ಪುಲವಾಮಾ(ಜಮ್ಮು-ಕಾಶ್ಮೀರ)ದಲ್ಲಿ ಭಯೋತ್ಪಾದಕರಿಂದ ಮಾಜಿ ಪೊಲೀಸ್ ಅಧಿಕಾರಿ ಸಹಿತ ಅವರ ಹೆಂಡತಿ ಮತ್ತು ಮಗಳ ಹತ್ಯೆ

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯು ನಾಶವಾಗಿಲ್ಲ, ಎಂಬುದನ್ನೇ ಭಯೋತ್ಪಾದಕರು ಭಾರತಕ್ಕೆ ತೋರಿಸಿಕೊಡುತ್ತಿದ್ದಾರೆ. ಅದನ್ನು ನಾಶಗೊಳಿಸಲು ಅವರನ್ನು ಸಾಕುತ್ತಿರುವ ಪಾಕ್‍ಅನ್ನು ನಾಶಗೊಳಿಸಿ !

ಪುಲವಾಮಾ(ಜಮ್ಮು-ಕಾಶ್ಮೀರ) – ಜಮ್ಮುವಿನಲ್ಲಿ ಭಾರತೀಯ ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡಿದ ೨೪ ಗಂಟೆಗಳಲ್ಲಿ ಜಿಹಾದಿ ಭಯೋತ್ಪಾದಕರು ಇಲ್ಲಿಯ ಅವಂತಿಪೊರಾ ಪ್ರದೇಶದ ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಫಯ್ಯಾಜ್ ಅಹಮದ್ ಇವರನ್ನು ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರು ಅಹಮದರ ಮನೆಗೆ ನುಗ್ಗಿ ಅವರ ಮತ್ತು ಅವರ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆಯ ನಂತರ ಭದ್ರತಾ ಪಡೆಗಳು ಸಂಪೂರ್ಣ ಪರಿಸರವನ್ನು ಸುತ್ತುವರಿದಿದ್ದು, ಭಯೋತ್ಪಾದಕರನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫಯ್ಯಾಜ್ ಅಹಮದ್ ಇವರ ಮಗ ಸೈನ್ಯದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.