ಕೆಲಸದ ಆಮಿಷವೊಡ್ಡಿ ಮತಾಂಧರಿಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಕ್ರಮಕೈಗೊಳ್ಳಲು ಸ್ಥಳೀಯ ಪೊಲೀಸರಿಂದ ನಿರಾಕರಣೆ !

ಹಿಂದೂ ಜಾಗರಣ ವೇದಿಕೆಯಿಂದ ಕ್ರಮ ಕೈಗೊಳ್ಳುವಂತೆ ಆಗ್ರಹ

ಕ್ರಮಕೈಗೊಳ್ಳಲು ನಿರಾಕರಿಸುವ ಪೊಲೀಸರನ್ನು ಅಮಾನತು ಮಾಡಿ ಸೆರೆಮನೆಗೆ ಅಟ್ಟಬೇಕು !

ಬಿಜನೌರ (ಉತ್ತರಪ್ರದೇಶ) – ಇಲ್ಲಿಯ ಹಲ್ದೌರಾದಲ್ಲಿಯ ಸ್ಯೊಹಾರಾ ಗ್ರಾಮದಲ್ಲಿ ವಾಸಿಸುವ ಮಹಿಳೆಯು ಆಕೆಗೆ ಓರ್ವ ಮತಾಂಧ ಯುವಕನು ಕೆಲಸದ ಆಮಿಷವನ್ನೊಡ್ಡಿ ಆತನ ೩ ಸಹಚರರೊಂದೊಗೆ ಕೂಡಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾಳೆ. ಈ ಆರೋಪಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಎಂದೂ ಕೂಡ ಆಕೆಯು ಹೇಳಿದ್ದಾಳೆ. ಹಿಂದೂ ಜಾಗರಣ ವೇದಿಕೆ ಸಂಘಟನೆಯು ಈ ಘಟನೆಯನ್ನು ‘ಲವ್ ಜಿಹಾದ್’ ಎಂದು ಹೇಳಿದೆ. ಆಕೆಯು ಪೊಲೀಸ ಅಧೀಕ್ಷಕರ ಬಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

. ಮಹಿಳೆಯು ಪೊಲೀಸ ಅಧೀಕ್ಷಕರಿಗೆ ನೀಡಿದ ಅರ್ಜಿಯಲ್ಲಿ, ಆಕೆ ಮುಂಬಯಿಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು, ಸಂಚಾರ ನಿಷೇಧ ಇದ್ದರಿಂದ ಕೆಲಸ ನಿಂತು ಹೋಗಿದ್ದರಿಂದ ಆಕೆಗೆ ಅಲ್ಲಿಯ ಕ್ಷೌರದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಿಜನೌರನಲ್ಲಿಯ ಯುವಕನು ಕೆಲಸ ಕೊಡಿಸುವುದಾಗಿ ಆಮಿಷವನ್ನೊಡ್ಡಿ ಆಕೆಯನ್ನು ಬಿಜನೌರಗೆ ಕರೆತಂದರು. ಅಲ್ಲಿ ಆತನು ತನ್ನ ಸಹಚರರೊಂದಿಗೆ ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಮಾಡಿದರು.

೨. ಇನ್ನೊಂದು ಕಡೆ ಸ್ಥಳೀಯ ಪೊಲೀಸ್ ಠಾಣೆಯ ಮುಖ್ಯಸ್ಥರು, ಈ ಘಟನೆ ಮುಂಬಯಿಯಲ್ಲಾಗಿದ್ದು. ಅಲ್ಲಿಂದ ಈ ಯುವಕನು ಆಕೆಯನ್ನು ಬಿಜನೌರಗೆ ಕರೆತಂದರು. ಆದ್ದರಿಂದ ಅಪರಾಧ ಅಲ್ಲಿ ಆಗಿದೆ ಎಂದು ಹೇಳಿದ್ದಾರೆ. (ಅಪರಾಧ ಎಲ್ಲಿ ಆಗಿದ್ದರೂ, ವ್ಯಕ್ತಿಯು ದೇಶದ ಯಾವುದೇ ಪೊಲೀಸ ಠಾಣೆಯಲ್ಲಿ ದೂರನ್ನು ನೊಂದಾಯಿಸಬಹುದು ಈ ರೀತಿಯ ಕಾನೂನು ಇರುವಾಗ ಪೊಲೀಸರು ಈ ರೀತಿಯ ಉತ್ತರ ಹೇಗೆ ನೀಡುತ್ತಾರೆ ? – ಸಂಪಾದಕರು)