‘ಜಾಮಾ ಮಸಿದಿಯಲ್ಲಿ ಜಲಾಭಿಷೇಕ ಮಾಡಲು ಪ್ರಯತ್ನಿಸಿದರೆ, ರಕ್ತಪಾತವಾಗುತ್ತದೆ !’ (ಅಂತೆ)

ಸಮಾಜವಾದಿ ಪಕ್ಷದ ಸಂಸದ ಶಫಿಕರ್ರಹಮಾನ ಬರ್ಕರಿಂದ ಬೆದರಿಕೆ

ಜಾಮಾ ಮಸೀದಿಯಲ್ಲಿ ಮೊದಲು ಶಿವನ ದೇವಸ್ಥಾನವಿತ್ತು ಎಂಬುದು ಸ್ಥಳಿಯರ ಅಭಿಪ್ರಾಯ !

ಸಂಭಲ (ಉತ್ತರಪ್ರದೇಶ) – ಒಂದು ವೇಳೆ ಜಾಮಾ ಮಸೀದಿಯಲ್ಲಿ ಜಲಾಭಿಷೇಕ ಮಾಡಲು ಪ್ರಯತ್ನಿಸಿದರೆ, ಸಾವಿರಾರು ಜನರ ನೆತ್ತರು ಚೆಲ್ಲುವುದಾಗಿ ಸಮಾಜವಾದಿ ಪಕ್ಷದ ಸಂಸದ ಶಫಿಕರ್ರಹಮಾನ ಬರ್ಕ ಬೆದರಿಕೆ ಹಾಕಿದ್ದಾರೆ. ಇಲ್ಲಿನ ಜಾಮಾ ಮಸೀದಿಯಲ್ಲಿ ಮುಂಚೆ ಶಿವನ ದೇವಸ್ಥಾನವಿತ್ತು ಎಂದು ಸ್ಥಳಿಯರು ಹೇಳಿಕೊಳ್ಳುತ್ತಾರೆ. ಅಲ್ಲಿಗೆ ತೆರಳಿ ಜಲಾಭಿಷೇಕ ಮಾಡಲು ಬೇಡಿಕೆ ಇಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಸದ ಬರ್ಕ ಇವರು ಈ ಮೇಲಿನ ಬೆದರಿಕೆ ಹಾಕಿದ್ದಾರೆ. ಅದೇ ರೀತಿ ಮಸೀದಿಗೆ ಭದ್ರತೆ ನೀಡುವಂತೆ ಅವರು ಒತ್ತಾಯಿಸಿದರು.

ಸಂಪಾದಕೀಯ ನಿಲುವು

  • ಸಂಸದರೊಬ್ಬರು ಇಂತಹ ಬಹಿರಂಗವಾಗಿ ಬೆದರಿಕೆಯನ್ನು ನೀಡುತ್ತಾರೆ ಮತ್ತು ದೇಶದ ಎಲ್ಲಾ ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಮೌನವಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! 
  • ಒಂದು ವೇಳೆ ಜಾಮಾ ಮಸೀದಿಯಲ್ಲಿ ಶಿವನ ದೇವಸ್ಥಾನವಿದೆ ಎಂದು ದಾವೆ ಮಾಡುತ್ತಿದ್ದರೇ, ಪೊಲೀಸ, ಆಡಳಿತ ಮತ್ತು ಪುರಾತತ್ವ ಇಲಾಖೆಯು ಅಲ್ಲಿಗೆ ಹೋಗಿ ಪರಿಶಿಲಿಸುವುದು ಅವಶ್ಯಕವಿದೆ ! 
  • ರಕ್ತಪಾತದ ಬೆದರಿಕೆಯೊಡ್ಡುವ ಬರ್ಕ ಅವರನ್ನು ಜೈಲಿಗೆ ಅಟ್ಟಬೇಕು !