‘ನನಗೆ ರಾಮ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ !’ (ಅಂತೆ)

ತಮಿಳುನಾಡಿನಲ್ಲಿರುವ ಕಾಂಗ್ರೆಸ್ಸಿನ ಮಹಿಳಾ ಶಾಸಕಿ ಜ್ಯೋತಿಮಣಿಯವರ ಹೇಳಿಕೆ !

ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿರುವ ಕಾಂಗ್ರೆಸ್ಸಿನ ಮಹಿಳಾ ಶಾಸಕಿಯಾದ ಜ್ಯೋತಿಮಣಿಯವರು ‘ನನಗೆ ಭಗವಾನ ರಾಮನ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ’ ಎಂಬಂತಹ ಹೇಳಿಕೆಯನ್ನು ನೀಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ. ಇದರಿಂದಾಗಿ ಅವರ ಮೇಲೆ ಟೀಕೆ ಮಾಡಲಾಗುತ್ತಿದೆ.

೧. ಜ್ಯೋತಿಮಣಿಯವರು ಈ ವಿಡಿಯೋದಲ್ಲಿ ಹೀಗೆ ಹೇಳುತ್ತಿದ್ದಾರೆ, ‘ನಾನು ತಮಿಳುನಾಡಿನವಳಾಗಿದ್ದೇನೆ. ನಾವು ಸ್ಥಳೀಯರು ಮತ್ತು ನಾವು ನಮ್ಮ ಪೂರ್ವಜರ ಪರಂಪರೆಯನ್ನು ಪಾಲಿಸುತ್ತೇವೆ. ನೀವು ತಮಿಳುನಾಡಿನಲ್ಲಿ ಯಾರಿಗೆ ಕೇಳಿದರೂ ಅವರು ‘ನಾವು ತಮಿಳುನಾಡಿನಲ್ಲಿ ರಾಮಮಂದಿರವನ್ನು ಎಲ್ಲಿಯೂ ನೋಡಿಲ್ಲ. ನಾವು ದಲಿತರು, ಇತರ ಹಿಂದುಳಿದ ವರ್ಗದವರು, ಆದಿವಾಸಿಗಳು ಹಾಗೂ ಮೂಲನಿವಾಸಿಗಳಾಗಿದ್ದೇವೆ. ನಾವು ನಮ್ಮ ಪೂರ್ವಜರನ್ನು ಪೂಜಿಸುತೇವೆ’ ಎಂದೇ ಹೇಳುತ್ತಾರೆ. ನಾನು ರಾಮಾಯಣ, ಮಹಾಭಾರತಗಳನ್ನು ಓದುತ್ತೇನೆ; ಆದರೆ ಪೂಜೆ ಮಾಡುವಾಗ ಪೂರ್ವಜರ ಪೂಜೆ ಮಾಡುತ್ತೇನೆ.

೨. ಈ ವಿಡಿಯೋದಿಂದಾಗಿ ಅನೇಕರು ಜ್ಯೋತಿಮಣಿಯವರಿಗೆ ತಮಿಳುನಾಡಿನಲ್ಲಿರುವ ಶ್ರೀರಾಮನ ದೇವಸ್ಥಾನವನ್ನು ನೆನಪಿಸಿ ಕೊಡುವಾಗ ಅವುಗಳ ಹೆಸರು ಮತ್ತು ಸ್ಥಳವನ್ನು ಹೇಳಿದ್ದಾರೆ. ಅವುಗಳಲ್ಲಿ ತ್ರೀಚಿ ನಗರದ ಬಳಿ ಇರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ತಿರುವಣ್ಣಾಮಲೈನಲ್ಲಿರುವ ಆದಿ ಶ್ರೀ ರಂಗಮ ದೇವಸ್ಥಾನ, ಪಲ್ಲೀಕೊಂಡಾದಲ್ಲಿರುವ ಶ್ರೀ ರಂಗನಾಥರ ದೇವಸ್ಥಾನ, ಮದುರಂತಗಾಮದಲ್ಲಿರುವ ಎರೀ ಕಥಾ ರಾಮಮಂದಿರ, ರಾಮೇಶ್ವರದಲ್ಲಿನ ರಾಮನಾಥ ಸ್ವಾಮಿ ದೇವಸ್ಥಾನಗಳ ಹೆಸರುಗಳನ್ನು ಹೇಳಲಾಗಿದೆ.

ಸಂಪಾದಕೀಯ ನಿಲುವು

ತಮಿಳುನಾಡಿನಲ್ಲಿ ‘ಶ್ರೀರಾಮನು ಆರ್ಯನಾಗಿದ್ದು ಹೊರಗಿನಿಂದ ಬಂದಿರುವವನು ಹಾಗೂ ತಮಿಳುನಾಡಿನಲ್ಲಿರುವ ಜನರು ಸ್ಥಳೀಯ ದ್ರಾವಿಡರು’ ಎಂಬ ವಿಷವನ್ನು ಕಥಿತ ಸುಧಾರಣಾವಾದಿಗಳು ಕಳೆದ ಅನೇಕ ವರ್ಷಗಳಿಂದ ಇಲ್ಲಿನ ಜನತೆಯ ಮನಸ್ಸಿನಲ್ಲಿ ಬಿತ್ತಿದ್ದಾರೆ. ಇದರಿಂದಾಗಿ ಇಂತಹ ಹೇಳಿಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ ಕಾಂಗ್ರೆಸ್ಸಿನವರು ಹಿಂದೂದ್ವೇಷದಿಂದ ಬಾಧಿತರಾಗಿರುತ್ತಾರೆ. ಆದುದರಿಂದ ಜ್ಯೋತಿಮಣಿಯವರು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ !