ಅನೇಕ ದಶಕಗಳ ಪರಂಪರೆಗಳ ವಿಚಾರ ಮಾಡಿತು. ಮೆರವಣಿಗೆಗಳನ್ನು ನಡೆಸುವುದರಲ್ಲಿನ ಅಡಚಣೆಗಳಲ್ಲಿ ಮತಾಂಧರ ಮತಾಂಧತೆಯೇ ಕಾರಣವಾಗಿದೆ ಎಂದು ಅವರ ಗಮನಕ್ಕೆ ಬಂದಿತು. ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ‘ಡಿಸ್ಟ್ರಿಕ್ಟ್ ಮುನ್ಸಿ ಪಾಲಿಟಿ ಎಕ್ಟ ೧೯೨೦ ರ ಅಧ್ಯಯನವನ್ನೂ ಮಾಡಿತು. ಅದರಲ್ಲಿ ಸ್ಪಷ್ಟವಾಗಿ ‘ಗ್ರಾಮದ ಎಲ್ಲ ರಸ್ತೆಗಳು, ಒಳಚರಂಡಿ ಮತ್ತು ಸಣ್ಣ ಜಾಗಗಳು ಸರಕಾರದ ಅಧೀನವಾಗಿದ್ದು, ಅವುಗಳನ್ನು ಎಲ್ಲ ಜಾತಿ ಮತ್ತು ಧರ್ಮದ ಜನರು ಉಪಯೋಗಿಸಬಹುದು. ಧರ್ಮ, ಜಾತಿ ಅಥವಾ ಇತರ ಯಾವುದೇ ನಿರ್ಬಂಧಗಳು ಈ ರಸ್ತೆ, ಪಾದಚಾರಿ ರಸ್ತೆ ಇತ್ಯಾದಿಗಳನ್ನು ಉಪಯೋಗಿಸಲು ಇರುವುದಿಲ್ಲ. ಒಂದು ವೇಳೆ ಈ ರಸ್ತೆಗಳು ಯಾರದ್ದಾದರೂ ವೈಯಕ್ತಿಕ ಅಚರ ಅಥವಾ ಸ್ಥಿರಾಸ್ಥಿಗೆ ತಾಗಿಕೊಂಡಿದ್ದರೂ ಅವುಗಳನ್ನು ಉಪಯೋಗಿಸಲು ನಾಗರಿಕರ ಮೇಲೆ ಯಾವುದೇ ಬಂಧನಗಳು ಇರುವುದಿಲ್ಲ ಎಂದು ಹೇಳಲಾಗಿದೆ. ಇದರೊಂದಿಗೆ ನ್ಯಾಯಾಲಯವು ೨೦೧೨ ರಿಂದ ೨೦೧೫ ರ ಇಸವಿಯ ಕಾಲಾವಧಿಯಲ್ಲಿ ಹಿಂದೂಗಳ ಪರವಾಗಿ ದಾಖಲಿಸಲಾಗಿದ್ದ ಅರ್ಜಿಗಳ ಮೇಲಿನ ತೀರ್ಪುಗಳನ್ನು ಪರಿಶೀಲಿಸಿತು. ಸರಕಾರವು ಪ್ರತಿ ವರ್ಷ ಅನುಮತಿ ನೀಡಿದ್ದರೂ, ಮತಾಂಧರನ್ನು ಸಂತೋಷ ಪಡಿಸಲು ಕೆಲವು ನಿರ್ಬಂಧಗಳನ್ನು ಕೂಡ ಹೇರಿತ್ತು.
೪. ಉತ್ಸವಗಳ ಮೇಲಿನ ನಿರ್ಬಂಧದ ಸಂದರ್ಭದಲ್ಲಿ ಹಿಂದೂ ಮತ್ತು ಮತಾಂಧರ ವಾದ-ಪ್ರತಿವಾದ
ಈ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ಮಾಡಿದ ಪ್ರತಿವಾದದಲ್ಲಿ ಸಂವಿಧಾನದ ಕಲಂ ೨೫ ಮತ್ತು ಕಲಂ ೨೬ ಕ್ಕನುಸಾರ ಪ್ರತಿಯೊಬ್ಬ ನಾಗರಿಕನಿಗೆ ಅವನ ಧಾರ್ಮಿಕ ಉತ್ಸವಗಳನ್ನು ಆಚರಿಸಲು ಮೂಲಭೂತ ಅಧಿಕಾರವಿದೆ. ರಸ್ತೆಗಳು ಸಾರ್ವಜನಿಕ ಉಪಯೋಗಕ್ಕಾಗಿರುತ್ತವೆ ಮತ್ತು ಅವುಗಳನ್ನು ಉಪಯೋಗಿಸುವುದು ಪ್ರತಿಯೊಬ್ಬ ನಾಗರಿಕನ ಅಧಿಕಾರವಾಗಿದೆ. ಆದುದರಿಂದ ಹಬ್ಬ-ಮಹೋತ್ಸವಗಳ ಮೇಲೆ ಈ ರೀತಿ ನಿರ್ಬಂಧಗಳನ್ನು ಹೇರುವುದು ತಪ್ಪಾಗಿದೆ. ಪೊಲೀಸರು ಮತ್ತು ಸರಕಾರಕ್ಕೆ ಅಧಿಕಾರವಿದ್ದರೂ, ನೂರಾರು ವರ್ಷಗಳಿಂದ ನಡೆದು ಬಂದ ದೇವರ ಪರಂಪರಾಗತ ಮೆರವಣಿಗೆಗಳ ಮೇಲೆ ನಿರ್ಬಂಧಗಳನ್ನು ಹಾಕಲಾಗದು. ಅವರು ಕೇವಲ ಮೆರವಣಿಗೆಗಳನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬಹುದು. ಆದುದರಿಂದ ೩ ದಿನಗಳ ಕಾಲ ನಡೆಯುವ ಉತ್ಸವವನ್ನು ೧ ದಿನಕ್ಕೆ ಸೀಮಿತಗೊಳಿಸುವುದು ಮತ್ತು ಮೆರವಣಿಗೆಯ ಮೇಲೆ ನಿರ್ಬಂಧ ಹೇರುವುದು ನಮಗೆ (ಕೋರ್ಟಿಗೆ) ಒಪ್ಪಿಗೆಯಿಲ್ಲ. ಮತಾಂಧರು ಅಲ್ಲಿ ತಮ್ಮ ಸಮಾಜದ ದೊಡ್ಡ ವಸತಿಯಿದೆ, ಹಿಂದೂಗಳು ಕೈಬೆರಳೆಣಿಕೆಯಷ್ಟು ಜನರೂ ಇಲ್ಲ, ಮೆರವಣಿಗೆ ರಸ್ತೆಯಿಂದ ಹೋದರೆ ಕಾನೂನು-ಸುವ್ಯವಸ್ಥೆಯ ಪ್ರಶ್ನೆಗಳು ಏಳುತ್ತವೆ. ನಮ್ಮ ಪ್ರಾರ್ಥನಾ ಸ್ಥಳಗಳಿರುವ ರಸ್ತೆಯಿಂದ ಮೆರವಣಿಗೆಗಳನ್ನು ತೆಗೆಯಬಾರದು ಎಂದು ವಾದಿಸಿದರು.
೫. ಹಿಂದೂಗಳಿಗೆ ಆನಂದ ಮತ್ತು ಪ್ರೇರಣೆಯನ್ನು ನೀಡುವ ಮದ್ರಾಸ ಉಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು
ಮಹೋತ್ಸವಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳ ಪ್ರಕರಣದಲ್ಲಿ ಹಿಂದೂಗಳು ಮತ್ತು ಮತಾಂಧರು ಅನೇಕ ಬಾರಿ ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದಾರೆ. ಆಗ ಪ್ರತಿ ಸಲವೂ ಉತ್ಸವ ಮತ್ತು ಮೆರವಣಿಗೆಗಳಿಗೆ ಅನುಮತಿಯನ್ನು ನೀಡಲಾಗಿದೆ. ಇಷ್ಟೇ ಅಲ್ಲ, ಕೆಲವು ವರ್ಷಗಳ ನಂತರ ಹಿಂದೂಗಳಿಗೆ ಪೊಲೀಸ ಬಂದೋಬಸ್ತ ಒದಗಿಸುವಂತೆಯೂ ತೀರ್ಪುಗಳನ್ನು ನೀಡಲಾಗಿದೆ. ಆ ತೀರ್ಪುಗಳನ್ನು ಕೂಡ ಮದ್ರಾಸ ಉಚ್ಚ ನ್ಯಾಯಾಲಯವು ಈ ತೀರ್ಪು ನೀಡುವಾಗ ಎತ್ತಿ ಹಿಡಿಯಿತು. ಇದರಲ್ಲಿ ನ್ಯಾಯಾಲಯದ ಟಿಪ್ಪಣಿ ಬಹಳ ಮಹತ್ವದ್ದಾಗಿದೆ. ನ್ಯಾಯಾಲಯವು, ನಾಳೆ ಮೆರವಣಿಗೆಗಳನ್ನು, ಹಬ್ಬ-ಉತ್ಸವಗಳನ್ನು ಜನಸಂಖ್ಯೆಯ ಆಧಾರದಲ್ಲಿ ನಿರ್ಧರಿಸಿದರೆ, ಇದುವೇ ಭಾರತಾದ್ಯಂತ ಇನ್ನಿತರ ಸ್ಥಳಗಳಲ್ಲಿಯೂ ಪ್ರಾರಂಭವಾಗಬಹುದು ಮತ್ತು ಇದರಿಂದ ಗಲಭೆಗಳೂ ಆಗಬಹುದು. ಇದರಿಂದ ಪ್ರಗತಿಪರರು, ಸರ್ವಧರ್ಮ ಸಮಭಾವದವರು, ಮತಾಂಧರ ಸನ್ಮಾನ ಎಂದು ಒಡಕುಂಟು ಮಾಡಬಹುದು. ಇದೇ ಕಾರಣದಿಂದ ಇತರ ಧರ್ಮದವರ (ಹಿಂದೂ) ಮದುವೆಯ ಮೆರವಣಿಗೆಗಳು ಮತ್ತು ಅಂತಿಮ ಯಾತ್ರೆಗಳ ಮೇಲೆಯೂ ನಿರ್ಬಂಧ ಹೇರುವಂತೆ ಮನವಿಗಳೂ ಬರಬಹುದು. ‘ಅನೇಕ ಧರ್ಮ, ಭಾಷೆ ಮತ್ತು ಪ್ರಾಂತಗಳಿರುವ ದೇಶವೆಂದು ಭಾರತ ಗುರುತಿಸಲ್ಪಡುತ್ತದೆ. ಅದಕ್ಕೆ ಬಿರುಕುಂಟಾಗ ಬಹುದು ಮತ್ತು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಮೂಲಭೂತ ಅಧಿಕಾರಗಳ ಕೊಲೆಯಾಗಬಹುದು. ನ್ಯಾಯಾಲಯವು ಈ ದೇವಸ್ಥಾನಗಳ ಉತ್ಸವ ಮತ್ತು ಮೆರವಣಿಗೆಗಳ ಪರಂಪರೆ ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ. ಮತಾಂಧರ ಜನಸಂಖ್ಯೆ ನಿರ್ದಿಷ್ಟ ಕಾಲದ ಬಳಿಕ ಹೆಚ್ಚಾಗಿದೆ ಎಂದು ಮೆರವಣಿಗೆಯ ಮೇಲೆ ನಿರ್ಬಂಧ ಹೇರುವುದು ಮತ್ತು ಸಮಯವನ್ನು ಸೀಮಿತಗೊಳಿಸುವುದು ತಪ್ಪಾಗಿದೆ. ಮುಂದುವರಿದು, ಸರ್ವಧರ್ಮೀಯ, ಎಲ್ಲ ಜಾತಿ, ಎಲ್ಲ ಭಾಷೆಗಳನ್ನು ಮಾತನಾಡುವವರನ್ನು ಗೌರವಿಸುವುದು ಅನೇಕ ಶತಕಗಳ ನಮ್ಮ ಪರಂಪರೆಯಾಗಿದೆ. ಕೇವಲ ಒಂದು ಜಾತಿ-ಧರ್ಮದ ಜನರು ಯಾವುದಾದರೂ ಗ್ರಾಮದಲ್ಲಿ ಬಹುಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಮತ್ತೊಂದು ಧರ್ಮದವರ ಅಥವಾ ಜಾತಿಯ ಉತ್ಸವ-ಹಬ್ಬಗಳನ್ನು ವಿರೋಧಿಸುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿತು.
೬. ಹಿಂದೂಗಳು ಸಂಘಟಿತರಾಗದಿದ್ದರೆ ಅವರನ್ನು ಒಂದು ದಿನ ಈ ದೇಶದಿಂದಲೇ ಓಡಿಸಬಹುದು.
ವಿ ಕಲಾಥುರದಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದರು, ಹೀಗಿರುವಾಗ ಅವರಿಗೆ ಹಿಂದೂಗಳ ಹಬ್ಬ-ಉತ್ಸವಗಳು ಹೇಗೆ ಇಷ್ಟವಾಗುವವು ? ಅವರ ಮನಸ್ಸಿನಲ್ಲಿ ಹಿಂದೂದ್ವೇಷ ತುಂಬಿ ತುಳುಕುವುದರಿಂದ ಅವರು ಹಿಂದೂಗಳ ಉತ್ಸವ ಮತ್ತು ಮೆರವಣಿಗೆಗಳನ್ನು ವಿರೋಧಿಸಿದರು; ಆದರೆ ಮಾನ್ಯ ನ್ಯಾಯಾಲಯವು ಹಿಂದೂಗಳಿಗೆ ನ್ಯಾಯ ನೀಡಿತು. ಇಷ್ಟೊಂದು ದೊಡ್ಡ ಐತಿಹಾಸಿಕ ತೀರ್ಪು ನೀಡಿದ ಬಳಿಕವೂ ಅದನ್ನು ಸಾಮಾಜಿಕ ಮಾಧ್ಯಮಗಳು ಪರಿಗಣಿಸಲಿಲ್ಲ, ಪ್ರಸಾರ ಮಾಧ್ಯಮಗಳೂ ಈ ವಿಷಯದ ಮೇಲೆ ಚರ್ಚೆ-ಸಂವಾದಗಳನ್ನು ನಡೆಸಲಿಲ್ಲ. ಮತಾಂಧರ ಈ ಕೃತಿಯನ್ನು ಯಾರೂ ‘ಅಸಹಿಷ್ಣು ಎಂದು ಹೇಳಲಿಲ್ಲ. ಒಂದು ಇಡುಗಂಟು ಮತಪೆಟ್ಟಿಗೆಯ ಆಸೆಯಿಂದ ಮತಾಂಧರನ್ನು ಓಲೈಸುವ ಆಡಳಿತದಾರರಿಂದಂತೂ ಏನನ್ನೂ ಅಪೇಕ್ಷಿಸಲು ಸಾಧ್ಯವಿಲ್ಲ; ಆದರೆ, ಇಲ್ಲಿ ಪ್ರಖರವಾಗಿ ಗಮನಕ್ಕೆ ಬರುವುದೇನೆಂದರೆ, ಹಿಂದೂ ಸಂಘಟನೆಗೆ ಮತ್ತು ಅವರ ಒಗ್ಗಟ್ಟಿಗೆ ಪರ್ಯಾಯವಿಲ್ಲ. ಇಲ್ಲವಾದರೆ ದೇಶದ ಎಲ್ಲ ಭಾಗಗಳಲ್ಲಿಯೂ ಕಾಶ್ಮೀರದಂತಹ ಸ್ಥಿತಿ ಉದ್ಭವಿಸಬಹುದು ಮತ್ತೊಂದು ದಿನ ಹಿಂದೂಗಳನ್ನು ಈ ದೇಶದಿಂದಲೇ ಓಡಿಸಬಹುದು.
೭. ಹಿಂದೂ ಮತ್ತು ಧರ್ಮಾಭಿಮಾನಿ ನ್ಯಾಯವಾದಿಗಳ ಪ್ರಭಾವಿ ಸಂಘಟನೆಯ ಆವಶ್ಯಕತೆ !
ದೇಶದಲ್ಲಿ ಹಿಂದೂಗಳ ಗಣೇಶೋತ್ಸವ, ರಾಮನವಮಿ, ಹನುಮಾನ ಜಯಂತಿಗಳನ್ನು ಆಚರಿಸಲಾಗುತ್ತದೆ. ಇಂತಹ ಪ್ರತಿ ಹಬ್ಬ-ಉತ್ಸವಗಳಲ್ಲಿ ಮತಾಂಧರಿಂದ ವಿರೋಧ ವ್ಯಕ್ತವಾಗುತ್ತದೆ. ಬಂಗಾಲ ಮತ್ತು ದಕ್ಷಿಣದ ಅನೇಕ ರಾಜ್ಯಗಳಲ್ಲಿ ಈ ಸ್ಥಿತಿ ಇದಕ್ಕಿಂತಲೂ ಭಯಾನಕವಾಗಿದೆ. ಅಲ್ಲಿನ ಆಡಳಿತದಾರರೇ (ಸರಕಾರ) ಹಿಂದೂಗಳ ಹಬ್ಬ-ಉತ್ಸವಗಳನ್ನು ಬಲವಾಗಿ ವಿರೋಧಿಸುತ್ತಾರೆ. ಇದರರಿಂದ ಅನೇಕ ಹಿಂದೂಗಳಿಗೆ ಅವರ ಹಬ್ಬ-ಉತ್ಸವಗಳನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ತೀರ್ಪು ಮತ್ತು ಸರ್ವೋಚ್ಚ ನ್ಯಾಯಾಲಯದ ಅನೇಕ ತೀರ್ಪುಗಳ ಆಧಾರದಲ್ಲಿ ಹಿಂದೂಗಳು ತಮ್ಮ ನ್ಯಾಯಯುತವಾದ ಹಕ್ಕನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಅವರು ನ್ಯಾಯಾಲಯದಲ್ಲಿ ದೃಢ ನಿಶ್ಚಯದಿಂದ ಅರ್ಜಿಗಳನ್ನು ಸಲ್ಲಿಸಬೇಕು. ಆದರೆ ಇದಕ್ಕಾಗಿ ಪ್ರಭಾವಿ ಹಿಂದೂ ಸಂಘಟನೆಯೊಂದಿಗೆ ಇಂತಹ ಪ್ರಕರಣಗಳಲ್ಲಿ ತಮ್ಮ ಕರ್ತವ್ಯವೆಂದು ಜೀವವನ್ನು ಪಣಕ್ಕೊಡ್ಡಿ ಕಾರ್ಯವನ್ನು ಮಾಡುವ ಧರ್ಮಾಭಿಮಾನಿ ನ್ಯಾಯವಾದಿಗಳ ಸಂಘಟನೆಯೂ ಆವಶ್ಯಕವಾಗಿದೆ.
– (ಪೂ) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ (೨೦.೫.೨೦೨೧)
ವಿ. ಕಲಾಥುರನನ ಹಿಂದೂಗಳು ೯ ವರ್ಷಗಳವರೆಗೆ ತಾಳ್ಮೆಯಿಂದ, ಹೋರಾಡಿ ನ್ಯಾಯವನ್ನು ಪಡೆದುಕೊಂಡಿರುವುದು, ಸಮಸ್ತ ಹಿಂದೂಗಳಿಗೆ ಪ್ರೇರಣಾದಾಯಕವಾಗಿದೆ !ಈ ತೀರ್ಪನ್ನು ನಾವು ನ್ಯಾಯವಾದಿಗಳು ಮತ್ತು ಹಿಂದೂಗಳು ಸ್ವಾಗತಿಸುತ್ತೇವೆ. ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಚಿದಂಬರಮ್ ದೇವಸ್ಥಾನಗಳ ತೀರ್ಪು ಹಿಂದೂಗಳ ಪರವಾಗಿ ಬಂದ ಬಳಿಕ ಈಗ ವಿ. ಕಲಾಥುರನ ದೇವಸ್ಥಾನದ ತೀರ್ಪು ಹಿಂದೂಗಳ ಪರವಾಗಿ ಬಂದಿದೆ. ಇಂತಹ ಉದಾಹರಣೆಗಳು ಬಹಳ ವಿರಳವಾಗಿವೆ. ಆದುದರಿಂದ ಹಿಂದೂಗಳು ತಮ್ಮ ಸ್ವಧರ್ಮಾಭಿಮಾನವನ್ನು ಜಾಗೃತಗೊಳಿಸಿ, ತಮ್ಮ ದೇವತೆಗಳು ಮತ್ತು ಸಂತರ ಸನ್ಮಾನಕ್ಕಾಗಿ ಹಬ್ಬ-ಮಹೋತ್ಸವಗಳನ್ನು ಆಚರಿಸಲು ಆಗ್ರಹಿಯಾಗಿರಬೇಕು. ವಿ. ಕಲಾಥುರನ ಹಿಂದೂಗಳು ತಮ್ಮ ಉತ್ಸವ ಮತ್ತು ಮೆರವಣಿಗೆಗಳಿಗೆ ವಿರೋಧ ವ್ಯಕ್ತವಾದ ಕೂಡಲೇ ನ್ಯಾಯಾಲಯಕ್ಕೆ ಧಾವಿಸಿದರು ಮತ್ತು ೯ ವರ್ಷಗಳವರೆಗೆ ತಾಳ್ಮೆಯಿಂದ ಹೋರಾಟ ನಡೆಸಿ ನ್ಯಾಯವನ್ನು ಪಡೆದುಕೊಂಡರು. ಇದು ಖಂಡಿತವಾಗಿಯೂ ಆನಂದದ ಮತ್ತು ಪ್ರೇರಣೆಯನ್ನು ನೀಡುವ ವಿಷಯವಾಗಿದೆ. |