ಕರ್ನಾಟಕ ರಾಜ್ಯದ ದೇವಾಲಯಗಳು ಸರಕಾರಿಕರಣದಿಂದ ಮುಕ್ತಗೊಳಿಸುತ್ತೇವೆ ! -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಘೋಷಣೆ

ಇಂತಹ ನಿರ್ಧಾರ ಕೈಗೊಂಡ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು ! ಹಿಂದೂ ದೇವಾಲಯಗಳು ಭಕ್ತರಿಂದ ನಡೆಯಬೇಕೇ ಹೊರತು ಸರಕಾರದಿಂದಲ್ಲ. ಕರ್ನಾಟಕದ ಭಾಜಪ ಸರಕಾರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಾದರೆ ದೇಶದ ಇತರ ರಾಜ್ಯಗಳಲ್ಲೂ ಇಂತಹ ನಿರ್ಧಾರ ಕೈಗೊಳ್ಳಬೇಕು !

ಬೆಂಗಳೂರು – ರಾಜ್ಯದ ಎಲ್ಲಾ ಸರಕಾರಿಕರಣಗೊಂಡ ದೇವಸ್ಥಾನಗಳನ್ನು ಮುಕ್ತಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಸಂಬಂಧ ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡುತ್ತಾ, ನಮ್ಮ ಹಿರಿಯ ಅಧಿಕಾರಿಗಳು ರಾಜ್ಯದಲ್ಲಿ ಬೇರೆ ಬೇರೆ ಕಾನೂನುಗಳಿಂದಾಗಿ ಇತರ ಧರ್ಮೀಯರ ಧಾರ್ಮಿಕ ಸ್ಥಳಗಳು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಈಗಿನ ಕಾನೂನಿನಿಂದ ದೇವಸ್ಥಾನಗಳ ಅಭಿವೃದ್ಧಿಗೆ ದೇವಸ್ಥಾನದ ಆದಾಯದ ಹಣವನ್ನು ಖರ್ಚು ಮಾಡಲು ಸರಕಾರದಿಂದ ಅನುಮತಿ ಪಡೆಯಬೇಕು. ಇಂತಹ ನಿಯಂತ್ರಣವನ್ನು ರದ್ದು ಪಡಿಸಿ ದೇವಸ್ಥಾನಗಳನ್ನು ಸ್ವತಂತ್ರವಾಗಿ ನಡೆಸಲಾಗುವುದು ಎಂದು ಹೇಳಿದರು.