ಉತ್ತರಪ್ರದೇಶದಲ್ಲಿ ಗೋಹತ್ಯೆ ನಿರ್ಬಂಧ ಇರುವಾಗಲೂ ಗೋಹತ್ಯೆಗಳಾಗಿ ಗೋಮಾಂಸದ ಮಾರಾಟವಾಗುತ್ತದೆ, ಇದು ಪೊಲೀಸರಿಗೆ ಮತ್ತು ಆಡಳಿತಗಾರರಿಗೆ ನಾಚಿಕೆಯ ವಿಷಯವಾಗಿದೆ ! ಭಾರತದ ಯಾವ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಇದೆ, ಅಲ್ಲಿ ಸಾರಾಸಗಟಾಗಿ ಗೋಹತ್ಯೆಯಾಗಿ ಗೋ ಮಾಂಸ ಮಾರಾಟವಾಗುತ್ತದೆ, ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ !
ಮೈನ್‍ಪುರಿ (ಉತ್ತರಪ್ರದೇಶ) – ಇಲ್ಲಿನ ಗ್ರಾಮಸ್ಥರು ಕುರಿ ಕಳ್ಳರನ್ನು ಹುಡುಕುತ್ತಿರುವಾಗ ೨ ದ್ವಿಚಕ್ರವಾಹನದಲ್ಲಿ ಬರುತ್ತಿರುವವರನ್ನು ತಡೆದರು ಆಗ ವಾಹನ ಚಾಲಕರು ವಾಹನವನ್ನು ಬಿಟ್ಟು ಪರಾರಿಯಾದರು. ಈ ದ್ವಿಚಕ್ರವಾಹನದಲ್ಲಿದ್ದ ಗೋಣಿ ಚೀಲದಲ್ಲಿ ಗೋಮಾಂಸ ಇರುವುದು ಕಂಡುಬಂತು. ಈ ಗೋಣಿಯಲ್ಲಿ ಒಂದು ಕ್ವಿಂಟಾಲ್ ಗೋಮಾಂಸ ಇತ್ತು. ಈ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಜಯ ಪ್ರಕಾಶ ಚೌಹಾಣ ಇವರು, ‘ಗ್ರಾಮಸ್ಥರು ದ್ವಿಚಕ್ರ ವಾಹನದ ಯುವಕರನ್ನು ಹಿಡಿದಿದ್ದರು; ಆದರೆ ಪೊಲೀಸರು ಅವರನ್ನು ಬಿಟ್ಟುಬಿಡಲು ಹೇಳಿದರು.’ ಎಂದು ಆರೋಪಿಸಿದರು. ಆದರೆ ಪೊಲೀಸರು ಇದನ್ನು ಅಲ್ಲಗಳೆದರು.(ಹಿಂದೂ ಜಾಗರಣ ವೇದಿಕೆಯು ಮಾಡಿದ ಆರೋಪದ ಬಗ್ಗೆಯೂ ತನಿಖೆ ಆಗಬೇಕು ! – ಸಂಪಾದಕರು)