ಸೋನಭದ್ರ (ಉತ್ತರಪ್ರದೇಶ) ಇಲ್ಲಿಯ ಶಾಲಾಮಕ್ಕಳಿಗೆ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಪ್ರತಿಜ್ಞೆ ನೀಡಲಾಯಿತು

ಸೋನಭದ್ರ (ಉತ್ತರಪ್ರದೇಶ) – ಇಲ್ಲಿಯ ಒಂದು ಶಾಲೆಯಲ್ಲಿ ಅಪ್ರಾಪ್ತ ಮಕ್ಕಳಿಗೆ ನೆಹರು ಪಾರ್ಕಿನಲ್ಲಿ ಭಾರತಕ್ಕೆ ಹಿಂದೂ ರಾಷ್ಟ್ರವನ್ನಾಗಿಸುವ ಬಗ್ಗೆ ಪ್ರತಿಜ್ಞೆ ಮಾಡಿರುವ ವಿಡಿಯೋವನ್ನು ‘ಸುದರ್ಶನ ನ್ಯೂಸ್’ ಈ ರಾಷ್ಟ್ರೀಯ ಹಿಂದಿ ವಾರ್ತಾವಾಹಿನಿಯ ಸಂಪಾದಕ ಶ್ರೀ. ಸುರೇಶ ಚೌಹಾಣಕೆ ಇವರು ಟ್ವೀಟ್ ಮಾಡಿದ್ದಾರೆ.

‘ನಾವು ಪ್ರತಿಜ್ಞೆ ಮಾಡುತ್ತೇವೆ, ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಕೆಲಸ ಮಾಡುವೆವು. ಇದಕ್ಕಾಗಿ ನಾವು ಹೋರಾಡುವೆವು. ಇದಕ್ಕಾಗಿ ನಾವು ನಮ್ಮ ಮೃತ್ಯುವನ್ನು ಸ್ವೀಕರಿಸಿ ಮತ್ತು ಅವಶ್ಯಕತೆ ಅನಿಸಿದರೆ ಇದಕ್ಕಾಗಿ ಹೊಡೆಯುವೆವು. ಯಾವುದೇ ಬಲಿದಾನದ ಅವಶ್ಯಕತೆ ಇದ್ದರೆ ನಾವು ಒಂದು ಕ್ಷಣಕ್ಕಾಗಿಯೂ ಹಿಂದೆ ಸರಿಯುವುದಿಲ್ಲ. ನಮ್ಮ ಪೂರ್ವಜರು, ಶಿಕ್ಷಕ ಮತ್ತು ಭಾರತ ಮಾತೆ ನಮಗೆ ನಮ್ಮ ಪ್ರತಿಜ್ಞೆಯನ್ನು ಪೂರ್ಣ ಮಾಡಲು ಶಕ್ತಿಯನ್ನು ನೀಡಲಿ’, ಹೀಗೆ ಪ್ರತಿಜ್ಞೆ ಮಕ್ಕಳಿಗೆ ನೀಡಲಾಗುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಪ್ರತಿಜ್ಞೆಯ ಕೊನೆಯಲ್ಲಿ ‘ಭಾರತಮಾತಾ ಕೀ ಜಯ’, ‘ವಂದೇ ಮಾತರಂ’ ಮತ್ತು ‘ಜೈ ಹಿಂದ್’ ಈ ರೀತಿಯ ಘೋಷಣೆ ನೀಡಲಾಯಿತು.

ಶ್ರೀ. ಸುರೇಶ ಚೌಹಾಣಕೆ ಇವರು ಈ ಮೊದಲು ೧೯ ಡಿಸೆಂಬರ್ ೨೦೨೧ ರಂದು ಹಿಂದೂ ಯುವ ವಾಹಿನಿ ದೆಹಲಿಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಸ್ವತಃ ಪ್ರತಿಜ್ಞೆ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.