ಕೊರಗಜ್ಜ ದೇವಸ್ಥಾನವನ್ನು ಅಪವಿತ್ರಗೊಳಿಸುವ ಮತಾಂತರಿತ ಕ್ರೈಸ್ತ ವ್ಯಕ್ತಿ ಬಂಧನ

ವಿವಿಧ ಧರ್ಮದವರ ೧೭ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿರುವುದಾಗಿ ಒಪ್ಪಿದ

ಧಾರ್ಮಿಕ ಸ್ಥಳಗಳನ್ನು ಯಾರು ಅಪವಿತ್ರಗೊಳಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಬಾಯಿ ತೆರೆಯುವರೇ?

ಮಂಗಳೂರು – ಇಲ್ಲಿಯ ಮಾರ್ನೆಮಿಕಟ್ಟೆ ಪ್ರದೇಶದ ಕೊರಗಜ್ಜನ ದೇವಸ್ಥಾನದ ಎದುರು ಉಪಯೋಗಿಸಿರುವ ಗರ್ಭನಿರೋಧಕ ಮತ್ತು ಏಸುವಿನ ಲೇಖನಗಳ ಭಿತ್ತಿಪತ್ರಗಳು ಇಟ್ಟಿರುವ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳು ಮತಾಂತರಿತ ಕ್ರೈಸ್ತ ದೇವದಾಸ ದೇಸಾಯಿ ಈತನನ್ನು ಬಂಧಿಸಿದ್ದಾರೆ. ಆತ ಹುಬ್ಬಳ್ಳಿಯವನಾಗಿದ್ದು ಇನ್ನು ೧೭ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿರುವುದಾಗಿ ಒಪ್ಪಿದ್ದಾನೆ. ದೇವದಾಸನ ತಂದೆ ಜಾನ್ ದೇಸಾಯಿ ಇವರು ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ.

೧. ದೇವದಾಸ, ನಾನು ಅಸ್ವಚ್ಛ ದೇವಸ್ಥಾನಗಳಲ್ಲಿ ಅಸ್ವಚ್ಛ ಪ್ರಸಾದ ಹಾಕುತ್ತಿದ್ದೆ; ಏಕೆಂದರೆ ಬೈಬಲ್ ‘ದೇವರು ಕೆಟ್ಟ ಆತ್ಮಗಳನ್ನು ಈ ಜಗತ್ತಿನಿಂದ ಹೊರತೆಗದಿದೆ ಮತ್ತು ಏನಾದರೂ ಮೋಕ್ಷ ಬೇಕಿದ್ದರೆ ಜನರು ಯೇಸುವಿನ ಪೂಜೆ ಮಾಡಬೇಕು’ ನಾನು ಮಾಡಿದ ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲ’ ಎಂದು ಹೇಳಿದನು.

೨. ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಇವರು ಆರೋಪಿಯು ಮಾನಸಿಕ ಅಸ್ತಿರತೆ ಇರುವ ಸಾಧ್ಯತೆ ನಿರಾಕರಿಸಿದ್ದಾರೆ ಮತ್ತು ಆರೋಪಿ ಮಾಡಿರುವ ತಪ್ಪಿನ ವಿಷಯವಾಗಿ ಮತ್ತು ಸ್ಥಳಗಳ ವಿಷಯವಾಗಿ ನಿಖರವಾದ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಕೊರಗಜ್ಜ ದೇವಸ್ಥಾನವನ್ನು ಅಪವಿತ್ರಗೊಳಿಸುವ ಮತಾಂತರಿತ ಕ್ರೈಸ್ತನ ಮನೆಯ ಮೇಲೆ ಕಲ್ಲು ತೂರಾಟ

ಕೆಲವು ತಿಂಗಳುಗಳಿಂದ ಕೊರಗಜ್ಜನ ಕ್ಷೇತ್ರದಲ್ಲಿ ಕಾಣಿಕೆಯ ಹುಂಡಿಯಲ್ಲಿ ಗರ್ಭನಿರೋಧಕ ಹಾಕಿ ವಿಕೃತಿ ಮೆರೆದ ದೇವದಾಸ್ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.