ಕನ್ಯಾಕುಮಾರಿ(ತಮಿಳನಾಡು) ಜಿಲ್ಲೆಯಲ್ಲಿ ಅನಧಿಕೃತ ಚರ್ಚ್‍ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಹಿಂದುತ್ವನಿಷ್ಠರ ಬಂಧನ !

ಕೆಲವೇ ಗಂಟೆಗಳಲ್ಲಿ ಬಿಡುಗಡೆ !

ಜಿಲ್ಲೆಯ ೩೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರಿಂದ ೫೦ ಸ್ಥಳಗಳಲ್ಲಿ ‘ರಸ್ತೆತಡೆ’ ಆಂದೋಲನ !

* ಅನಧಿಕೃತ ಚರ್ಚ್ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದುತ್ವನಿಷ್ಠರು ಏಕೆ ಬೇಡಿಕೆ ಮಾಡಬೇಕಾಗುತ್ತದೆ ? ಸರಕಾರ, ಪೊಲೀಸರು ಮತ್ತು ಆಡಳಿತವರ್ಗದವರು ಅದನ್ನು ಸ್ವತಃ ಏಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ ?

* ಚರ್ಚ್ ಅನೇಕ ಭೂಮಿಯನ್ನು ಕಬಳಿಸಿದರೂ ಪ್ರಗತಿ(ಅಧೋಗತಿ)ಪರರು, ಹಿಂದುದ್ವೇಷಿ ಪ್ರಸಾರ ಮಾಧ್ಯಮಗಳು, ಕಮ್ಯುನಿಸ್ಟ, ಕಾಂಗ್ರೆಸಿಗರು ಈ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

* ಡಿಎಮ್‍ಕೆ ಸರಕಾರ ಇರುವ ತಮಿಳುನಾಡಿನಲ್ಲಿ ಅನಧಿಕೃತ ಚರ್ಚ್ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ! ಇದಕ್ಕಾಗಿ ಹಿಂದುತ್ವನಿಷ್ಠರು ನ್ಯಾಯಾಲಯದಲ್ಲಿ ಹೋರಾಡಲು ನ್ಯಾಯಯುತವಾಗಿ ಧ್ವನಿ ಎತ್ತುವುದು ಅಪೇಕ್ಷಿತವಿದೆ !

ಕನ್ಯಾಕುಮಾರಿ (ತಮಿಳುನಾಡು) – ಕನ್ಯಾಕುಮಾರಿ ಜಿಲ್ಲೆಯಲ್ಲಿ ಮಾಥುರ ಎಕ್ವಡಕ್ಟ ಸೇತುವೆಯ ಸಮೀಪ ಅನಧಿಕೃತವಾದ ಚರ್ಚ್‍ನ ವಿರುದ್ಧ ಇತ್ತಿಚೆಗೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರವಾಗಿ ಆಂದೋಲನವನ್ನು ಮಾಡಿದ್ದವು. ಈ ಅನಧಿಕೃತ ಚರ್ಚ್ ಅನ್ನು ತೆಗೆಯುವಂತೆ ಒತ್ತಾಯಿಸಿ ಜಿಲ್ಲೆಯ ೩೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರು ೫೦ ಸ್ಥಳಗಳಲ್ಲಿ ‘ರಸ್ತೆ ತಡೆ’ ಆಂದೋಲನವನ್ನು ಮಾಡಿದರು. ಆಂದೋಲನದ ತೀವ್ರತೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕನ್ಯಾಕುಮಾರಿಯ ಜಿಲ್ಲಾಡಳಿತ ಕಛೇರಿಯ ಮುಂದೆ ನಡೆಸುತ್ತಿದ್ದ ಆಂದೋಲನ ಸ್ಥಳದಿಂದ ಬಿಜೆಪಿಯ ನಾಗರಕಾಯಿಲ್‍ನಲ್ಲಿನ ಶಾಸಕ ಎಮ್. ಆರ್. ಗಾಂಧಿ, ಬಿಜೆಪಿಯ ಜಿಲ್ಲಾಧ್ಯಕ್ಷ ಧರ್ಮರಾಜನೊಂದಿಗೆ ಅನೇಕ ಹಿಂದುತ್ವನಿಷ್ಠರಿಗೆ ಬಂಧಿಸಲಾಯಿತು. ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಆಂದೋಲನದಲ್ಲಿ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದು ಮುನ್ನಾನಿ(ಹಿಂದೂ ಅಗ್ರಸ್ಥಾನ) ಈ ಸಂಘಟನೆಯ ಕಾರ್ಯಕರ್ತರು ಹಾಗೂ ಕೆಲವು ಗ್ರಾಮಸ್ಥರು ಸೇರಿದ್ದರು.

ತಗಡನ್ನು ಹಾಕಿ ಚರ್ಚ್ ಅನ್ನು ಮುಚ್ಚುವ ಆಡಳಿತವರ್ಗದ ಹಾಸ್ಯಾಸ್ಪದ ಉಪಾಯ !

ಹಾಸ್ಯಾಸ್ಪದ ಉಪಾಯವನ್ನು ಮಾಡುವ ಆಡಳಿತ ! ಆಡಳಿತವರ್ಗದವರು ಇಂತಹ ಅನಧಿಕೃತ ಚರ್ಚ್ ಅನ್ನು ಮುಚ್ಚುವುದು, ಅಂದರೆ ತಮ್ಮ ವೈಫಲ್ಯತೆಯನ್ನು ಮುಚ್ಚಿಡುವುದು ಎಂದಾಗುತ್ತದೆ ! ‘ನಾವು ಏನಾದರೂ ಮಾಡುತ್ತೇವೆ’, ಎಂದು ಮೇಲು ಮೇಲಿನ ಉಪಾಯ ಬೇಡವೇ ಬೇಡ, ಬದಲಾಗಿ ಅನಧಿಕೃತ ಚರ್ಚ್ ಅನ್ನು ಕಟ್ಟಿದವರ ಮಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು !

ಹಿಂದುತ್ವನಿಷ್ಠರ ಬಿಡುಗಡೆಯ ನಂತರ ಉಪಜಿಲ್ಲಾಧಿಕಾರಿಯೊಂದಿಗೆ ಅವರ ಸಭೆ ಆಯಿತು. ಈ ಸಮಸ್ಯೆಯ ಮೇಲೆ ಸಾಮರಸ್ಯ ಪರಿಹಾರವನ್ನು ಕಂಡುಕೊಂಡು ಚರ್ಚ್ ಮೇಲೆ ತಗಡನ್ನು ಹಾಕಿ ಮುಚ್ಚುವಂತೆ ಆಡಳಿತದವರು ನಿರ್ಧಾರ ಕೈಗೊಂಡರು.

ಕನ್ಯಾಕುಮಾರಿ ಜಿಲ್ಲೆಯಲ್ಲಿ ನೂರಾರು ಅನಧಿಕೃತ ಚರ್ಚ್‍ಗಳಿವೆ ! – ಹಿಂದುತ್ವನಿಷ್ಠರ ಆರೋಪ

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅನಧಿಕೃತ ಚರ್ಚ್ ನಿರ್ಮಾಣವಾಗುವ ತನಕ ಆಡಳಿತವರ್ಗದವರು ನಿದ್ರೆ ಮಾಡುತ್ತಿದ್ದರೇ ? ಇದಕ್ಕೆ ಕಾರಣಕರ್ತರಾದವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು !

ಹಿಂದುತ್ವನಿಷ್ಠ ಪ್ರತಿಭಟನಾಕಾರರು ಅನಧಿಕೃತ ಚರ್ಚ್ ಬಗ್ಗೆ ಮಾಹಿತಿ ನೀಡುತ್ತಾ, ಹಿಂದೂ ಮತ್ತು ಕ್ರೈಸ್ತರಲ್ಲಿ ಧಾರ್ಮಿಕ ಸಾಮರಸ್ಯವು ಶಾಶ್ವತವಾಗಿರಲು ೧೯೮೨ ರಲ್ಲಿ ಸಲ್ಲಿಸಿದ್ದ ‘ವೇಣುಗೊಪಾಲ ಸಮಿತಿ’ಯ ವರದಿಯನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಅದಕ್ಕನುಸಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಚರ್ಚ್ ಅನ್ನು ನಿಮಿಸಲು ಸಾಧ್ಯವಿಲ್ಲ. ಹೀಗಿದ್ದರೂ, ಕ್ರೈಸ್ತ ಮಿಷನರಿಗಳು ಚಾಣಕ್ಷತನ ತೋರಿ ಒಂದು ಕಟ್ಟಡವನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ ಮತ್ತು ಕಾಲಾಂತರವಾಗಿ ಅದರ ಮೇಲೆ ಕ್ರಾಸ್ ನಿರ್ಮಿಸುತ್ತಾರೆ. ಕೆಲವು ಸಲ ಮಿಷನರಿಗಳು ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಚರ್ಚ್ ಅನ್ನು ನಿರ್ಮಿಸುತ್ತಾರೆ ಮತ್ತು ವಿದ್ಯುತ್ತಿನ ಜೋಡಣೆ ಇಲ್ಲದೇ ವರ್ಷಗಟ್ಟಲೆ ಅದನ್ನು ನಡೆಸುತ್ತಾರೆ. ಮೂಂದೆ ‘ಹಕ್ಕನ್ನು ಸಾಧಿಸಿ’ ಅದನ್ನು ಅಧಿಕೃತವನ್ನಾಗಿ ಮಾಡಿಸಿಕೊಳ್ಳುತ್ತಾರೆ. ಇಂದು ಕನ್ಯಾಕುಮಾರಿ ಜಿಲ್ಲೆಯಲ್ಲಿ ಈ ರೀತಿಯ ನೂರಾರು ಚರ್ಚ್‍ಗಳನ್ನು ನಿರ್ಮಿಸಲಾಗಿದೆ.