
ಬೆಂಗಳೂರು – ಭಾರತೀಯ ಇತಿಹಾಸದ ಮಹಾನ ಆಡಳಿತಗಾರ ವಿಜಯನಗರದ ಸಾಮ್ರಾಟ ರಾಜ ಕೃಷ್ಣದೇವರಾಯ ಅವರ ಸಮಾಧಿಯನ್ನು ಮಾಂಸ ಮಾರಾಟ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕನ್ನಡ ನಾಡಿನ ಪ್ರಸಿದ್ಧ ರಾಜ, ಅಸಾಮಾನ್ಯ ಆಡಳಿತಗಾರ ಮತ್ತು ಅದ್ವಿತೀಯ ಸೇನಾನಿಯಾಗಿದ್ದ ರಾಜಾ ಕೃಷ್ಣದೇವರಾಯರಿಗೆ ಇದು ಅವಮಾನ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತಿಕ್ರಿಯಿಸಿದ್ದಾರೆ. ಯತ್ನಾಳ ಅವರು ‘ಎಕ್ಸ್’ನಲ್ಲಿ ಮಾಡಿದ ‘ಪೋಸ್ಟ್’ನಲ್ಲಿ, ‘ಹಿಂದೂಗಳ ದೇವಾಲಯಗಳನ್ನು ಕೆಡವಿ ದೇಶದ ಸಂಪತ್ತನ್ನು ಲೂಟಿ ಮಾಡಿದ ಮತ್ತು ಸಾವಿರಾರು ಹಿಂದೂಗಳನ್ನು ಕ್ರೂರವಾಗಿ ಕೊಲೆ ಮಡಿದ ಔರಂಗಜೇಬನ ಸಮಾಧಿಯನ್ನು ಭಾರತೀಯ ಪುರಾತತ್ವ ಇಲಾಖೆಯು ತೆರಿಗೆದಾರರ ಹಣದಿಂದ ರಕ್ಷಿಸುತ್ತಿದೆ. ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಮಹಾಪರಾಕ್ರಮಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳ ಪೋಷಕ ರಾಜ ಕೃಷ್ಣದೇವರಾಯರ ಸಮಾಧಿಯ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯವೇಕೆ? ಇದು ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ. ಮಾಂಸ ಮಾರಾಟ ಮಾಡಿ ಸಮಾಧಿಯ ಪಾವಿತ್ರ್ಯವನ್ನು ಹಾಳು ಮಾಡುತ್ತಿರುವವರನ್ನು ಜಿಲ್ಲಾಡಳಿತವು ತಕ್ಷಣವೇ ಅಲ್ಲಿಂದ ತೆರವುಗೊಳಿಸಬೇಕು. ಹಾಗೆಯೇ ಸರಕಾರವು ತಕ್ಷಣವೇ ಸ್ವಚ್ಛತೆ ಮಾಡಿ ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು’ ಎಂದು ಶಾಸಕ ಯತ್ನಾಳ ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುರಾಜ ಕೃಷ್ಣದೇವರಾಯರ ವಿಜಯನಗರ ಸಾಮ್ರಾಜ್ಯವು ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಕರ್ನಾಟಕದ ಹಾಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಇದರ ಅರಿವು ಮತ್ತು ತಿಳಿವಳಿಕೆ ಇಲ್ಲದಿರುವುದು ಮತ್ತು ರಾಜರ ಸಮಾಧಿಯು ಮಾಂಸ ಮಾರಾಟ ಕೇಂದ್ರವಾಗಿ ಬದಲಾಗಿರುವುದರಲ್ಲಿ ಆಶ್ಚರ್ಯವೇನಲ್ಲ. ಇಂತಹ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ತರಬೇಕು! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !