ಅತ್ಯಾಚಾರದ ಆರೋಪಿಯು ಪರಾರಿಯಾಗುತ್ತಿರುವಾಗ ಪೊಲೀಸರು ಗುಂಡುಹಾರಾಟ ಮಾಡಲೇ ಬೇಕಾಗುತ್ತದೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ
ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು.