(ರಿಯಲ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್ ಅಂದರೆ ಕ್ರೀಡೆಗಳ ಮೂಲಕ ನೇರವಾಗಿ ಹಣ ಹೂಡಿಕೆ ಮಾಡಿ ಸಂಪಾದಿಸುವ ಸಾಧನ)
ಮುಂಬೈ – ‘ರಿಯಲ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್’ಗಳ ಅನಿಯಂತ್ರಿತ ಪ್ರಚಾರವನ್ನು ತಡೆಯಲು ರಾಷ್ಟ್ರೀಯ ನಿಯಂತ್ರಣವನ್ನು ರೂಪಿಸುವುದು ಅಗತ್ಯವಾಗಿದೆ. ಈ ಗೇಮಿಂಗ್ ನಿಂದಾಗಿ ದಾರಿ ತಪ್ಪಿಸುವ ಮತ್ತು ನೈತಿಕತೆಯನ್ನು ಉಲ್ಲಂಘಿಸುವ ಜಾಹೀರಾತುಗಳು, ಆರ್ಥಿಕ ನಷ್ಟ, ವ್ಯಸನ ಸೇರಿದಂತೆ ಜೀವಕ್ಕೆ ಅಪಾಯಕಾರಿಯಾದ ಘಟನೆಗಳು ಸಂಭವಿಸಿವೆ. ಕೇಂದ್ರ ಗೃಹ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯವು ತಕ್ಷಣ ಕ್ರಮ ಕೈಗೊಂಡು ‘ರಿಯಲ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್’ಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಸುರಾಜ್ಯ ಅಭಿಯಾನದ ವತಿಯಿಂದ ಆಗ್ರಹಿಸಲಾಗಿದೆ.
ಸುರಾಜ್ಯ ಅಭಿಯಾನವು ಕೇಂದ್ರ ಗೃಹ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಆನ್‌ಲೈನ್ ಜೂಜಿನ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸಮಸ್ಯೆಯ ಬಗ್ಗೆ ಮುಂದಿನ ಮಾರ್ಗಗಳನ್ನು ಕಂಡುಕೊಳ್ಳಲು ಅಧಿಕಾರಿಗಳು, ಕಾನೂನು ತಜ್ಞರು ಮತ್ತು ಉದ್ಯಮ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಗೃಹ ಸಚಿವಾಲಯವು ರಚಿಸಿರುವುದಕ್ಕೆ ಅಭಿಯಾನವು ಸಂತೋಷ ವ್ಯಕ್ತಪಡಿಸಿದೆ.
ಸುರಾಜ್ಯ ಅಭಿಯಾನದ ಪತ್ರದಲ್ಲಿನ ಇತರ ಅಂಶಗಳು :
1. ‘ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್’ಗಳಿಗೆ ಪರವಾನಗಿ ಪತ್ರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಇರಬೇಕು.
2. ಜಾಹೀರಾತುಗಳಿಗೆ ಸಂಬಂಧಿಸಿ ಕಠಿಣ ನಿಯಮಗಳನ್ನು ರೂಪಿಸಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಬೇಕು.
3. ಜೂಜಿನ ವ್ಯಸನ, ಆರ್ಥಿಕ ನಷ್ಟ ಮತ್ತು ವಂಚನೆಗೊಳಗಾದ ವ್ಯಕ್ತಿಗಳಿಗೆ ಸಹಾಯ ಒದಗಿಸಲು ದೂರು ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಬೇಕು.
4. ಆನ್‌ಲೈನ್ ಜೂಜಿನಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಜೂಜು ಕಾಯ್ದೆ, ಗ್ರಾಹಕ ಸಂರಕ್ಷಣಾ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಳನ್ನು ಪರಿಶೀಲಿಸಿ ಅವುಗಳಲ್ಲಿ ಸುಧಾರಣೆಗಳನ್ನು ತರಬೇಕು. ಈ ಕಾನೂನುಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವಂತಿರಬೇಕು.
5. ಆನ್‌ಲೈನ್ ಜೂಜಿನ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಅಭಿಯಾನವನ್ನು ಪ್ರಾರಂಭಿಸಬೇಕು. ಇದರ ಅಡಿಯಲ್ಲಿ ಜನರಿಗೆ ಜೂಜಿನ ಕಾನೂನು ಮತ್ತು ಆರ್ಥಿಕ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕು.
ಸಂಪಾದಕೀಯ ನಿಲುವುವಾಸ್ತವವಾಗಿ ರಾಷ್ಟ್ರಪ್ರೇಮಿಗಳು ಇಂತಹ ಬೇಡಿಕೆ ಇಡುವ ಪರಿಸ್ಥಿತಿ ಬರಬಾರದು. ಸರ್ಕಾರವೇ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ ! |