ಪಹಲ್ಗಾಮ ಭಯೋತ್ಪಾದಕ ದಾಳಿ ಕುರಿತು ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾಪ!

ಲಂಡನ (ಬ್ರಿಟನ) – ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಬ್ರಿಟನ ಸಂಸತ್ತಿನಲ್ಲಿ ಸಿಖ್ ಸಂಸದ ತನಮನಜಿತ ಸಿಂಗ್ ಧೇಸಿ ಮತ್ತು ಬ್ರಿಟಿಷ ಸಂಸದ ಬಾಬ್ ಬ್ಲ್ಯಾಕಮನ್ ಅವರು ಪ್ರಸ್ತಾಪಿಸಿದರು. ಅವರು ಈ ದಾಳಿಯನ್ನು ‘ಹೇಡಿ, ಭಯಾನಕ ಮತ್ತು ಆಘಾತಕಾರಿ ಭಯೋತ್ಪಾದಕ ದಾಳಿ’ ಎಂದು ಕರೆದರು. ಸಂಸತ್ತಿನಲ್ಲಿ ಉಪಸ್ಥಿತರಿದ್ದ ಸದನದ ನಾಯಕರಿಗೆ ಅವರು ಈ ಸಂದರ್ಭದಲ್ಲಿ ಬ್ರಿಟಿಷ್ ಸಂಸತ್ತಿನ ಪರವಾಗಿ ಭಾರತೀಯ ಜನತೆಗೆ ಸಂತಾಪ ಸೂಚಿಸಬೇಕೆಂದು ಮತ್ತು ಈ ಅಮಾನವೀಯ ದಾಳಿಯನ್ನು ತೀವ್ರವಾಗಿ ಖಂಡಿಸಬೇಕೆಂದು ವಿನಂತಿಸಿದರು.
Deeply saddened this week by passing of #PopeFrancis and the callous cowardly terrorist attack on innocent tourists in #JammuKashmir.
Hope perpetrators are swiftly brought to justice and heartfelt condolences to all affected, particularly victims’ families who are in my prayers. pic.twitter.com/r6evMz97ic
— Tanmanjeet Singh Dhesi MP (@TanDhesi) April 24, 2025
ಭಯೋತ್ಪಾದಕ ದಾಳಿಯ ತಪ್ಪಾದ ವರದಿ ಮಾಡುವ ‘ನ್ಯೂಯಾರ್ಕ್ ಟೈಮ್ಸ್’ ಅನ್ನು ಅಮೇರಿಕಾ ಟೀಕಿಸಿದೆ ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯ ವರದಿ ಮಾಡುವಾಗ ‘ನ್ಯೂಯಾರ್ಕ್ ಟೈಮ್ಸ್’ ಇದನ್ನು ‘ಶಸ್ತ್ರಾಸ್ತ್ರ ದಾಳಿ’ ಎಂದು ಕರೆದಿತ್ತು, ಇದಕ್ಕೆ ಅಮೇರಿಕದ ವಿದೇಶಾಂಗ ವ್ಯವಹಾರಗಳ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ. ಸಮಿತಿಯು, ಇದು ನೇರ ಭಯೋತ್ಪಾದಕ ದಾಳಿಯಾಗಿತ್ತು, ನ್ಯೂಯಾರ್ಕ್ ಟೈಮ್ಸ್ ಸತ್ಯದಿಂದ ಬಹಳ ದೂರವಿದೆ’, ಎಂದು ಹೇಳಿದೆ. (‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ಭಾರತ ದ್ವೇಷಿ ಮತ್ತು ಹಿಂದೂದ್ವೇಷಿಯಾಗಿರುವುದರಿಂದ ಅದು ಹೀಗೆ ವರದಿ ಮಾಡುತ್ತದೆ, ಎಂಬುದು ಸ್ಪಷ್ಟವಾಗಿದೆ. ಅದರಲ್ಲಿಯೂ ಅಮೇರಿಕ ಈಗ ಅದನ್ನು ತರಾಟೆಗೆ ತೆಗೆದುಕೊಂಡಿರುವುದು ಅಮೇರಿಕ ಸರಕಾರದಲ್ಲಿ ಬದಲಾವಣೆಯಾಗಿರುವುದು ಉತ್ತಮ ಸಂಕೇತವಾಗಿದೆ! – ಸಂಪಾದಕರು)