ಪಲಕ್ಕಡ (ಕೇರಳ)ದಲ್ಲಿ ಸಂಘ ಸ್ವಯಂಸೇವಕನ ಹತ್ಯೆಗೆ ಸಂಬಂಧಿಸಿದಂತೆ ಪಿಎಫಐ ಮತ್ತು ಎಸಡಿಪಿಐಯ ೪ ಕಾರ್ಯಕರ್ತರ ಬಂಧನ

ಇಲ್ಲಿ ಏಪ್ರಿಲ ೧೬ ರಂದು ರಾಷ್ಟ್ರೀಯ ಸ್ವಯಂ ಸಂಘದ ಸ್ವಯಂಸೇವಕ ಶ್ರೀನಿವಾಸನರವರ ಹತ್ಯೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫಐ) ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ ಇಂಡಿಯಾ(ಎಸಡಿಪಿಐ)ನ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ನಟಿ ಕರಿನಾ ಕಪೂರ ಖಾನರವರನ್ನು ಬರೀ ಹಣೆಯಲ್ಲಿ ಬಿಂದಿಯಿಟ್ಟುಕೊಳ್ಳದೆ ತೋರಿಸಿದ್ದರಿಂದ ಜಾಹೀರಾತನ್ನು ನಿಷೇಧಿಸಿದ ಹಿಂದೂಗಳು !

ಎಮ್.ಪಿ. ಅಹಮದರವರ ಮಾಲೀಕತ್ವದ ‘ಮಲಬಾರ ಗೋಲ್ಡ ಆಂಡ್ ಡಾಯಮೆಂಡ್ಸ’ ಎಂಬ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮಾರಾಟ ಮಾಡುವ ಕಂಪನಿಯು ಅಕ್ಷಯ ತೃತೀಯದ ನಿಮಿತ್ತ ಒಡವೆಗಳ ಜಾಹೀರಾತನ್ನು ಪ್ರಸಾರ ಮಾಡಿದೆ.

‘ಜಾಮಾ ಮಸಿದಿಯಲ್ಲಿ ಜಲಾಭಿಷೇಕ ಮಾಡಲು ಪ್ರಯತ್ನಿಸಿದರೆ, ರಕ್ತಪಾತವಾಗುತ್ತದೆ !’ (ಅಂತೆ)

ಒಂದು ವೇಳೆ ಜಾಮಾ ಮಸೀದಿಯಲ್ಲಿ ಜಲಾಭಿಷೇಕ ಮಾಡಲು ಪ್ರಯತ್ನಿಸಿದರೆ, ಸಾವಿರಾರು ಜನರ ನೆತ್ತರು ಚೆಲ್ಲುವುದಾಗಿ ಸಮಾಜವಾದಿ ಪಕ್ಷದ ಸಂಸದ ಶಫಿಕರ್ರಹಮಾನ ಬರ್ಕ ಬೆದರಿಕೆ ಹಾಕಿದ್ದಾರೆ. ಇಲ್ಲಿನ ಜಾಮಾ ಮಸೀದಿಯಲ್ಲಿ ಮುಂಚೆ ಶಿವನ ದೇವಸ್ಥಾನವಿತ್ತು ಎಂದು ಸ್ಥಳಿಯರು ಹೇಳಿಕೊಳ್ಳುತ್ತಾರೆ.

ಕ್ರೈಸ್ತ ಮಹಿಳೆಯರನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ !

ಚರ್ಚ್‌ನ ಬಿಷಪಗಳು ‘ಜಿಹಾದ’ ಬಗ್ಗೆ ಮಾತೆತ್ತಿದರೇ, ಅವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ದಾಖಲಾಗುತ್ತದೆ. ‘ಲವ್ ಜಿಹಾದ್’ ಬಗ್ಗೆ ಚರ್ಚ್‌ನ ನೇತೃತ್ವದಡಿಯಲ್ಲಿ ಮಾತನಾಡದಿದ್ದರೇ, ಮತ್ತೆ ಯಾರು ಮಾತನಾಡುವರು ? ಕ್ರೈಸ್ತ ಮಹಿಳೆಯರನ್ನು ಮತಾಂತರಗೊಳಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ.

ಅಮೇರಿಕಾ ಕಾಂಗ್ರೆಸ ಸದಸ್ಯರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸವನ್ನು ನಿಶೇಧಿಸಿದ ಭಾರತ

ನವ ದೆಹಲಿ – ಅಮೇರಿಕಾದ ಕಾಂಗ್ರೆಸನ ಮಹಿಳಾ ಸದಸ್ಯರಾದ ಇಲ್ಹನ ಒಮರರವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸ ಕೈಗೊಂಡಿದ್ದು ಭಾರತವು ಅದನ್ನು ನಿಷೇಧಿಸಿದೆ. ‘ಇದರಿಂದ ಒಮರವರ ಸಂಕುಚಿತ ಮಾನಸಿಕತೆ ಕಂಡು ಬರುತ್ತದೆ’, ಎಂದು ಭಾರತವು ಹೇಳಿದೆ. ಭಾರತದ ವಿದೇಶಾಂಗ ಖಾತೆಯ ವಕ್ತಾರರಾದ ಅರಿಂದಮ ಬಾಗಚಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಒಮರರವರ ಪ್ರವಾಸವನ್ನು ಟೀಕಿಸಿದ್ದಾರೆ. On April 21, India condemned the visit of US Congresswoman Ilhan Omar to Pakistan-occupied-Kashmir. Criticizing Omar, MEA spokesperson … Read more

‘ನ್ಯಾಯಾಲಯ ಆಯುಕ್ತ’ರ ನೇಮಕಾತಿಯ ವಿರುದ್ಧ ಅಂಜುಮನ್ ಇಂತಜಾಮಿಯಾ ಕಮಿಟಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಂತಜಾಮಿಯಾ ಕಮಿಟಿಯು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯಲ್ಲಿ ನ್ಯಾಯಾಲಯದ ಆಯುಕ್ತರ ನೇಮಕಾತಿಯನ್ನು ವಿರೋಧಿಸಲಾಗಿತ್ತು.

ಮಂಗಳೂರಿನಲ್ಲಿ ಮಸೀದಿಯ ದುರಸ್ತಿಯ ಸಮಯದಲ್ಲಿ ದೇವಾಲಯದ ಅವಶೇಷಗಳು ಪತ್ತೆ !

ಇಲ್ಲಿನ ಒಂದು ಮಸೀದಿಯ ದುರಸ್ತಿಯ ಸಮಯದಲ್ಲಿ ಮಸೀದಿಯ ಕೆಳಗೆ ಹಿಂದೂ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಮಂಗಳೂರಿನ ಹೊರವಲಯದ ಗಂಜಿಪಠದ ಬಳಿಯ ಮಳಲಿಯಲ್ಲಿನ ಜುಮಾ ಮಸೀದಿಯ ದುರಸ್ತಿಯ ಕೆಲಸ ನಡೆಯುತ್ತಿದೆ. ಆಗ ಅಲ್ಲಿ ಅಗೆಯುತ್ತಿರುವಾಗ ಅವಶೇಷಗಳು ಸಿಕ್ಕಿದೆ.

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮೇಲೆ ಶ್ರೀಕೃಷ್ಣ ದೇವಾಲಯದ ಮೇಲಿರುವ ಧ್ವನಿವರ್ಧಕಗಳ ಸದ್ದನ್ನು ಕಡಿಮೆ ಮಾಡಲಾಗುವುದು !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶ್ರೀಕೃಷ್ಣ ದೇವಾಲಯದ ಮೇಲೆ ಹಾಕಲಾಗುವ ಧ್ವನಿವರ್ಧಕಗಳ ಶಬ್ಧವನ್ನು ಕಡಿಮೆಗೊಳಿಸುವಂತೆ ಸರಕಾರವು ತೀರ್ಮಾನ ತೆಗೆದುಕೊಂಡಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ಧವನ್ನು ನ್ಯೂನ ಮಾಡಲು ಕರೆ ನೀಡಿದ್ದರು.

ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು.

‘ನನಗೆ ರಾಮ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ !’ (ಅಂತೆ)

ತಮಿಳುನಾಡಿನಲ್ಲಿರುವ ಕಾಂಗ್ರೆಸ್ಸಿನ ಮಹಿಳಾ ಶಾಸಕಿಯಾದ ಜ್ಯೋತಿಮಣಿಯವರು ‘ನನಗೆ ಭಗವಾನ ರಾಮನ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ’ ಎಂಬಂತಹ ಹೇಳಿಕೆಯನ್ನು ನೀಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ.