Bengal Municipal Order : ವಿಶ್ವಕರ್ಮ ಪೂಜೆಗೆ ರಜೆ ಇಲ್ಲ ಆದರೆ ಈದ್ ಗೆ 2 ದಿನ ಹೆಚ್ಚುವರಿ ರಜೆಗೆ ಆದೇಶ; ವಿರೋಧದ ನಂತರ ಹಿಂಪಡೆ

  • ಕೋಲಕತಾ ಮಹಾನಗರ ಪಾಲಿಕೆಯಿಂದ ಶಾಲೆಗಾಳಿಗಾಗಿ ಆದೇಶ ನೀಡಿತ್ತು

  • ಅನಿರೀಕ್ಷಿತವಾಗಿ ನಡೆದ ತಪ್ಪು; ಪಾಲಿಕೆಯಿಂದ ದಾವೆ

ಕೋಲಕತಾ (ಬಂಗಾಲ) – ಕೋಲಕತಾ ಮಹಾನಗರ ಪಾಲಿಕೆಯು ವಿಶ್ವಕರ್ಮ ಪೂಜೆಯ ರಜೆ ರದ್ದುಪಡಿಸಿ ಈದ್ ಗೆ ಎರಡು ದಿನ ರಜೆಯನ್ನು ಹೆಚ್ಚಿಸಿತ್ತು. ಮಹಾನಗರ ಪಾಲಿಕೆಯಿಂದ ಹಿಂದಿ ಮಾಧ್ಯಮದ ಶಾಲೆಗಳಿಗಾಗಿ ಈ ಆದೇಶ ಜಾರಿಗೊಳಿಸಲಾಗಿತ್ತು. ಈ ನಿರ್ಣಯಕ್ಕೆ ಭಾಜಪ ಹಾಗೂ ಸಮಾಜದಿಂದ ಕೂಡ ವಿರೋಧವಾಯಿತು. ಬಳಿಕ ಕೋಲಕತಾ ಮಹಾನಗರ ಪಾಲಿಕೆಯು ಈ ಆದೇಶ ಹಿಂಪಡೆಯಿತು ಮತ್ತು  ಅನಿರೀಕ್ಷಿತವಾಗಿ ನಡೆದಿರುವ ತಪ್ಪೆಂದು ಹೇಳಿತು. ಹಾಗೂ ಈ ಆದೇಶ ನೀಡುವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಾರಣ ನೀಡಿ ನೋಟಿಸ್ ಕೂಡ ವಿಧಿಸಲಾಗಿದೆ. ಜವಾಬ್ದಾರ ಅಧಿಕಾರಿಗಳ ಅನುಮತಿ ಇಲ್ಲದೆ ಈ ಆದೇಶ ಪ್ರಸಾರ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಹೇಳಿದ್ದಾರೆ.

ಆದೇಶದ ಹಿಂದೆ ಕೋಲಕತಾದ ಮಹಾಪೌರ ಮತ್ತು ತೃಣಮೂಲ ಕಾಂಗ್ರೆಸ್ಸಿನ ನಾಯಕ ಫಿರಹಾದ್ ಹಕಿಮ್ ಇವರ ಕೈವಾಡ ! – ಭಾಜಪದ ಆರೋಪ

ಈ ಆದೇಶ ಫೆಬ್ರುವರಿ ೨೫ ರಂದು ಪ್ರಸಾರ ಮಾಡಲಾಯಿತು. ಅದರ ಬಗ್ಗೆ ಕೋಲಕತಾ ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯ ಮುಖ್ಯ ವ್ಯವಸ್ಥಾಪಕರ ಹೆಸರಿನಲ್ಲಿ ಸಹಿ ಮಾಡಲಾಗಿತ್ತು. ಅದರ ನಂತರ ಭಾಜಪದ ನಾಯಕ ಜಗನ್ನಾಥ ಚಟ್ಟೋಪಾಧ್ಯಾಯ ಇವರು, ಶಿಕ್ಷಣ ಇಲಾಖೆಯ ಮುಖ್ಯ ವ್ಯವಸ್ಥಾಪಕರಿಗೆ ಈ ರೀತಿ ನೋಟಿಸ್ ನೀಡುವ ಆದೇಶ ಯಾರು ನೀಡಿದ್ದಾರೆ? ಬಂಗಾಲದ ಯಾವುದೇ ಅಧಿಕಾರಿ ತಾವಾಗಿಯೇ ಈ ಆದೇಶ ನೀಡಲು ಸಾಧ್ಯವಿಲ್ಲ, ಕೋಲಕತಾ ಮಹಾನಗರ ಪಾಲಿಕೆಯ ಆಡಳಿತ ಕೋಲಕತಾ ಮಹಾಪೌರ ಮತ್ತು ತೃಣಮೂಲ ಕಾಂಗ್ರೆಸ್ಸಿನ ನಾಯಕ ಫಿರಹಾದ ಹಕೀಮ ಇವರ ಕೈಯಲ್ಲಿ ಇರುವುದರಿಂದ ಈ ರೀತಿ ನಡೆದಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೋಲಕತಾ ಮಹಾನಗರ ಪಾಲಿಕೆಯಲ್ಲಿ ಹಿಂದೂದ್ರೋಹಿ ತೃಣಮೂಲ ಕಾಂಗ್ರೆಸ್ಸಿನ ಸರಕಾರ ಇರುವುದರಿಂದ ಈ ಆದೇಶ ನೀಡಲಾಗಿತ್ತು, ಇದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ !