ಪ್ರಯಾಗರಾಜ ಕುಂಭಮೇಳ 2025
‘ಸನಾತನ ಪ್ರಭಾತ’ದ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ಫಲಕವನ್ನು ಹಿಂತಿರುಗಿಸಿದರು !
ಪ್ರಯಾಗರಾಜ, ಜನವರಿ 31 (ಸುದ್ದಿ) – ಕುಂಭನಗರದ ಸೆಕ್ಟರ್ 19 ರಲ್ಲಿ ಜನವರಿ 31 ರಂದು ಆಯೋಜಿಸಲಾದ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ಕೆಲವು ಸಾಧಕರು ಫಲಕಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಸಾಧಕರನ್ನು ದೂರ ಹೋಗುವಂತೆ ಹೇಳಿದರು ಮತ್ತು ಫಲಕವನ್ನು ನೋಡಿದ ತಕ್ಷಣ ಅದನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು. ಆ ಸಮಯದಲ್ಲಿ ಅಲ್ಲಿದ್ದ ‘ಸನಾತನ ಪ್ರಭಾತ’ ದ ಪತ್ರಕರ್ತನು ಈ ಬಗ್ಗೆ ವಿಚಾರಿಸಿದಾಗ, ಪೊಲೀಸರು ಅದನ್ನು ಹಿಂತಿರುಗಿಸಿದರು.
1. ರಾತ್ರಿ ಒಂದು ಗಂಟೆಯಿಂದ ಒಂದೂವರೆ ಗಂಟೆ ಸುಮಾರಿಗೆ ಕೆಲವು ಸಾಧಕರು ಈ ಫಲಕವನ್ನು ಹಿಡಿದುಕೊಂಡು ಹೋಗುತ್ತಿದ್ದಾಗ, ಗಸ್ತು ತಿರುಗುತ್ತಿದ್ದ ಪೊಲೀಸರು ಅವರನ್ನು ತಡೆದರು. ಆಗ ಅವರು ಫಲಕವನ್ನು ನೋಡಿ ಅದರ ಮೇಲೆ ಹಿಂದೂ ರಾಷ್ಟ್ರ ಅಧಿವೇಶನದ ಬಗ್ಗೆ ಬರೆದಿದ್ದನ್ನು ಓದಿದಾಗ, ಅವರು ಸಾಧಕರಿಗೆ “ನಿಮಗೆ ಗೊತ್ತಿಲ್ಲವೇ?” ಈ ಶಬ್ದವನ್ನು ನಿಷೇಧಿಸಲಾಗಿದೆಯೆಂದು’, ಹೇಳಿದರು.
2. ಅದಕ್ಕೆ ಸಾಧಕರು ‘ಹಿಂದೂ ರಾಷ್ಟ್ರ’ ಎಂಬ ಶಬ್ದವನ್ನು ನಿಷೇಧಿಸಲಾಗಿದೆಯೇ ?” ಎಂದು ಕೇಳಿದರು. ಇದಕ್ಕೆ ಪೊಲೀಸರು, “ಹಾಗಲ್ಲ, ಆಡಳಿತವು ಕೆಲವು ದಿನಗಳ ಹಿಂದೆ ಮೇಳದ ಪ್ರದೇಶದಲ್ಲಿದ್ದ ಹಿಂದೂ ರಾಷ್ಟ್ರದ ಬಗ್ಗೆ ಇರುವ ಫ್ಲೆಕ್ಸ್ ಬೋರ್ಡ್‌ಗಳನ್ನು ತೆಗೆದುಹಾಕಿದೆ”. ಆದ್ದರಿಂದ, ನೀವು ಈ ಫಲಕವನ್ನು ಹಾಕಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದರು.
3. ತದನಂತರ ಪೊಲೀಸರು, “ನೀವು ಒಂದು ಫಲಕವನ್ನು ಬಿಟ್ಟು ಉಳಿದದ್ದನ್ನು ತೆಗೆದುಕೊಂಡು ಹೋಗಬಹುದು” ಎಂದು ಹೇಳಿದರು.
4. ಸಾಧಕರು ಫಲಕವನ್ನು ಕೇಳಿದಾಗ, ಪೊಲೀಸರು ಅವರಿಗೆ ‘ಪೊಲೀಸ್ ಠಾಣೆಗೆ ಬನ್ನಿ’ ಎಂದು ಹೇಳಿದರು; ಆದರೆ ಪ್ರತ್ಯಕ್ಷದಲ್ಲಿ ಅವರು ವಶಪಡಿಸಿಕೊಂಡ ಫಲಕವನ್ನು ಅಲ್ಲಿಯೇ ಇಟ್ಟಿದ್ದರಿಂದ, ಸಾಧಕರು ಅದನ್ನು ಹಿಂತಿರುಗಿಸುವಂತೆ ಕೇಳಿಕೊಂಡರು. ಅಲ್ಲಿದ್ದ ಪೊಲೀಸ್ ಅಧಿಕಾರಿ, “ನಿಮಗೆ ಇದನ್ನು ಹಚ್ಚಲು ಅನುಮತಿಯಿಲ್ಲ” ಎಂದು ಹೇಳಿದರು.
‘ಸನಾತನ ಪ್ರಭಾತ’ ದ ಪತ್ರಕರ್ತನು ಖಂಡಿಸಿದಾಗ ತಬ್ಬಿಬ್ಬಾದ ಪೊಲೀಸರುಈ ಬಗ್ಗೆ, ಅಲ್ಲಿದ್ದ ‘ಸನಾತನ ಪ್ರಭಾತ’ದ ಪತ್ರಕರ್ತರೊಬ್ಬರು, “ಈ ಶಬ್ದದ ಬಗ್ಗೆ ನಿಮಗೆ ಏನಾದರೂ ಆಕ್ಷೇಪಣೆ ಇದೆಯೇ?” ಎಂದು ಕೇಳಿದರು. ಆಗ ಪೊಲೀಸರು, “ನೀವು ಇದನ್ನು ಹಚ್ಚಲು ಸಾಧ್ಯವಿಲ್ಲ” ಎಂದು ಹೇಳಿದರು. ಅದಕ್ಕೆ ಪತ್ರಕರ್ತನು “ಈ ಫಲಕವನ್ನು ವಶಪಡಿಸಿಕೊಂಡ ಬಗ್ಗೆ ನಾವು ನಿಮ್ಮ ಹೆಸರಿನಲ್ಲಿ ವರದಿಯನ್ನು ಪ್ರಕಟಿಸಿದರೆ, ಅದು ನಿಮಗೆ ಒಪ್ಪಿಗೆಯೇ?” ಎಂದು ಕೇಳಿದರು. ದಯವಿಟ್ಟು ನಿಮ್ಮ ಹೆಸರು ಹೇಳಿರಿ. ಆಗ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಕೈಜೋಡಿಸಿ ದಯವಿಟ್ಟು ಈ ಬಗ್ಗೆ ಯಾವುದೇ ಸುದ್ದಿಯನ್ನು ಪ್ರಕಟಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ನೀವು ಫಲಕವನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು. ನಂತರ ಸಾಧಕರು ಫಲಕ ತೆಗೆದುಕೊಂಡು ಬಂದರು. |
(ಕೆಲವು ದಿನಗಳ ಹಿಂದೆ ಹಿಂದೂ ರಾಷ್ಟ್ರ ಫಲಕವನ್ನು ತೆಗೆದುಹಾಕುವಾಗ ಪೊಲೀಸ್ ಆಡಳಿತವು ಸಮಿತಿಗೆ ಮುಂಚಿತವಾಗಿ ಏಕೆ ಸೂಚನೆ ನೀಡಲಿಲ್ಲ? ಅಥವಾ ಇದಕ್ಕೆ ಕಾರಣವನ್ನೂ ನೀಡಲಿಲ್ಲ. ಮತ್ತೊಮ್ಮೆ ಈ ಫಲಕವನ್ನು ವಿರೋಧಿಸುವ ಮೂಲಕ, ಪೊಲೀಸ್ ಇಲಾಖೆಯಲ್ಲಿನ ಕೆಲವು ಗುಂಪುಗಳ ಹಿಂದೂ ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ತೋರಿಸುವುದಿಲ್ಲವೇ ? ಯೋಗಿ ಆದಿತ್ಯನಾಥರು ಪೊಲೀಸ್ ಮತ್ತು ಇಲಾಖೆಯಲ್ಲಿರುವ ಇಂತಹ ಮನಃಸ್ಥಿತಿಯ ಅಧಿಕಾರಿಗಳಿಗೆ ಮತ್ತು ನೌಕರರಿಗೆ ತಿಳುವಳಿಕೆ ನೀಡಬೇಕು ಎಂದು ಧರ್ಮನಿಷ್ಠ ಹಿಂದೂಗಳು ಅಪೇಕ್ಷಿಸುತ್ತಾರೆ. – ಸಂಪಾದಕರು)
ಸಂಪಾದಕೀಯ ನಿಲುವುಪ್ರಖರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅವರ ಆಡಳಿತದಲ್ಲಿ ಹಿಂದೂ ರಾಷ್ಟ್ರ ವಿರೋಧಿ ಮನಸ್ಥಿತಿ ಹೊಂದಿರುವ ಪೊಲೀಸ್ ಅಧಿಕಾರಿಗಳು ಇರುವುದು ಅಪೇಕ್ಷಿತವಿಲ್ಲ ! |