Tamil Nadu CM’s Statement : ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ ! – ಸ್ಟಾಲಿನ್, ತಮಿಳನಾಡು ಮುಖ್ಯಮಂತ್ರಿ

ಹುಟ್ಟುಹಬ್ಬದ ನಿಮಿತ್ತ ಸ್ಟಾಲಿನ್ ಇವರ ಘೋಷಣೆ

ಸ್ಟಾಲಿನ್

ಚೆನ್ನೈ(ತಮಿಳುನಾಡು) – ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ ಇವರು ಮಾರ್ಚ 1 ರಂದು ತಮ್ಮ 72ನೇ ಹುಟ್ಟುಹಬ್ಬದ ದಿನದಂದು ‘ಹಿಂದಿ ಭಾಷಾ ಹೇರಿಕೆಯನ್ನು ವಿರೋಧಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’, ಎಂದು ಘೋಷಿಸಿದರು. ದೇಶದ ತ್ರಿಭಾಷಾ ನೀತಿಯನ್ನು ವಿರೋಧಿಸಿ ಅವರು ಈ ಘೋಷಣೆ ಮಾಡಿದರು.

ಸ್ಟಾಲಿನ್ ಮಾತನಾಡುತ್ತಾ, ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡುವ ಹೆಸರಿನಡಿ ತ್ರಿಭಾಷಾ ನೀತಿಯನ್ನು ಜಾರಿಗೊಳಿಸಿದೆ. ನಿಜವಾಗಿಯೂ ಈ ನೀತಿಯೆಂದರೆ ಹಿಂದಿ ಭಾಷಿಕರಲ್ಲದ ರಾಜ್ಯಗಳಲ್ಲಿ ಹಿಂದಿ ಹೇರುವ ಷಡ್ಯಂತ್ರವಾಗಿದೆ. ಪಂಜಾಬ ಮತ್ತು ತೇಲಂಗಾಣ ಇವು ರಾಜ್ಯಭಾಷೆಯನ್ನು ಕಡ್ಡಾಯಗೊಳಿಸಿದ್ದರಿಂದ ಅವುಗಳನ್ನು ಅಭಿನಂದಿಸುತ್ತೇನೆ. ಎರಡೂ ರಾಜ್ಯಗಳು ಕೇಂದ್ರದ ಭಾಜಪ ಸರಕಾರದ ಸುಳ್ಳತನವನ್ನು ಬಹಿರಂಗಪಡಿಸಿದೆ. ಕೇಂದ್ರ ಸರಕಾರವು ಹೊಸ ಶಿಕ್ಷಣ ನೀತಿಯಡಿಯಲ್ಲಿ ತ್ರಿಭಾಷಾ ನೀತಿಯು `ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡಲು’ ಮತ್ತು `ಅದರ ಪ್ರಸಾರ ಮಾಡಲು’ ಜಾರಿಗೊಳಿಸಲಾಗುತ್ತಿದೆಯೆಂದು ಹೇಳಿಕೊಳ್ಳುತ್ತಿದೆ ಎಂದರು.

ಸಂಪಾದಕೀಯ ನಿಲುವು

ರಾಜಕೀಯದ ಹೆಸರಿನಡಿಯಲ್ಲಿ ಭಾಷೆಯ ಆಧಾರದಲ್ಲಿ ದೇಶದಲ್ಲಿ ಪ್ರತ್ಯೇಕತೆಯ ಬೀಜವನ್ನು ಬಿತ್ತುವ ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆಯೆಂದು ಹೇಳಬೇಕು. ರಾಷ್ಟ್ರಹಿತದ ಕೇಂದ್ರ ಸರಕಾರವು ಇಂತಹವರ ಮೇಲೆ ಕ್ರಮ ಕೈಕೊಳ್ಳಲು ಮುಂದಡಿಯಿರುವುದು ಆವಶ್ಯಕವಾಗಿದೆ !