ನಟಿ ಕರಿನಾ ಕಪೂರ ಖಾನರವರನ್ನು ಬರೀ ಹಣೆಯಲ್ಲಿ ಬಿಂದಿಯಿಟ್ಟುಕೊಳ್ಳದೆ ತೋರಿಸಿದ್ದರಿಂದ ಜಾಹೀರಾತನ್ನು ನಿಷೇಧಿಸಿದ ಹಿಂದೂಗಳು !

‘ಮಲಬಾರ ಗೊಲ್ಡ’ನ ಅಕ್ಷಯ ತೃತೀಯ ಜಾಹಿರಾತನ್ನು ವಿರೋಧಿಸಿದ ಹಿಂದೂಗಳು !

ಮುಂಬಯಿ – ಎಮ್.ಪಿ. ಅಹಮದರವರ ಮಾಲೀಕತ್ವದ ‘ಮಲಬಾರ ಗೋಲ್ಡ ಆಂಡ್ ಡಾಯಮೆಂಡ್ಸ’ ಎಂಬ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಮಾರಾಟ ಮಾಡುವ ಕಂಪನಿಯು ಅಕ್ಷಯ ತೃತೀಯದ ನಿಮಿತ್ತ ಒಡವೆಗಳ ಜಾಹೀರಾತನ್ನು ಪ್ರಸಾರ ಮಾಡಿದೆ. ಈ ಜಾಹೀರಾತಿನಲ್ಲಿ ನಟಿ ಕರೀನಾ ಕಪೂರ ಖಾನರವರು ಒಡವೆಗಳನ್ನು ಧರಿಸಿರುವುದನ್ನು ತೋರಿಸಲಾಗಿದೆ; ಆದರೆ ಅವರ ಹಣೆಯಲ್ಲಿ ಕುಂಕುಮವಿಲ್ಲ. ಹಿಂದೂಗಳ ಹಬ್ಬಗಳಿಗಾಗಿ ಒಡವೆಗಳ ಜಾಹೀರಾತು ಮಾಡುವಾಗ ನಟಿ ಕುಂಕುಮವಿಟ್ಟುಕೊಳ್ಳದೆ ಇರುವುದರಿಂದ ‘ಮಲಬಾರ ಗೋಲ್ಡ’ನ ಅಕ್ಷಯ ತೃತೀಯ ಜಾಹೀರಾತನ್ನು ಹಿಂದೂಗಳು ವಿರೋಧಿಸಿದ್ದಾರೆ. (‘ಮುಸಲ್ಮಾನರ ಮಾಲೀಕತ್ವದ ಕಂಪನಿಯು ಈದ ನ ಕಾಲದಲ್ಲಿ ಜಾಹೀರಾತನ್ನು ಪ್ರಸಾರ ಮಾಡುವಾಗ ಮುಸಲ್ಮಾನರ ಉಡಿಗೆ ತೊಡಿಗೆಯ ಬಗ್ಗೆ ಖಂಡಿತವಾಗಿ ವಿಚಾರ ಮಾಡುತ್ತಾರೆ; ಆದರೆ ಅದೇ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಾಹೀರಾತನ್ನು ಪ್ರಸಾರ ಮಾಡುವಾಗ ಹಿಂದೂಗಳ ಉಡಿಗೆ ತೊಡಿಗೆ ಹಾಗೂ ಅವರ ಸಂಸ್ಕೃತಿಯ ವಿಚಾರವನ್ನು ಏಕೆ ಮಾಡುವುದಿಲ್ಲ ?’, ಎಂದು ಹಿಂದೂಗಳು ಈ ಕಂಪನಿಗೆ ವಿಚಾರಿಸಬೇಕು ! – ಸಂಪಾದಕರು)

ಹೆಚ್ಚಿನ ಹಿಂದೂ ಸ್ತ್ರೀಯರು ಹಣೆಯಲ್ಲಿ ಕುಂಕುಮ ಅಥವಾ ಬಿಂದಿಗೆ ಇಟ್ಟುಕೊಳ್ಳುತ್ತಾರೆ. ಹಿಂದೂಗಳ ಹಬ್ಬದ ದಿನದಂದು ಅದಕ್ಕೆ ವಿಶೇಷವಾದ ಮಹತ್ವವಿರುತ್ತದೆ; ಆದರೆ ‘ಮಲಬಾರ ಗೋಲ್ಡ ಆಂಡ್ ಡೈಮೆಂಡ್ಸ’ ಈ ಕಂಪನಿಯು ತನ್ನ ಜಾಹೀರಾತಿನಲ್ಲಿ ನಟಿ ಕರೀನಾ ಕಪೂರ ಖಾನರವರನ್ನು ಬರೀ ಹಣೆಯಲ್ಲಿ ತೋರಿಸಿ ಹಿಂದೂಗಳ ಪರಂಪರೆಯನ್ನು ಘಾಸಿಗೊಳಿಸಲು ಪ್ರಯತ್ನಿಸಿದ್ದಾರೆ. ಇದು ಹಿಂದು ಧರ್ಮದ ಅವಮಾನವಾಗಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ಧರ್ಮಪ್ರೇಮೀ ಹಿಂದೂಗಳು ‘ಮಲಬಾರ ಗೋಲ್ಡ’ಅನ್ನು ಟೀಕಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈ ಮೊದಲು ಕೂಡ ದೀಪಾವಳಿಯಲ್ಲಿ ಅನೇಕ ಕಂಪನಿಗಳು ತಮ್ಮ ಜಾಹೀರಾತಿನಲ್ಲಿ ಮಹಿಳೆಯರನ್ನು ಹಣೆಯಲ್ಲಿ ಕುಂಕುಮವಿಟ್ಟುಕೊಳ್ಳದೆ ತೋರಿಸಿದ್ದರು. ಅನಂತರ ಹಿಂದೂಗಳು ವಿರೋಧಿಸಿದ ಬಳಿಕ ಆ ಜಾಹೀರಾತನ್ನು ಬದಲಾಯಿಸಿ ಮಹಿಳೆಯರು ಕುಂಕುಮವಿಟ್ಟುಕೊಂಡಿರುವುದನ್ನು ತೋರಿಸಲಾಯಿತು. ಜಾಹಿರಾತಿನ ಮಾಧ್ಯಮದಿಂದ ಹಿಂದೂಗಳ ಪರಂಪರೆಗೆ ಘಾಸಿ ಮಾಡುವ ಸಂಚಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !