ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ ನಝೀರ ಇವರ ಅಭಿಪ್ರಾಯ!
|
ನವ ದೆಹಲಿ – ಕಾನೂನು ವಿದ್ಯಾರ್ಥಿಗಳಿಗೆ ಈಗ ವಸಾಹತುವಾದಿ ನಿಲುವಿನಿಂದ ಹೊರಬರುವ ಆವಶ್ಯಕತೆಯಿದೆ. ಮನು, ಚಾಣಕ್ಯ ಮತ್ತು ಬೃಹಸ್ಪತಿಯವರು ವಿಕಸಿತಗೊಳಿಸಿದ ಪುರಾತನ ಭಾರತೀಯ ನ್ಯಾಯವ್ಯವಸ್ಥೆಯೇ ಭಾರತೀಯರಿಗೆ ಯೋಗ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ ನಝೀರ ಇವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ನ್ಯಾಯಾಧೀಶರ ಮಹಾಸಂಘದ ರಾಷ್ಟ್ರೀಯ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು.
Neglect Of Ancient Indian Legal Giants Like Manu, Kautilya & Adherence To Colonial Legal System Detrimental To Constitutional Goals : Justice Abdul Nazeer
“The need of the hour is the Indianisation of the legal system”, the judge said.https://t.co/FobD1OW7UJ
— Live Law (@LiveLawIndia) December 27, 2021
ನ್ಯಾಯಮೂರ್ತಿ ನಝೀರ ಮುಂದುವರಿಸುತ್ತಾ,
೧. ಯಾವಾಗ ಭಾರತದಲ್ಲಿ ಪಾಶ್ಚಿಮಾತ್ಯ ನ್ಯಾಯಶಾಸ್ತ್ರ ಜಾರಿಗೊಳಿಸಲಾಯಿತೋ, ಆಗ ಕೇವಲ ಆಡಳಿತವರ್ಗಕ್ಕೆ ನ್ಯಾಯ ಲಭಿಸಿತು. ಸಾಮಾನ್ಯ ಮನುಷ್ಯನು ನ್ಯಾಯವನ್ನು ಬೇಡಲು ಸಾಧ್ಯವಿಲ್ಲವಾಗಿದೆ. ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಯಾವುದೇ ವಿಷಯದ ವಿರುದ್ಧ ನ್ಯಾಯವನ್ನು ಕೋರಬಲ್ಲನಾಗಿದ್ದನು.
೨. ನ್ಯಾಯವ್ಯವಸ್ಥೆಯ ಭಾರತೀಯಕರಣಕ್ಕಾಗಿ ಪ್ರಯತ್ನಿಸಬೇಕು. ಈಗ ಆಧುನಿಕ ನ್ಯಾಯಶಾಸ್ತ್ರದ ಸ್ಥಾನದಲ್ಲಿ ಭಾರತದ ಪ್ರಾಚೀನ ನ್ಯಾಯಶಾಸ್ತ್ರದ ಮಂಡಿಸಿರುವ ವಿಚಾರಗಳನ್ನು ಗಮನದಲ್ಲಿಡಬೇಕಾಗಿದೆ. ಕಾನೂನಿನ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆ ಕಡ್ಡಾಯ ವಿಷಯವೆಂದು ಸೇರ್ಪಡೆಗೊಳಿಸಬೇಕು. ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಯಾವುದೇ ವಿಷಯದ ವಿರುದ್ಧ ನ್ಯಾಯವನ್ನು ಕೋರಬಹುದು. ರಾಜನೂ ಕಾನೂನಿನ ರಾಜ್ಯದೆದುರು ತಲೆತಗ್ಗಿಸಬೇಕಾಗಿತ್ತು. ಆಡಳಿತದ ವಿರುದ್ಧವೂ ನ್ಯಾಯವನ್ನು ಕೋರುವ ಅಧಿಕಾರವಿತ್ತು.
೩. ಪಾಶ್ಚಿಮಾತ್ಯ ವಿಚಾರವು ಅಧಿಕಾರಗಳ ವಿಷಯಕ್ಕೆ ಸಂಬಂಧಿಸಿದ್ದರೆ, ಭಾರತೀಯ ವಿಚಾರವು ಜವಾಬ್ದಾರಿಯನ್ನು ಆಧರಿಸಿದೆ.
೪. ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಎಷ್ಟು ಅಧಿಕ ಜವಾಬ್ದಾರಿಯನ್ನು ಸ್ವೀಕರಿಸುತ್ತಾನೆಯೋ, ಅಷ್ಟು ಪ್ರಮಾಣದಲ್ಲಿ ಅವನಿಗೆ ಅಧಿಕಾರ ನೀಡಲಾಗುತ್ತಿತ್ತು. ಹಕ್ಕು ಇದು ಜವಾಬ್ದಾರಿಯನ್ನು ನಿರ್ವಹಿಸುವ ಸಾಧನವಾಗಿತ್ತು.
೫. ಪಾಶ್ಚಿಮಾತ್ಯ ನ್ಯಾಯಶಾಸ್ತ್ರವು ಭಿನ್ನವಾಗಿದೆ. ಪಾಶ್ಚಿಮಾತ್ಯ ನ್ಯಾಯವ್ಯವಸ್ಥೆಯಲ್ಲಿ ಜವಾಬ್ದಾರಿಯ ಮೇಲೆ ಅತ್ಯಲ್ಪ ಒತ್ತು ನೀಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಹಕ್ಕುಗಳಿಗೆ ಪ್ರಾಧಾನ್ಯತೆಯನ್ನು ಕೊಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ನಾಗರಿಕರಿಗೆ ಅವರ ಹಕ್ಕು ಪಡೆಯಲು ಅವರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುವ ಅವಶ್ಯಕತೆಯಿಲ್ಲ. ಇದರಿಂದ ವಿವಾಹದಂತಹ ಸಾಮಾಜಿಕ ಸಂಸ್ಥೆಗಳ ಮೇಲೆ ಮಹತ್ವಪೂರ್ಣ ಪರಿಣಾಮ ಬೀರುತ್ತದೆ.
೬. ಭಾರತೀಯ ನ್ಯಾಯಶಾಸ್ತ್ರಕ್ಕನುಸಾರ ವಿವಾಹವು ಒಂದು ಕರ್ತವ್ಯವೇ ಆಗಿದೆ. ಅನೇಕ ಸಾಮಾಜಿಕ ಕರ್ತವ್ಯಗಳಲ್ಲಿ ವಿವಾಹವೂ ಒಂದು ಕರ್ತವ್ಯವೇ ಆಗಿದೆ ಮತ್ತು ಇದನ್ನು ಪ್ರತಿಯೊಬ್ಬನೂ ನಿರ್ವಹಿಸಬೇಕಾಗುತ್ತದೆ; ಆದರೆ ಪಾಶ್ಚಿಮಾತ್ಯ ನ್ಯಾಯಶಾಸ್ತ್ರದ ಅಧಿಕಾರಗಳ ಪ್ರಭಾವದಿಂದ ವಿವಾಹವನ್ನು ಒಂದು ಒಪ್ಪಂದವೆಂದು ನೋಡಲಾಗುತ್ತದೆ. ಈ ಒಪ್ಪಂದವನ್ನು ಪ್ರತಿಯೊಬ್ಬ ಸಂಗಾತಿಯು ಅವನಿಗೆ ಅಥವಾ ಅವಳಿಗೆ ಸಾಧ್ಯವಿರುವಷ್ಟು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ವಿವಾಹ ವಿಚ್ಛೇದನೆಯ ಅತ್ಯಧಿಕ ಸಂಖ್ಯೆಯು ವಿವಾಹ ಕರ್ತವ್ಯದ ಮಗ್ಗುಲನ್ನು ನಿರ್ಲಕ್ಷಿಸಿರುವುದರ ಪರಿಣಾಮವಾಗಿದೆ.