ಖಜುರಾಹೋ (ಮಧ್ಯಪ್ರದೇಶ) ದಿಂದ ಛತ್ತೀಸಗಢ ಪೊಲೀಸರಿಂದ ಕಾಲೀಚರಣ ಮಹಾರಾಜರ ಬಂಧನ !

ಕಾಂಗ್ರೆಸ್ ಸರಕಾರದ ಪೊಲೀಸರು ಇಷ್ಟೊಂದು ತತ್ಪರತೆ ಮತ್ತು ಕೃತಿಶೀಲತೆಯನ್ನು ರಾಜ್ಯದಲ್ಲಿನ ನಕ್ಸಲವಾದ, ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತ ಮಿಷನರಿಗಳು, ಗೋಹತ್ಯೆ ಮಾಡುವವರು ಮುಂತಾದವರ ವಿರುದ್ಧ ಏಕೆ ತೋರಿಸುವುದಿಲ್ಲ ?

ರಾಯಪುರ (ಛತ್ತೀಸಗಢ) – ಇಲ್ಲಿನ ಧರ್ಮಸಂಸತ್ತಿನಲ್ಲಿ ಮೋಹನದಾಸ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣದಲ್ಲಿ ಛತ್ತೀಸಗಢದ ಪೊಲೀಸರು ಮಧ್ಯಪ್ರದೇಶದ ಖಜುರಾಹೋದಿಂದ ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದಾರೆ. ಅವರ ಮೇಲೆ ದೇಶದ್ರೋಹದ ಆರೋಪವನ್ನು ದಾಖಲಿಸಲಾಗಿದೆ. ರಾಯಪುರದ ಪೊಲೀಸ್ ಅಧೀಕ್ಷಕರಾದ ಪ್ರಶಾಂತ ಅಗ್ರವಾಲರವರು ನೀಡಿದ ಮಾಹಿತಿಗನುಸಾರ ಕಾಲೀಚರಣ ಮಹಾರಾಜರು ಖಜುರಾಹೋದಿಂದ ೨೫ ಕಿ.ಮೀ. ದೂರದಲ್ಲಿರುವ ಬಾಗೇಶ್ವರ ಧಾಮದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಾಯಪುರ ಪೊಲೀಸರು ಮುಂಜಾನೆ ೪ ಗಂಟೆಗೆ ಬಂಧನದ ಕಾರ್ಯಾಚರಣೆಯನ್ನು ಮಾಡಿದರು. ಸಂಜೆಯ ವರೆಗೆ ಪೊಲೀಸರು ಕಾಲೀಚರಣ ಮಹಾರಾಜರೊಂದಿಗೆ ರಾಯಪುರವನ್ನು ತಲುಪಲಿದ್ದರು.

ಕಾಂಗ್ರೆಸ್ ಸರಕಾರದ ಪೊಲೀಸರು ಕಾಲೀಚರಣ ಮಹಾರಾಜರನ್ನು ಬಂಧಿಸಿದ್ದರಿಂದ ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರದ ಆಕ್ರೋಶ

ಅಂತರರಾಜ್ಯ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪ

ಕಾಂಗ್ರೆಸ್ ಸರಕಾರವು ಈ ಪ್ರಕರಣದಲ್ಲಿ ಅಂತರರಾಜ್ಯ ನಿಯಮಗಳ ಉಲ್ಲಂಘನೆ ಮಾಡಿದ್ದರೆ ಇದರಲ್ಲಿ ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಯೋಗ್ಯ ಕಾರ್ಯಾಚರಣೆಯನ್ನು ಮಾಡಬೇಕು !

ಕಾಲೀಚರಣ ಮಹಾರಾಜರನ್ನು ಬಂಧಿಸಿರುವ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಛತ್ತೀಸಗಢದ ಕಾಂಗ್ರೆಸ್ ಸರಕಾರವನ್ನು ಟೀಕಿಸಿದೆ. ಭಾಜಪ ಸರಕಾರವು, ಛತ್ತೀಸಗಡದಲ್ಲಿನ ಕಾಂಗ್ರೆಸ್ ಸರಕಾರವು ಮಧ್ಯಪ್ರದೇಶದ ಪೊಲೀಸರಿಗೆ ತಿಳಿಸದೇ ಕಾಲೀಚರಣ ಮಹಾರಾಜರನ್ನು ಬಂಧಿಸಿ ಅಂತರರಾಜ್ಯ ನಿಯಮಗಳನ್ನು ಉಲ್ಲಂಘಿಸಿದೆ’ಎಂದು ಹೇಳಿದೆ. ಮಧ್ಯಪ್ರದೇಶದ ಪೊಲೀಸ್ ಮಹಾಸಂಚಾಲಕರಿಗೆ ಛತ್ತೀಸಗಡದ ಪೊಲೀಸ್ ಮಹಾಸಂಚಾಲಕರೊಂದಿಗೆ ಸಂವಾದವನ್ನು ನಡೆಸಿ ಬಂಧನದ ಪ್ರಕ್ರಿಯೆಯ ಸಂದರ್ಭದಲ್ಲಿ ನಿಷೇಧವನ್ನು ನೋಂದಾಯಿಸಿ ಸ್ಪಷ್ಟೀಕರಣವನ್ನು ಕೇಳಲು ಹೇಳಲಾಗಿದೆ. ಇನ್ನೊಂದು ಕಡೆ ಛತ್ತೀಸಗಡದ ಮುಖ್ಯಮಂತ್ರಿ ಭೂಪೇನ ಬಘೇಲರವರು ’ಯಾವುದೇ ನಿಯಮಗಳ ಉಲ್ಲಂಘನೆ ಮಾಡದೇ ಕಾರ್ಯಾಚರಣೆಯನ್ನು ಮಾಡಲಾಗಿದೆ. ಮಧ್ಯಪ್ರದೇಶದ ಗೃಹ ಮಂತ್ರಿಗಳಾದ ನರೋತ್ತಮ ಮಿಶ್ರಾರವರು ’ಮ. ಗಾಂಧಿಯವರ ಅವಮಾನ ಮಾಡಿದವರನ್ನು ಬಂಧಿಸಿರುವುದರ ಬಗ್ಗೆ ತಮಗೆ ಆನಂದವಾಗಿದೆಯೇ ಅಥವಾ ದುಃಖವಾಗಿದೆಯೇ ? ಎಂಬುದನ್ನು ಸ್ಪಷ್ಟಪಡಿಸಬೇಕು’, ಎಂದು ಹೇಳಿದ್ದಾರೆ. (`ದೆಹಲಿಯಲ್ಲಿನ ಬಾಟಲಾ ಹೌಸ್ ನಲ್ಲಿನ ಜಿಹಾದಿ ಭಯೋತ್ಪಾದಕರನ್ನು ಹತ್ಯೆಗೈದ ನಂತರ ಕಾಂಗ್ರೆಸ್ಸಿನ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಏಕೆ ಅತ್ತಿದ್ದರು ?’, ಎಂಬುದನ್ನು ಭೂಪೇನ ಬಘೇಲರವರು ಸ್ಪಷ್ಟಪಡಿಸಬೇಕು ! ಜಿಹಾದಿ ಭಯೋತ್ಪಾದಕ ಇಶ್ರತ ಜಾಹಾನಳನ್ನು ಗುಂಡಿನ ಚಕಮಕಿಯಲ್ಲಿ ಹತ್ಯಗೈದಾಗ ಕಾಂಗ್ರೆಸ್ಸಿನವರಿಗೆ ಏಕೆ ದುಃಖವಾಯಿತು ?’ ಎಂಬುದನ್ನೂ ಬಘೇಲರವರು ಹೇಳಬೇಕಿದೆ ! – ಸಂಪಾದಕರು)