ಚಿತ್ತೋಡಗಡನಲ್ಲಿ ‘ಲೇಸರ್ ಶೋ’ನಲ್ಲಿ ರಾಣಿ ಪದ್ಮಾವತಿಯ ವಿವಾದಿತ ಪ್ರಸಂಗ ತೋರಿಸಿದ್ದರಿಂದ ಶೋವನ್ನು ನಿಲ್ಲಿಸಿದ ಭಾಜಪದ ಶಾಸಕರು !

(‘ಲೇಸರ್ ಶೋ’ ಅಂದರೆ ಪ್ರಕಾಶ ಕಿರಣಗಳ ಮೂಲಕ ಹಿಂಬದಿಯಲ್ಲಿ ಚಿತ್ರ ಕಥೆ ತೋರಿಸುವುದು)

ಜಯಪೂರ (ರಾಜಸ್ಥಾನ) – ಚಿತ್ತೋಡದ ಭಾಜಪದ ಶಾಸಕ ಚಂದ್ರಪ್ರಕಾಶ ಜೋಶಿ ಇವರು ಚಿತ್ತೋಡಗಡದಲ್ಲಿ ಇತ್ತಿಚೆಗೆ ಆರಂಭಿಸಲಾದ ಲೇಸರ್ ಶೋವನ್ನು ನಿಲ್ಲಿಸಿದ್ದಾರೆ. ಈ ಲೇಸರ್ ಶೋನಲ್ಲಿ ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಇವರ ಸಂದರ್ಭದ ಪ್ರಸಂಗಗಳು ತೋರಿಸಲಾಗಿತ್ತು. ಈ ಪ್ರಸಂಗವು ಮೂಲತಃ ತಪ್ಪಾಗಿದೆ, ಎಂದು ಜೋಶಿಯವರು ಹೇಳುತ್ತಾ ಇದನ್ನು ವಿರೋಧಿಸಿದ್ದರಿಂದ ಲೇಸರ್ ಶೋ ನಿಲ್ಲಿಸಲಾಗಿದೆ. ಜಿಲ್ಲಾಡಳಿತ ‘ಲೇಸರ್ ಶೋ’ದಲ್ಲಿ ಆಕ್ಷೇಪಾರ್ಹ ಇರುವ ಭಾಗ ತೆಗೆದುಹಾಕಲಾಗುವುದು’, ಎಂದು ಭರವಸೆ ನೀಡಿದೆ.

೧೩ ನೇ ಶತಮಾನದಲ್ಲಿ ರಜಪೂತರ ಮೇಲೆ ಆಕ್ರಮಣ ನಡೆಸುವ ಸಿದ್ಧತೆಯಲ್ಲಿದ್ದ ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಮೇವಾಡದಲ್ಲಿ ರಾಜಾ ರತನ ಸಿಂಹ ಇವರನ್ನು ಭೇಟಿಗಾಗಿ ಬಂದಿರುವ ಇತಿಹಾಸವಿದೆ; ಆದರೆ ಆ ಸಮಯದಲ್ಲಿ ರತನ ಸಿಂಹ ಇವರ ಪತ್ನಿ ರಾಣಿ ಪದ್ಮಾವತಿಯ ಸೌಂದರ್ಯದ ಬಗ್ಗೆ ಕೇಳಿ ಅವರನ್ನು ನೋಡುವ ಆಸೆ ಖಿಲ್ಜಿಗೆ ಇತ್ತೆಂಬ ದಂತಕಥೆ ಪ್ರಚಲಿತವಾಗಿದೆ. ಆ ಸಮಯದಲ್ಲಿ ರತನ ಸಿಂಹ ಇವರು ಒಂದು ಕನ್ನಡಿಯಲ್ಲಿ ರಾಣಿ ಪದ್ಮಾವತಿಯನ್ನು ನೋಡುವ ಅವಕಾಶ ಖಿಲ್ಜಿಗೆ ನೀಡಿದ್ದರು ಎಂದು ಈ ಕಥೆಯಲ್ಲಿ ಹೇಳಲಾಗಿದೆ. ಇದೇ ಕಥೆಗೆ ರಾಜಪೂತ ಸಂಘಟನೆ ಮತ್ತು ಭಾಜಪ ಯಾವಾಗಲೂ ವಿರೋಧಿಸುತ್ತದೆ.