ವಕ್ಫ್ ಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ನರಮೇಧ ಎಂದು ಹೇಳಿ ಗಮನ ಸೆಳೆದರು

ವಾರಾಣಸಿ (ಉತ್ತರಪ್ರದೇಶ) – ವಕ್ಫ್ (ಸುಧಾರಣೆ) ಕಾಯ್ದೆ ೨೦೨೫ರ ವಿರೋಧದ ಹೆಸರಿನಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಹಿಂದೂಗಳ ವಿರುದ್ಧ ನಡೆದ ಹಿಂಸಾಚಾರದಲ್ಲಿ ೩ ಮುಗ್ಧ ಹಿಂದೂಗಳನ್ನು ಹತ್ಯೆ ಮಾಡಲಾಗಿದ್ದು, ೫೦೦ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ವಲಸೆ ಹೋಗಬೇಕಾಗಿದೆ. ಹಿಂದೂಗಳ ಮನೆಗಳು, ಅಂಗಡಿಗಳು ಮತ್ತು ದೇವಾಲಯಗಳನ್ನು ಸುಟ್ಟುಹಾಕಲಾಗಿದೆ. ಈ ಘಟನೆಗಳಿಂದ ವಕ್ಫ್ ಸುಧಾರಣಾ ಕಾಯ್ದೆಯ ಹೆಸರಿನಲ್ಲಿ ಪಶ್ಚಿಮ ಬಂಗಾಳವನ್ನು ‘ಮತ್ತೊಂದು ಕಾಶ್ಮೀರ’ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದೂಗಳನ್ನು ಹತ್ಯೆ ಮಾಡಿ ಆ ಪ್ರದೇಶದಿಂದ ಹೊರಹಾಕಲು ಇದು ಸಂಘಟಿತ ಪ್ರಯತ್ನವಾಗಿದೆ. ಮಮತಾ ಬ್ಯಾನರ್ಜಿ ಸರಕಾರ ಹಿಂಸಾಚಾರವನ್ನು ತಡೆಯುವಲ್ಲಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದ್ದರಿಂದ, ಮುಗ್ಧ ಹಿಂದೂಗಳನ್ನು ರಕ್ಷಿಸಲು ಪಶ್ಚಿಮ ಬಂಗಾಳದಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಮತ್ತು ಕೇಂದ್ರ ಗೃಹ ಸಚಿವರನ್ನು ವಾರಾಣಸಿಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ವಾರಾಣಸಿ ವ್ಯಾಪಾರಿ ಮಂಡಳದ ಅಧ್ಯಕ್ಷ ಅಜಿತ್ ಸಿಂಗ್ ಬಗ್ಗಾ, ಪ್ರಧಾನ ಕಾರ್ಯದರ್ಶಿ ಕವೀಂದ್ರ ಜೈಸ್ವಾಲ್, ಸಹ ಕಾರ್ಯದರ್ಶಿ ಮನೀಶ್ ಗುಪ್ತಾ, ನ್ಯಾಯವಾದಿ ಸಂಜೀವನ ಯಾದವ, ‘ಭಾರತ ವಿಸ್ಡಮ್’ನ ಸಂಸ್ಥಾಪಕ ನ್ಯಾಯವಾದಿ ರಾಜೇಶ ತಿವಾರಿ, ನ್ಯಾಯವಾದಿ ಕಮಲೇಶ ಚಂದ್ರ ತ್ರಿಪಾಠಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನ್ಯಾಯವಾದಿ ರಜನೀಶ ಅಗರ್ವಾಲ್, ವಿಶ್ವ ಹಿಂದೂ ಪರಿಷತ್ತಿನ ನ್ಯಾಯವಾದಿ ಅವನೀಶ್ ರಾಯ, ಹಿಂದೂ ಜನಜಾಗೃತಿ ಸಮಿತಿಯ ರಾಜನ ಕೇಸರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
೨೦೨೧ರ ವಿಧಾನಸಭಾ ಚುನಾವಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಹಿಂದೂ ವಿರೋಧಿ ಹಿಂಸಾಚಾರದಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ನೂರಾರು ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ, ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಮತ್ತು ಸಾವಿರಾರು ಹಿಂದೂ ಕುಟುಂಬಗಳನ್ನು ಭಾಜಪಗೆ ಮತ ಹಾಕಿದ್ದಕ್ಕಾಗಿ ಓಡಿಹೋಗುವಂತೆ ಒತ್ತಾಯಿಸಲಾಗಿದೆ. ಪ್ರತಿ ವರ್ಷ ಹೂಗ್ಲಿ, ಹೌರಾ, ಉತ್ತರ ದಿನಾಜ್‌ಪುರ, ಮಾಲದಾ, ವರ್ಧಮಾನ್ ಮುಂತಾದ ಜಿಲ್ಲೆಗಳಲ್ಲಿ ಶ್ರೀರಾಮನವಮಿ, ಹನುಮಾನ್ ಜಯಂತಿ, ನವರಾತ್ರಿಯಂತಹ ಹಿಂದೂ ಹಬ್ಬಗಳ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳ ಮೇಲೆ ಯೋಜಿತ ದಾಳಿಗಳನ್ನು ನಡೆಸಲಾಗುತ್ತದೆ. ಪರಿಣಾಮವಾಗಿ ಸ್ಥಳೀಯ ಹಿಂದೂ ಸಮುದಾಯ ನಿರಂತರ ಭಯದ ವಾತಾವರಣದಲ್ಲಿ ಬದುಕುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದೇಶದ ಏಕತೆ, ಹಿಂದೂ ಸಮಾಜದ ಅಸ್ತಿತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಅಪಾಯದಲ್ಲಿದೆ. ಕೇಂದ್ರ ಸರಕಾರವು ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ, ಭವಿಷ್ಯದಲ್ಲಿ ಇತರ ರಾಜ್ಯಗಳಲ್ಲಿಯೂ ಇಂತಹ ಭಯಾನಕ ಪರಿಸ್ಥಿತಿ ಉಂಟಾಗಬಹುದು ಎಂದು ಮನವಿಯಲ್ಲಿ ಹೇಳಲಾಗಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !