ಕ್ರೈಸ್ತ ಮಹಿಳೆಯರನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ !

ಕೇಂದ್ರ ಸಚಿವ ವಿ ಮುರಳಿಧರನ್ ಅವರ ಚರ್ಚ್‌ನ ಕಾರ್ಯಕ್ರಮದಲ್ಲಿ ಹೇಳಿಕೆ !

ಕನ್ನೂರು (ಕೇರಳ) – ಚರ್ಚ್‌ನ ಬಿಷಪಗಳು ‘ಜಿಹಾದ’ ಬಗ್ಗೆ ಮಾತೆತ್ತಿದರೇ, ಅವರ ವಿರುದ್ಧ ಅನೇಕ ಕಡೆಗಳಲ್ಲಿ ದೂರು ದಾಖಲಾಗುತ್ತದೆ. ‘ಲವ್ ಜಿಹಾದ್’ ಬಗ್ಗೆ ಚರ್ಚ್‌ನ ನೇತೃತ್ವದಡಿಯಲ್ಲಿ ಮಾತನಾಡದಿದ್ದರೇ, ಮತ್ತೆ ಯಾರು ಮಾತನಾಡುವರು ? ಕ್ರೈಸ್ತ ಮಹಿಳೆಯರನ್ನು ಮತಾಂತರಗೊಳಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಅವರನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿರಿರುವ ಬಗ್ಗೆ ಸಾಕಷ್ಟು ಪುರಾವೆಗಳು ಈ ಮೊದಲು ಬೆಳಕಿಗೆ ಬಂದಿವೆ, ಎಂದು ಕೇಂದ್ರ ಸಚಿವ ವಿ. ಮುರಳಿದರನ್ ಇವರು ಚರ್ಚ್‌ನ ಕಾರ್ಯಕ್ರಮವೊಂದರಲ್ಲಿ ಹೇಳಿದರು. ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚರ್ಚನ ಈ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸುತ್ತಿದೆ’, ಎಂದು ಕೂಡ ಅವರು ಹೇಳಿದರು.

(ಸೌಜನ್ಯ : ANI News)

ಮುರಲಿಧರನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಇಸ್ಲಾಮಿಕ ಭಯೋತ್ಪಾದನೆ ಜಾಗತಿಕ ಮಟ್ಟದಲ್ಲಿ ಕ್ರೈಸ್ತ ಧರ್ಮಕ್ಕೆ ದೊಡ್ಡಹಾನಿ ಮಾಡಿದೆ. ಇರಾಕ, ಸಿರಿಯಾ ಮತ್ತು ಶ್ರೀಲಂಕಾದಲ್ಲಿ ಕ್ರೈಸ್ತ ಧರ್ಮದವರ ಭಾರಿ ರಕ್ತಪಾತ ನಡೆದಿದೆ. ಒಂದೆಡೆ ಪೋಪ ಫ್ರಾನ್ಸಿಸ ಎಲ್ಲರಿಗೂ ಪ್ರೀತಿ ಮತ್ತು ಸ್ನೇಹಕ್ಕಾಗಿ ಕರೆ ನೀಡುತ್ತಿರುವಾಗ, ಇಸ್ಲಾಮಿಕ ಕಟ್ಟರವಾದಿಗಳು ೨೦೧೮ ರಲ್ಲಿ ‘ಈಸ್ಟರ’ (ಕ್ರೈಸ್ತರ ಹಬ್ಬ) ದಿನದಂದು ಶ್ರೀಲಂಕಾದಲ್ಲಿ ಅನೇಕ ಕ್ರೈಸ್ತರನ್ನು ಕೊಂದಿದ್ದರು.

ಸಂಪಾದಕೀಯ ನಿಲುವು

ಕೇರಳದಲ್ಲಿ ಹಲವಾರು ಕ್ರೈಸ್ತ ಯುವತಿಯರನ್ನು ಮತಾಂದರಿಂದ ಲವ್ ಜಿಹಾದ್‌ನಲ್ಲಿ ಸಿಲುಕಿಸಿ ಅವರಲ್ಲಿ ಕೆಲವರು ಜಿಹಾದಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜೊತೆಗೆ ಇಸ್ಲಾಮಿಕ ಸ್ಟೇಟಗೆ ಸೇರ್ಪಡೆಗೊಳ್ಳುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಇದನ್ನು ತಡೆಯಲು ಕೇಂದ್ರ ಸಚಿವರು ಮುಂದಾಗಬೇಕು !