ಜವಖೇಡೆ ಖಾಲ್ಸಾ (ಅಹಿಲ್ಯಾನಗರ) ಇಲ್ಲಿನ ಕಾನಿಫನಾಥ ದೇವಸ್ಥಾನದ ದತ್ತಿ ಜಾಗದಲ್ಲಿ ಮತಾಂಧರಿಂದ ಭೂಮಿ ಜಿಹಾದ್

ಅತಿಕ್ರಮಣ ತೆರವುಗೊಳಿಸಲು ಗ್ರಾಮಸ್ಥರ ಆಮರಣ ಉಪವಾಸ, ಆಡಳಿತದ ಲಿಖಿತ ಭರವಸೆಯ ನಂತರ ಉಪವಾಸ ಹಿಂಪಡೆದರು!

ದೇವಸ್ಥಾನದ ದತ್ತಿ ಜಾಗದಲ್ಲಿರುವ ಅನಧಿಕೃತ ‘ಹೋಟೆಲ ಸಾವನ’

 

ದೇವಸ್ಥಾನದ ದತ್ತಿ ಜಾಗದಲ್ಲಿರುವ ಅನಧಿಕೃತ ‘ಹೋಟೆಲ ಸಾವನ’

ಪಾಥರ್ಡಿ (ಜಿಲ್ಲಾ ಅಹಿಲ್ಯಾನಗರ) – ಜವಖೇಡೆ ಖಾಲ್ಸಾದ ಕಾನೋಬ ಉರ್ಫ್ ಕಾನಿಫನಾಥ ದೇವಸ್ಥಾನದ ದತ್ತಿ ಜಾಗದಲ್ಲಿ ಶೇಖ್ ಗಣಿಭಾಯಿ, ಶೇಖ್ ಅಬ್ಬಾಸ್ ಸರ್ದಾರ ಬಾಬಾ ಮತ್ತು ಶೇಖ್ ಜಮಾದಾರ ಅವರು ಅನಧಿಕೃತವಾಗಿ ‘ಹೋಟೆಲ ಸಾವನ’ ನಿರ್ಮಿಸಿದ್ದಾರೆ ಮತ್ತು ಈಗಲೂ ಆ ಪ್ರದೇಶದಲ್ಲಿ ಅನಧಿಕೃತ ನಿರ್ಮಾಣ ಕಾರ್ಯ ಮುಂದುವರಿದಿದೆ. ಜನವರಿ 14 ರಂದು ಸ್ಥಳೀಯ ಅಮೋಲ್ ವಾಘ್ ಮತ್ತು ಗ್ರಾಮಸ್ಥರು ಕಂದಾಯ, ಪೊಲೀಸ್ ಹಾಗೂ ಗ್ರಾಮ ಪಂಚಾಯತ್ ಆಡಳಿತಕ್ಕೆ ಮನವಿ ಸಲ್ಲಿಸಿ ಕಟ್ಟಡವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದರು; ಆದರೆ ಆಡಳಿತ ಯಾವುದೇ ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರು ಮಾರ್ಚ್ 4 ರಿಂದ ಪಾಥರ್ಡಿಯ ತಹಶೀಲ್ ಕಚೇರಿಯಲ್ಲಿ ಆಮರಣ ಉಪವಾಸ ಪ್ರಾರಂಭಿಸಿದರು.

ದೇವಸ್ಥಾನದ ದತ್ತಿ ಜಾಗದಲ್ಲಿ ನಡೆಯುತ್ತಿರುವ ಅನಧಿಕೃತ ನಿರ್ಮಾಣ ಕಾಮಗಾರಿ

(ಆಡಳಿತದ ನಿಷ್ಕ್ರಿಯತೆಯಿಂದಾಗಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಬೇಕಾದ ಸ್ಥಿತಿ ಬಂದಿರುವುದು ನಾಚಿಕೆಗೇಡಿನ ಸಂಗತಿ! ಭೂಮಿ ಜಿಹಾದ್ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿರುವ ಗ್ರಾಮಸ್ಥರ ಕಾರ್ಯ ಶ್ಲಾಘನೀಯ! – ಸಂಪಾದಕರು) ಉಪವಾಸ ಸತ್ಯಾಗ್ರಹದ ಮೂರನೇ ದಿನದಂದು, ಅಂದರೆ ಮಾರ್ಚ್ 6 ರಂದು ತಹಶೀಲ್ದಾರರು ಇದನ್ನು ಗಮನಿಸಿ ಸ್ಥಳೀಯ ಸರಪಂಚರು ಮತ್ತು ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಅನಧಿಕೃತ ಕಟ್ಟಡ ನಿರ್ಮಿಸುವವರಿಗೆ ನೋಟಿಸ್ ನೀಡುವಂತೆ ಆದೇಶಿಸಿದರು. ಗ್ರಾಮ ಪಂಚಾಯತಿಯ ನೋಟಿಸ್ ಪ್ರಕಾರ, ಸಂಬಂಧಪಟ್ಟವರು 30 ದಿನಗಳಲ್ಲಿ ಲಿಖಿತ ವಿವರಣೆ ನೀಡಬೇಕು ಅಥವಾ ತಾವಾಗಿ ಕಟ್ಟಡವನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಆಡಳಿತದ ಲಿಖಿತ ಭರವಸೆಯ ನಂತರ ಗ್ರಾಮಸ್ಥರು ಉಪವಾಸವನ್ನು ಹಿಂಪಡೆದರು.

ಆಮರಣ ಉಪವಾಸಕ್ಕೆ ಕುಳಿತ ಗ್ರಾಮಸ್ಥರು

 

ಸಂಪಾದಕೀಯ ನಿಲುವು

ಇಂತಹ ಉಪವಾಸ ಏಕೆ ಮಾಡಬೇಕಾಗುತ್ತದೆ? ಅನಧಿಕೃತ ಹೋಟೆಲ್ ಮತ್ತು ನಿರ್ಮಾಣ ಕಾರ್ಯಗಳು ನಡೆಯುತ್ತಿರುವಾಗ ಆಡಳಿತ ನಿದ್ರಿಸುತ್ತಿತ್ತೇ? ಮತಾಂಧರು ನಡೆಸುತ್ತಿರುವ ಈ ‘ಭೂಮಿ ಜಿಹಾದ್’ ತಡೆಯಲು ದೇಶದಲ್ಲಿ ಕಾನೂನು ಜಾರಿಗೆ ತರುವುದು ಆವಶ್ಯಕವಾಗಿದೆ.