ಇದು ಹಿಂದೂಗಳಿಗೆ ಲಜ್ಜಾಸ್ಪದ !

ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.

ಮೃತ್ಯುವಿನ ನಂತರ ನಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಸಂಪತ್ತೆಂದರೆ ಸಾಧನೆ !

ನಿಮ್ಮ ಬಳಿಯಿರುವ ಹಣವನ್ನು ಎಲ್ಲ ಸ್ಥಳಗಳಲ್ಲಿ ಉಪಯೋಗಿಸಲು ಆಗುವುದಿಲ್ಲ. ಅವುಗಳನ್ನು ನಿಮಗೆ ದೇಶಕ್ಕನುಸಾರ ಮತ್ತು ಸ್ಥಳಕ್ಕನುಸಾರ ಬದಲಾಯಿಸಬೇಕಾಗುತ್ತದೆ. ಹಾಗಾದರೆ ಅದೇ ನ್ಯಾಯದಿಂದ ನಿಮಗೆ ನಿಮ್ಮ ಹಣವನ್ನು ಕೊಟ್ಟು ಅದರ ಬದಲು ಮೃತ್ಯುವಿನ ನಂತರ ಬಳಸಬೇಕಾದ ಹಣವನ್ನು ಖರೀದಿಸಬೇಕಾಗುತ್ತದೆ.

ದೇಶವಾಸಿಗಳಲ್ಲಿ ಜಾಗೃತಿ !

‘ನಾವೇನೇ ತೋರಿಸಿದರೂ ಭಾರತೀಯ ಜನತೆ ನಮ್ಮನ್ನು ತಲೆಯ ಮೇಲೆ ಕೂರಿಸುತ್ತದೆ’ ಎಂಬ ತಿಳುವಳಿಕೆಯನ್ನು ಈಗ ಬಾಲಿವುಡ್ ದೂರ ಮಾಡಬೇಕು. ಭಾರತೀಯರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮ ಈಗ ಜಾಗೃತವಾಗುತ್ತಿದೆ.

ಪೂರ್ವಜರಿಂದಾಗುವ ತೊಂದರೆಗಳು ದೂರವಾಗಲು ಪಿತೃಪಕ್ಷದ ಸಮಯದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೧೦ ರಿಂದ ೨೫, ೨೦೨೨) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ |’ ಈ ಜಪವನ್ನು ಕಡಿಮೆ ಪಕ್ಷ ೧ ಗಂಟೆ ಮಾಡಬೇಕು.

ಸೂಕ್ಷ್ಮ ಸ್ತರದಲ್ಲಿ ಅಗಾಧ ಕಾರ್ಯ ಮಾಡುವ ಅದ್ವಿತೀಯ ಕ್ಷಮತೆ ಇರುವ ಏಕಮೇವಾದ್ವಿತೀಯ ಸದ್ಗುರು (ಡಾ.) ಮುಕುಲ ಗಾಡಗೀಳ !

ಸದ್ಗುರು (ಡಾ.) ಮುಕುಲ ಗಾಡಗಿಳ ಅವರು ಕೊರೊನಾ ಮಹಾಮಾರಿಯ ಮೇಲೆಯೂ ನಾಮಜಪವನ್ನು ಶೋಧಿಸಿದ್ದರು. ಅನೇಕರಿಗೆ ಅದರ ಲಾಭವಾಯಿತು. ಸಮಾಜದಲ್ಲಿನ ಜನರಿಗೂ ಈ ನಾಮಜಪದ ಪರಿಣಾಮವಾಗಬೇಕೆಂದು ಈ ನಾಮಜಪವನ್ನು ಧ್ವನಿಮುದ್ರಿಸಿ ಕೊರೊನಾಕ್ಕೆ ಸಂಬಂಧಪಟ್ಟ ಅನೇಕ ಆಸ್ಪತ್ರೆಗಳಲ್ಲಿ ಹಚ್ಚಲಾಗುತ್ತಿತ್ತು.

ಸಾಧಕರಿಗಾಗಿ ಹಗಲು-ರಾತ್ರಿ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯಗಳನ್ನು ಮಾಡುವ ಮತ್ತು ಶ್ರೀ ಗುರುಗಳ ಸಂಜೀವನಿ ದೇವತೆ (ಧನ್ವಂತರಿ ದೇವತೆ) ಯಾಗಿರುವ ಏಕಮೇವಾದ್ವಿತೀಯ ಸದ್ಗುರು ಡಾ. ಮುಕುಲ ಮಾಧವ ಗಾಡಗೀಳ (೫೯ ವರ್ಷ) !

೨೮.೮.೨೦೨೨ (ಭಾದ್ರಪದ ಶುಕ್ಲ ಪ್ರತಿಪದಾ) ರಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರ ಹುಟ್ಟುಹಬ್ಬವಾಯಿತು. ಆ ನಿಮಿತ್ತ…..

ಸದ್ಗುರು ಡಾ. ಮುಕುಲ ಗಾಡಗೀಳ

‘ಫೆಬ್ರವರಿ ೨೦೨೧ ರಿಂದ ನನಗೆ ಶ್ರೀಕೃಷ್ಣನ ಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಪ್ರಸಾದ-ಮಹಾಪ್ರಸಾದ (ಊಟ-ತಿಂಡಿ)ವನ್ನು ಕೊಡುವ ಮತ್ತು ಅವರ ಬಟ್ಟೆಗಳಿಗೆ ಇಸ್ತ್ರಿ ಮಾಡುವ ಸೇವೆ ಸಿಕ್ಕಿದೆ. ಇದರೊಂದಿಗೆ ನಡುವಿನ ಸಮಯದಲ್ಲಿ ನನಗೆ ಅವರ ಕೋಣೆಯ ಸ್ವಚ್ಛತೆ ಮಾಡುವುದು ಮತ್ತು ಇತರ ಕೆಲವು ಸೇವೆಗಳನ್ನು ಮಾಡುವ ಅವಕಾಶ ಸಿಕ್ಕಿದೆ. ಸದ್ಗುರು ಡಾ. ಮುಕುಲ ಗಾಡಗೀಳ ಇವರ ೫೯ ನೇ ಹುಟ್ಟುಹಬ್ಬದ ನಿಮಿತ್ತ ಶ್ರೀಕೃಷ್ಣನ ಕೃಪೆಯಿಂದ ನನ್ನ ಗಮನಕ್ಕೆ ಬಂದ ಅವರ ಗುಣವೈಶಿಷ್ಟ್ಯಗಳು ಮತ್ತು ಅವರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಗುಣವೈಶಿಷ್ಟ್ಯಗಳು

೧ ಅ. ಶಿಸ್ತುಬದ್ಧ : ಸದ್ಗುರು ಕಾಕಾರವರ ಅನೇಕ ವಿಷಯಗಳಲ್ಲಿ ಶಿಸ್ತು ಇರುತ್ತದೆ. ಅವರು ತಮ್ಮ ತೊಳೆದ ಬಟ್ಟೆಗಳನ್ನು ಇಸ್ತ್ರಿ ಮಾಡಿದಂತೆ ಮಡಚಿಡುತ್ತಾರೆ. ಆದುದರಿಂದ ‘ಅವರ ಬಟ್ಟೆಗಳಿಗೆ ಇಸ್ತ್ರಿಯಾಗಿದೆ’, ಎಂದೆನಿಸುತ್ತದೆ. ಅವರ ಕೋಣೆಯಲ್ಲಿ ಅನೇಕ ವಸ್ತುಗಳನ್ನು ಆಯಾ ಜಾಗದಲ್ಲಿಯೇ ಇಟ್ಟಿರುತ್ತಾರೆ. ಆದುದರಿಂದ ಆ ವಸ್ತುಗಳನ್ನು ಹುಡುಕಲು ಸಮಯ ಹೋಗುವುದಿಲ್ಲ.

೧ ಆ. ತಪ್ಪುಗಳ ಬಗ್ಗೆ ಸಂವೇದನಾಶೀಲ : ಓರ್ವ ಸಾಧಕನಿಗೆ ಆಧ್ಯಾತ್ಮಿಕ ತೊಂದರೆಯಿಂದ ಹೊಟ್ಟೆಯಲ್ಲಿ ತುಂಬಾ ನೋವಾಗುತ್ತಿತ್ತು. ಆದುದರಿಂದ ಅವನು ಮುಂಜಾನೆ ೪.೩೦ ಕ್ಕೆ ಸದ್ಗುರು ಕಾಕಾರವರಿಗೆ ಸಂದೇಶವನ್ನು ಕಳುಹಿಸಿದನು. ಆ ಸಮಯದಲ್ಲಿ ಸದ್ಗುರು ಕಾಕಾ ಮಲಗಿದ್ದರು. ಸದ್ಗುರು ಕಾಕಾರವರು ಮುಂಜಾನೆ ೫.೩೦ ಗಂಟೆಗೆ ಎದ್ದು ತಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಿದರು. ಬೆಳಗ್ಗೆ ೬ ಗಂಟೆಗೆ ಆ ಸಾಧಕನ ತೊಂದರೆ ಹೆಚ್ಚಾಗಿರುವುದರಿಂದ ಅವನು ಸದ್ಗುರು ಕಾಕಾರವರಿಗೆ ಸಂಚಾರಿವಾಣಿಕರೆ ಮಾಡಿದನು. ಆ ಸಮಯದಲ್ಲಿ ಸದ್ಗುರು ಕಾಕಾರವರು ಅವರಿಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳಿದರು ಮತ್ತು ಅವರಿಗೆ ೧೫ ನಿಮಿಷಗಳಲ್ಲಿಯೇ ಆರಾಮೆನಿಸತೊಡಗಿತು.

ಸದ್ಗುರು ಕಾಕಾರವರು ಮೇಲಿನ ಪ್ರಸಂಗವನ್ನು ನನಗೆ ಹೇಳುವಾಗ, “ಆ ಸಾಧಕನಿಗೆ ನನ್ನಿಂದ ತುರ್ತಾಗಿ ಸಹಾಯ ಬೇಕಿರುವಾಗ ನಾನು ಅವನಿಗೆ ಸಹಾಯ ಮಾಡಲಿಲ್ಲ. ಇದು ನನ್ನ ದೊಡ್ಡ ತಪ್ಪಾಯಿತು. ನನಗೆ ಗುರುಗಳು ನೀಡಿದ ಜವಾಬ್ದಾರಿಯಲ್ಲಿ ನಾನು ಕಡಿಮೆ ಬಿದ್ದೆನು” ಎಂದು ಹೇಳಿದ ನಂತರ ಅವರ ಕಣ್ಣುಗಳಿಂದ ನೀರು ಬಂದಿತು. ಆ ಸಮಯದಲ್ಲಿ ತಪ್ಪುಗಳ ಬಗ್ಗೆ ಅವರಿಗೆ ಅರಿವಾದ ಖೇದ ಮತ್ತು ಅವರಲ್ಲಿರುವ ಸಂವೇದನಾಶೀಲತೆಯು ನನ್ನ ಗಮನಕ್ಕೆ ಬಂದಿತು.

೧ ಇ. ಸದ್ಗುರು ಕಾಕಾರವರಿಗೆ ಊಟ-ತಿಂಡಿಯ ಬಗ್ಗೆ ಯಾವುದೇ ಬೇಕು-ಬೇಡಗಳು ಇಲ್ಲದಿರುವುದು : ಸದ್ಗುರು ಕಾಕಾರವರ ಊಟ-ತಿಂಡಿಯ ಬಗ್ಗೆ ಯಾವುದೇ ಬೇಕು-ಬೇಡಗಳಿರುವುದಿಲ್ಲ. ಪ್ರಸಾದ-ಮಹಾಪ್ರಸಾದದಲ್ಲಿ (ಊಟ-ತಿಂಡಿಗಳಲ್ಲಿ) ನೀಡಿದ ಪದಾರ್ಥಗಳಲ್ಲಿ ಎಲ್ಲ ಪದಾರ್ಥಗಳನ್ನು ಅವರು ಇಷ್ಟಪಟ್ಟು ತಿನ್ನುತ್ತಾರೆ. ‘ಅವರಿಗೆ ಯಾವುದಾದರೊಂದು ಪದಾರ್ಥವು ಇಷ್ಟವಾಯಿತೆಂದು ಅವರು ಆ ಪದಾರ್ಥವನ್ನು ಹೆಚ್ಚು ತೆಗೆದುಕೊಂಡು ತಿನ್ನುವುದಿಲ್ಲ’,

೧ ಈ. ಆಶ್ರಮದ ಕಾರ್ಯಪದ್ಧತಿಯನ್ನು ಪಾಲಿಸುವುದು : ಸದ್ಗುರು ಕಾಕಾರವರಿಗೆ ಸಿಹಿ ಪದಾರ್ಥಗಳು ಇಷ್ಟವಾಗುತ್ತದೆ. ಆಶ್ರಮದಲ್ಲಿ ಕೆಲವೊಮ್ಮೆ ಸಿಹಿ ಪದಾರ್ಥವಿದ್ದರೆ ‘ಅದನ್ನು ಎಷ್ಟು ತೆಗೆದುಕೊಳ್ಳಬೇಕು ?’, ಎಂಬುದರ ಪ್ರಮಾಣವನ್ನು ಬರೆದಿರುತ್ತಾರೆ. ಕೆಲವೊಮ್ಮೆ ಅವರು ಊಟವನ್ನು ಮಾಡಿರದಿದ್ದರೂ, ಸದ್ಗುರು ಕಾಕಾರವರು ಆ ಪದಾರ್ಥವನ್ನು ಇರುವ ಪ್ರಮಾಣದಷ್ಟೇ ನನಗೆ ತರಲು ಹೇಳುತ್ತಾರೆ.

೨. ಕಲಿಯಲು ಸಿಕ್ಕಿದ ಅಂಶಗಳು

೨ ಅ. ಅತ್ಯಂತ ಕಡಿಮೆ ನಿದ್ರೆಯಾದರೂ ಹಗಲು-ರಾತ್ರಿ ಸಾಧಕರಿಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಉಪಾಯಗಳನ್ನು ಮಾಡುವ ಸದ್ಗುರು ಡಾ. ಮುಕುಲ ಗಾಡಗೀಳ ! : ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳು ತೀವ್ರ ಸ್ವರೂಪದಲ್ಲಿ ಆಗತೊಡಗಿದ ನಂತರ ದಿನವಿಡಿ ಸುಮಾರು ೧೦೦ ಸಾಧಕರು ಸದ್ಗುರು ಗಾಡಗೀಳಕಾಕಾರವರಿಗೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಕೇಳುತ್ತಾರೆ. ‘ಯಾವುದೇ ಸಾಧಕರಿಗೆ ಆಧ್ಯಾತ್ಮಿಕ ಅಥವಾ ಶಾರೀರಿಕ ಸ್ತರದ ತೊಂದರೆಗಳಿರಲಿ, ಸದ್ಗುರು ಕಾಕಾರವರು ಆ ಸಾಧಕರಿಗೆ ‘ಪ್ರಾಣಶಕ್ತಿವಹನ’ ಪದ್ಧತಿಗನುಸಾರ ನಾಮಜಪವನ್ನು ಹುಡುಕಿ ಕೊಡುತ್ತಾರೆ, ಹಾಗೆಯೇ ಆ ನಾಮಜಪವು ಆ ಸಾಧಕನಿಗೆ ಎಷ್ಟು ಗಂಟೆ ಮಾಡಬೇಕು ಮತ್ತು ಯಾವ ನ್ಯಾಸವನ್ನು ಮಾಡಬೇಕು’, ಎಂಬುದನ್ನೂ ಹೇಳುತ್ತಾರೆ. ಕೆಲವೊಮ್ಮೆ ಕೆಲವು ಸಾಧಕರಿಗೆ ಶಾರೀರಿಕ ತೊಂದರೆ ಆಗುತ್ತಿರುತ್ತದೆ. ಆ ಸಮಯದಲ್ಲಿ ಸದ್ಗುರು ಕಾಕಾರವರು ಸ್ವತಃ ಆ ಸಾಧಕರಿಗಾಗಿ ಅನೇಕ ಗಂಟೆಗಳವರೆಗೆ ನಾಮಜಪ ಮುಂತಾದ ಉಪಾಯಗಳನ್ನು ಮಾಡುತ್ತಾರೆ. ಸದ್ಗುರು ಕಾಕಾರವರು ಸಾಧಕರಿಗಾಗಿ ಉಪಾಯಗಳನ್ನು ಮಾಡುವಾಗ ಹಸಿವು-ಬಾಯಾರಿಕೆ ಎಲ್ಲವನ್ನು ಮರೆಯುತ್ತಾರೆ. ಹಗಲಿರಲಿ ರಾತ್ರಿಯಾಗಿರಲಿ, ಸದ್ಗುರು ಕಾಕಾರವರಿಗೆ ಸಮಯದ ಅರಿವೇ ಇರುವುದಿಲ್ಲ. ಸದ್ಗುರು ಕಾಕಾರವರು ಕೆಲವೊಮ್ಮೆ ರಾತ್ರಿ ೧ ಗಂಟೆಗೆ ಮಲಗಿದರು ಸಹ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಯಾದ ನಂತರ ಆ ಸಾಧಕರು ಅವರಿಗೆ ಸಂಚಾರಿವಾಣಿಕರೆಯಿಂದ ಸಂಪರ್ಕ ಮಾಡಿ ತಿಳಿಸುತ್ತಾರೆ. ಅವರಿಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳುವುದು ಅಥವಾ ಕೆಲವೊಮ್ಮೆ ಅವರ ತೊಂದರೆ ಕಡಿಮೆಯಾಗುವವರೆಗೆ ಉಪಾಯಯೋಜನೆಗಳನ್ನು ಮಾಡುವುದು, ಇದರಿಂದಾಗಿ ಕೆಲವು ಸಮಯದಲ್ಲಿ ಕಾಕಾರವರಿಗೆ ಮಲಗಲು ಮುಂಜಾನೆ ೪ ರಿಂದ ೪.೩೦ ಆಗುತ್ತದೆ, ಆದರೂ ಬೆಳಗ್ಗೆ ೬.೩೦ ಕ್ಕೆ ಎದ್ದು ಅವರ ನಿತ್ಯಕ್ರಮ ಪ್ರಾರಂಭವಾಗುತ್ತದೆ.

೨ ಆ. ಸದ್ಗುರು ಡಾ. ಮುಕುಲ ಗಾಡಗೀಳ ಇವರ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿರುವುದರಿಂದ ಅವರ ಸೊಂಟ ಮತ್ತು ಬೆನ್ನು ನೋಯುವುದು; ಆದರೂ ಅವರು ಮಲಗಿದ ಸ್ಥಿತಿಯಲ್ಲಿಯೂ ಸಾಧಕರಿಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳುವುದು : ಮಾರ್ಚ್ ೨೦೨೧ ರಲ್ಲಿ ಸದ್ಗುರು ಕಾಕಾರವರ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿರುವುದರಿಂದ ಅವರ ಸೊಂಟ ಮತ್ತು ಬೆನ್ನು ತುಂಬಾ ನೋಯುತ್ತಿತ್ತು. ಆ ಸಮಯದಲ್ಲಿ ಸದ್ಗುರು ಕಾಕಾರವರಿಗೆ ಕುಳಿತುಕೊಳ್ಳುವಾಗ ಮತ್ತು ಬಗ್ಗುವಾಗ ತುಂಬಾ ತೊಂದರೆಯಾಗುತ್ತಿತ್ತು. ಆ ಸಮಯದಲ್ಲಿ ವೈದ್ಯರು ಅವರಿಗೆ ‘ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು ಅರ್ಧ ಗಂಟೆಗಳಿಗಿಂತ ಹೆಚ್ಚು ಸಮಯ ಕುಳಿತುಕೊಳ್ಳಬಾರದು’, ಎಂದು ಹೇಳಿದ್ದರು. ಇಂತಹ ಸ್ಥಿತಿಯಲ್ಲಿದ್ದಾಗಲೂ ಸದ್ಗುರು ಕಾಕಾರವರು ನಿತ್ಯನೇಮದಂತೆ ಸಾಧಕರಿಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳುವ ಸೇವೆ ಮಾಡುತ್ತಲೇ ಇದ್ದರು. ಆ ಸಮಯದಲ್ಲಿ ಅವರು ತನಗೆ ಹುಷಾರಿಲ್ಲವೆಂದು ರಿಯಾಯಿತಿ ತೆಗೆದುಕೊಳ್ಳಲಿಲ್ಲ. ಆ ಕುರಿತು ಅವರು ನನಗೆ, “ನಮಗೆ ಶ್ರೀ ಗುರುಗಳು ಸಾಧಕರ ಜವಾಬ್ದಾರಿಯನ್ನು ಕೊಟ್ಟಿದ್ದಾರೆ, ಆಗ ನಾವು ಯಾರಿಗೂ ‘ಇಲ್ಲ’ ಎಂದು ಹೇಗೆ ಹೇಳುವುದು ? ಅವರಿಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳುವುದು ಮತ್ತು ಅವರಿಗಾಗಿ ಅದನ್ನು ಮಾಡುವುದು, ಇದು ನನ್ನ ಕರ್ತವ್ಯವಾಗಿದೆ” ಎಂದು ಹೇಳಿದರು. ಇದರಿಂದ ‘ಸದ್ಗುರು ಗಾಡಗೀಳಕಾಕಾರವರು ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು’, ಎಂಬುದನ್ನು ತೋರಿಸಿಕೊಟ್ಟರು.

೨ ಇ. ಸಾಧಕರಿಗಾಗಿ ಅನೇಕ ಗಂಟೆಗಳವರೆಗೆ ಕುಳಿತು ನಾಮಜಪ ಮುಂತಾದ ಉಪಾಯಗಳನ್ನು ಮಾಡಿದರೂ ತನ್ನ ಶಾರೀರಿಕ ತೊಂದರೆಯ ಬಗ್ಗೆ ಹೇಳದಿರುವ ಸದ್ಗುರು ಡಾ. ಮುಕುಲ ಗಾಡಗೀಳ ! : ‘ಸಾಧಕರಿಗಾಗಿ ಅಥವಾ ಸಂತರಿಗಾಗಿ ನಾಮಜಪ ಮುಂತಾದ ಉಪಾಯಗಳನ್ನು ಮಾಡುವಾಗ ಸದ್ಗುರು ಕಾಕಾರವರು ತುಂಬಾ ಸಮಯದ ವರೆಗೆ ಮುದ್ರೆ ಮತ್ತು ನ್ಯಾಸ ಮಾಡುತ್ತ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ‘ಕೆಲವೊಮ್ಮೆ ಕೋಣೆಯಲ್ಲಿಯೇ ಕೈಯಲ್ಲಿ ಜಪಮಾಲೆ ಹಿಡಿದು ಓಡಾಡುತ್ತ ಸಾಧಕರಿಗಾಗಿ ನಾಮಜಪ ಮಾಡುತ್ತಾರೆ. ಸದ್ಗುರು ಕಾಕಾರವರು ‘ಇಂದು ತುಂಬಾ ಸಮಯ ಕುಳಿತು ನಾಮಜಪವನ್ನು ಮಾಡಿದೆನು; ಆದುದರಿಂದ ಬೆನ್ನು ಅಥವಾ ಸೊಂಟ ನೋಯುತ್ತಿದೆ ಅಥವಾ ನಾಮಜಪ ಮುಂತಾದ ಉಪಾಯಗಳನ್ನು ಮಾಡುವಾಗ ಒಂದೇ ನ್ಯಾಸವನ್ನು ಬಹಳ ಸಮಯ ಮಾಡಬೇಕಾಯಿತು; ಅದಕ್ಕೆ ನನ್ನ ಕೈಗೆ ನೋವಾಯಿತು’, ಎಂಬುದಾಗಿ ಎಂದಿಗೂ ಮಾಡುವುದಿಲ್ಲ.

೨ ಈ. ಆಪತ್ಕಾಲದ ದೃಷ್ಟಿಯಿಂದ ಆಧ್ಯಾತ್ಮಿಕ ತೊಂದರೆಯಿಂದ ಬೇಗ ಗುಣಮುಖವಾಗಲು ಸತತವಾಗಿ ನಾಮಜಪ ಮುಂತಾದ ಉಪಾಯಗಳನ್ನು ಹುಡುಕುವ ಸದ್ಗುರು ಡಾ. ಮುಕುಲ ಗಾಡಗೀಳ ! : ಸಾಧಕರಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯಾಗುತ್ತಿರುವಾಗ ಸದ್ಗುರು ಕಾಕಾರವರು ನಾಮಜಪ ಮುಂತಾದ ಉಪಾಯಗಳನ್ನು ಹುಡುಕುತ್ತಾರೆ; ಆದರೆ ‘ಆ ಸಾಧಕನಿಗೆ ಆಗುತ್ತಿರುವ ತೊಂದರೆಯು ಆದಷ್ಟು ಬೇಗನೇ ಕಡಿಮೆಯಾಗಿ ಅವನಿಗೆ ಗುಣವಾಗಬೇಕು’, ಎಂದು ಅವರು ಆಧ್ಯಾತ್ಮಿಕ ಮಟ್ಟದಲ್ಲಿನ ಉಪಾಯಗಳನ್ನು ಹುಡುಕುತ್ತಾರೆ, ಉದಾ. ಸಾಧಕರ ಕುಂಡಲಿನಿಶಕ್ತಿಯನ್ನು ಜಾಗೃತಗೊಳಿಸುವುದು, ಅಗ್ನಿಹೋತ್ರದ ಮಾಧ್ಯಮದಿಂದ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸುವುದು, ವಿವಿಧ ಶಾರೀರಿಕ ಕಾಯಿಲೆಗಳ ಮೇಲೆ ದೇವತೆಗಳ ನಾಮಜಪವನ್ನು ಹೇಳುವುದು, ಸಂತರ ಬಟ್ಟೆಗಳ ಮೇಲೆ ಸತತವಾಗಿ ಕೆಟ್ಟ ಶಕ್ತಿಗಳಿಂದ ಆಕ್ರಮಣವಾಗುತ್ತಿರುವಾಗ ಅವುಗಳ ಮೇಲೆ ಆಧ್ಯಾತ್ಮಿಕ ಮಟ್ಟದಲ್ಲಿ ಮಾಡುವ ಉಪಾಯ, ಸಾಧಕರ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಗಳ ಆವರಣವು ಬೇಗ ದೂರಗೊಳಿಸಲು ‘ನಿರ್ವಿಚಾರ’ ನಾಮಜಪವನ್ನು ಭಾವಪೂರ್ಣ ಕೇಳುವುದು ಮುಂತಾದವುಗಳನ್ನು ಮಾಡುತ್ತಾರೆ.

೨ ಊ. ಸೂಕ್ಷ್ಮಶರೀರ ಶಾಸ್ತ್ರದ ಬಗ್ಗೆ ಯೋಗ್ಯ ರೀತಿಯಿಂದ ಅಧ್ಯಯನ ಮಾಡುವ ಸದ್ಗುರು ಡಾ. ಮುಕುಲ ಗಾಡಗೀಳ ! : ಸದ್ಗುರು ಕಾಕಾರವರಲ್ಲಿ ಸೂಕ್ಷ್ಮವನ್ನು ಅರಿತುಕೊಳ್ಳುವ ಕ್ಷಮತೆ ತುಂಬಾ ಇದೆ. ‘ಯಾವುದಾದರೊಬ್ಬ ಸಾಧಕನಿಗೆ ಯಾವ ರೀತಿಯ ತೊಂದರೆಯಾಗುತ್ತಿದೆ ಮತ್ತು ಆ ಸಾಧಕನಿಗೆ ಶರೀರದಲ್ಲಿನ ಯಾವ ಭಾಗದಲ್ಲಿ ತೊಂದರೆಯಾಗುತ್ತಿದೆ ?’, ಎಂಬುದನ್ನು ಸದ್ಗುರು ಕಾಕಾರವರು ನಿಖರವಾಗಿ ಹೇಳುತ್ತಾರೆ. ಈ ಕುರಿತು ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೨ ಊ ೧. ಬಾಲಸಾಧಕಿಗೆ ನೋಯುತ್ತಿರುವ ಭಾಗದ ಮೇಲೆ ನಾಮಜಪ ಮುಂತಾದ ಉಪಾಯಗಳನ್ನು ಮಾಡಿದ ನಂತರ ಅವಳಿಗಾಗುವ ತೊಂದರೆ ದೂರವಾಗುವುದು ಮತ್ತು ಬಾಲಸಾಧಕಿಯ ವೈದ್ಯಕೀಯ ಪರೀಕ್ಷಣೆಯೂ ಸಾಮಾನ್ಯ ಬರುವುದು : ರಾಮನಾಥಿ (ಗೋವಾ)ದಲ್ಲಿನ ಸನಾತನದ ಆಶ್ರಮದಲ್ಲಿ ಓರ್ವ ಬಾಲಸಾಧಕಿಯು ಆಡುವಾಗ ಮುಗ್ಗರಿಸಿ ಬಿದ್ದಳು. ಆದುದರಿಂದ ಅವಳಿಗೆ ಪೆಟ್ಟಾಯಿತು. ಅವಳಿಗೆ ಆಧುನಿಕ ವೈದ್ಯರಿಗೆ ತೋರಿಸಿದರು ಮತ್ತು ಸದ್ಗುರು ಕಾಕಾರವರಿಗೆ ಅವಳಿಗಾಗಿ ನಾಮಜಪಾದಿ ಉಪಾಯಗಳನ್ನೂ ಕೇಳಿದರು. ಆಗ ಸದ್ಗುರು ಕಾಕಾರವರು ಆ ಬಾಲಸಾಧಕಿಯ ತಲೆಗೆ ಹಿಂದಿನ ಬದಿಯಲ್ಲಿ ಅಂಗೈ ಇಟ್ಟು ನ್ಯಾಸ ಮಾಡಲು ಹೇಳಿ ನಾಮಜಪಾದಿ ಉಪಾಯಗಳನ್ನು ಹೇಳಿದರು. ಈ ಉಪಾಯವನ್ನು ಹುಡುಕುತ್ತಿರುವಾಗಲೇ ಆಧುನಿಕ ವೈದ್ಯರು ಆ ಬಾಲಸಾಧಕಿಗೆ ಕ್ಷ-ಕಿರಣ ತಪಾಸಣೆ ಮಾಡಲು ಹೇಳಿದರು. ‘ನಿಜ ಹೇಳುವುದಾದರೆ ಆ ಬಾಲಸಾಧಕಿಯು ಮುಗ್ಗರಿಸಿ ಬಿದ್ದಿರುವುದರಿಂದ ತಲೆಯ ಹಿಂದಿನ ಬದಿಗೆ ನಾಮಜಪ ಹೇಗೆ ಬರುವುದು ?’, ಎಂಬ ವಿಚಾರವು ಯಾರ ಮನಸ್ಸಿನಲ್ಲಿಯೂ ಬರಬಹುದು. ಆ ಬಾಲಸಾಧಕಿಯ ತಾಯಿಯು ಅವಳಿಗಾಗಿ ನ್ಯಾಸ ಮಾಡಿ ನಾಮಜಪಾದಿ ಉಪಾಯಗಳನ್ನು ಮಾಡಿದಳು. ಅನಂತರ ೧೦ ನಿಮಿಷಗಳ ನಂತರ ಆ ಬಾಲಸಾಧಕಿಯ ತಲೆಯ ಹಿಂಬದಿಗೆ ಬಾವು ಬಂದಿತು. ಆ ಭಾಗದ ಮೇಲೆ ನಾಮಜಪಾದಿ ಉಪಾಯಗಳನ್ನು ಮಾಡಿದ ನಂತರ ಅವಳಿಗಾಗುತ್ತಿದ್ದ ತೊಂದರೆಯು ದೂರವಾಯಿತು ಮತ್ತು ಆ ಬಾಲಸಾಧಕಿಯ ವೈದ್ಯಕೀಯ ಪರೀಕ್ಷಣೆಗಳ ವರದಿಯೂ ಸಹಜವಿದೆಯೆಂದು(ನಾರ್ಮಲ್) ಬಂದಿತು.

೨ ಊ ೩. ಸಾಧಕರ ತೊಂದರೆಯ ನಿವಾರಣೆಗಾಗಿ ಅವರ ಸೂಕ್ಷ್ಮ ಶರೀರದೊಂದಿಗೆ ಏಕರೂಪವಾಗುವ ಸದ್ಗುರು ಡಾ. ಮುಕುಲ ಗಾಡಗೀಳ ! : ಸದ್ಗುರು ಕಾಕಾರವರು ತೊಂದರೆಯಾಗುತ್ತಿರುವ ಸಾಧಕನಿಗಾಗಿ ನಾಮಜಪ ಮುಂತಾದ ಉಪಾಯಗಳನ್ನು ಹುಡುಕುವಾಗ ಆ ಸಾಧಕನ ಸೂಕ್ಷ್ಮ ಶರೀರದೊಂದಿಗೆ ಏಕರೂಪರಾಗುತ್ತಾರೆ ಮತ್ತು ಆ ಸಾಧಕನ ತೊಂದರೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ನಿಖರವಾಗಿ ಕಂಡುಹಿಡಿಯುತ್ತಾರೆ. ಅವರು ಕಂಡುಹಿಡಿಯುವಾಗ ಆ ಸಾಧಕನಿಗೆ ಹೇಗೆ ತೊಂದರೆಯಾಗುತ್ತದೆಯೋ, ಅದೇ ರೀತಿಯ ತೊಂದರೆಯು ಸದ್ಗುರು ಕಾಕಾರವರಿಗೆ ಅರಿವಾಗುತ್ತದೆ. ಅದಕ್ಕನುಸಾರ ಆ ಸಾಧಕನಿಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳುತ್ತಾರೆ. ಈ ಉಪಾಯಗಳನ್ನು ಹೇಳಿದ ನಂತರ ಸದ್ಗುರು ಕಾಕಾರವರು ನಾಮಜಪ ಮುಂತಾದ ಉಪಾಯಗಳನ್ನು ಮಾಡಿಮುಗಿಸಿದ ನಂತರವೂ ಅವರಿಗೆ ಬಹಳ ಪ್ರಮಾಣದಲ್ಲಿ ತೇಗು ಬರುವ ಮಾಧ್ಯಮದಿಂದ ಅಥವಾ ಬೇರೆ ರೀತಿಯಿಂದ ಆ ಸಾಧಕನ ಆಧ್ಯಾತ್ಮಿಕ ತೊಂದರೆ ದೂರವಾಗುತ್ತದೆ. ಈ ಬಗ್ಗೆ ಸದ್ಗುರು ಕಾಕಾರವರು, “ನಾನು ಒಂದು ವೇಳೆ ಆ ಸಾಧಕನಿಗಾಗಿ ಮಾಡುತ್ತಿರುವ ಉಪಾಯವನ್ನು ನಿಲ್ಲಿಸಿದರೂ, ನನ್ನ ಅಂತರ್ಮನದಲ್ಲಿ ಆ ಸಾಧಕನ ಹೆಸರು ಮತ್ತು ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳ ವಿಚಾರವು ನಡೆದಿರುತ್ತದೆ. ಆದುದರಿಂದ ನನಗೆ ಬಹಳ ಪ್ರಮಾಣದಲ್ಲಿ ತೇಗುಗಳು ಬರುತ್ತವೆ ಮತ್ತು ಈ ರೀತಿಯಲ್ಲಿ ಆ ಸಾಧಕನ ತೊಂದರೆದಾಯಕ ಶಕ್ತಿಯು ಬೇರೆ ಬೇರೆಯಾಗುತ್ತವೆ” ಎಂದರು.

– ಶ್ರೀ. ಭೂಷಣ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೯.೨೦೨೧)

ದೇಶದ ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಗಲಭೆಯಂತಹ ಸ್ಥಿತಿಯನ್ನು ಸೃಷ್ಟಿಸುವುದರ ಇದು ಪೂರ್ವಾಭ್ಯಾಸವೇ ?

ಬಂಧನದಲ್ಲಿದ್ದ ಆರೋಪಿ ಅನ್ಸಾರ ಎಂಬವನು ೩ ತಿಂಗಳ ಹಿಂದೆ ‘ಬಜರಂಗ ದಳ’ದ ವತಿಯಿಂದ ಆಯೋಜಿಸಿದ ಹನುಮಾನ ಚಾಲೀಸಾ ಪಠಣ ಸಪ್ತಾಹವನ್ನು ನಿಲ್ಲಿಸಲೇಬೇಕೆಂದು, ಬೆದರಿಕೆಯನ್ನು ಹಾಕಿದ್ದನು. ೧೬ ಎಪ್ರಿಲ್ ೨೦೨೨ ರಂದು ನಡೆದ ಗಲಭೆಯ ಚಿತಾವಣಿಯನ್ನೂ ಅವನೇ ಕೊಟ್ಟಿದ್ದನು.

ದೇಶಾದ್ಯಂತ ಮತಾಂತರ ನಿಷೇಧ ಕಾನೂನನ್ನು ಅನ್ವಯಗೊಳಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ! – ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ, ಪ್ರದೇಶಸಚಿವ, ಭಾಜಪ, ಛತ್ತೀಸಗಢ

ಯಾವಾಗ ಒಬ್ಬ ವ್ಯಕ್ತಿ ಮತಾಂತರಗೊಳ್ಳುತ್ತಾನೆಯೋ ಆಗ ಆತನು ಕೇವಲ ಮತಾಂತರಗೊಳ್ಳುವುದು ಮಾತ್ರವಲ್ಲ, ತನ್ನ ಧರ್ಮದ ವಿರುದ್ಧ ಶತ್ರುವಾಗಿ ನಿಲ್ಲುತ್ತಾನೆ’, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಹಿಂದೆ ಅಖಂಡವಾಗಿದ್ದ ಭಾರತ ಈಗ ಇಬ್ಭಾಗವಾಗಿದೆ. ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ.

ಪಲಾಯನವಲ್ಲ, ಪ್ರತಿರೋಧವೊಂದೇ ಪರಿಹಾರ ! – ನ್ಯಾಯವಾದಿ ನೀಲೇಶ ಸಾಂಗೋಲಕರ, ಸಂಘಟಕರು, ಹಿಂದೂ ವಿಧಿಜ್ಞ ಪರಿಷತ್ತು

೧೯೯೦ ರಲ್ಲಿ ಕಾಶ್ಮೀರದಲ್ಲಿ ಏನು ನಡೆಯಿತೋ ಅದು ರಾಜಸ್ಥಾನದ ಕರೌಲಿ, ಮಧ್ಯಪ್ರದೇಶದ ಖರ್ಗೋನ್ ಮತ್ತು ದೇಶದಾದ್ಯಂತ ನಡೆಯುತ್ತಿದೆ. ಹಿಂದೂ ಸಮಾಜವು ಜಾಗೃತವಾಗುವುದು ಆವಶ್ಯಕವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಕಲಿಯುಗಾಂತರ್ಗತ ಕಲಿಯುಗವು ಈಗ ವೃದ್ಧವಾಗುತ್ತಿದೆ.  ಈಗ ಅದು ನಾಶವಾಗಿ ಕಲಿಯುಗಾಂತರ್ಗತ ಸತ್ಯಯುಗವು ಬರಲಿದೆ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯು ಆಗಲಿದೆ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ