ದೇಶಾದ್ಯಂತ ಮತಾಂತರ ನಿಷೇಧ ಕಾನೂನನ್ನು ಅನ್ವಯಗೊಳಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ! – ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ, ಪ್ರದೇಶಸಚಿವ, ಭಾಜಪ, ಛತ್ತೀಸಗಢ

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ವಿಶೇಷ ಸಂವಾದ : ‘ಮತಾಂತರವೇ ರಾಷ್ಟ್ರಾಂತರ !’

ಶ್ರೀ. ಪ್ರಬಲ ಪ್ರತಾಪಸಿಂಹ ಜುದೇವ

ಮುಂಬೈ – ಕ್ರೈಸ್ತ ಮಿಶನರಿಗಳು ಮಾನವೀಯತೆಗಾಗಿ ಶಾಲೆಗಳು, ಆಸ್ಪತ್ರೆಗಳನ್ನು ಅಗತ್ಯವಾಗಿ ತೆರೆಯಲಿ; ಆದರೆ ಈ ಸೌಲಭ್ಯಗಳ ಹೆಸರಿನಲ್ಲಿ ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸುವುದು ಏಕೆ ? ಶಿಕ್ಷಣ ಮತ್ತಿತರ ಸೇವೆಗಳ ಹೆಸರಿನಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ನಮ್ಮ ಸಂಸ್ಕೃತಿಯು ಭಾರತದ ಸಕಾರಾತ್ಮಕ ಭಾಗವಾಗಿದೆ, ಆದ್ದರಿಂದ ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುವ ಮೂಲಕ ಹಿಂದೂಗಳನ್ನು ಆಯೋಜನಾಬದ್ಧವಾಗಿ ಮತಾಂತರಿಸಲಾಗುತ್ತಿದೆ. ಮತಾಂತರವು ರಾಷ್ಟ್ರೀಯ ಭದ್ರತೆಗೆ ಅಪಾಯದ ವಿಷಯವಾಗಿದೆ. ಎಲ್ಲೆಲ್ಲಿ ಹಿಂದೂಗಳು ಮತಾಂತರಗೊಂಡರೋ ಆ ಪ್ರದೇಶಗಳು ಅಸ್ಥಿರವಾದವು, ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಇಂದು ದೇಶದ ಹಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಿದ್ದರೂ ಈ ಕಾನೂನನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ. ಇದಕ್ಕಾಗಿ ದೇಶದಾದ್ಯಂತ ಹಿಂದೂಗಳು ಪ್ರಯತ್ನಿಸುವುದು ಅಗತ್ಯವಾಗಿದೆ, ಎಂದು ಭಾಜಪದ ಛತ್ತೀಸಗಢ ರಾಜ್ಯ ಸಚಿವ ಮತ್ತು ಅಖಿಲ ಭಾರತ ಘರವಾಪಸಿ ಮುಖಂಡ ಶ್ರೀ. ಪ್ರಬಲ ಪ್ರತಾಪಸಿಂಹ ಜುದೇವ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಮತಾಂತರವೇ ರಾಷ್ಟ್ರಾಂತರ !’ ಎಂಬ ವಿಷಯದ ಕುರಿತು ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ದೇಶದಲ್ಲಾಗುತ್ತಿರುವ ಮತಾಂತರವನ್ನು ತಡೆಯುವುದು ಆವಶ್ಯಕ ! – ಶ್ರೀ. ವಿನೋದ ಬನ್ಸಾಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು

ಶ್ರೀ. ವಿನೋದ ಬನ್ಸಲ್

‘ಮತಾಂತರವೇ ರಾಷ್ಟ್ರಾಂತರ’ ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳು ಧರ್ಮದ ಆಧಾರದ ಮೇಲೆ ಅಖಂಡ ಭಾರತದಿಂದ ಬೇರ್ಪಟ್ಟವು. ಎಲ್ಲೆಲ್ಲಿ ಹಿಂದೂಗಳ ಜನಸಂಖ್ಯೆ ಇಳಿಮುಖವಾಯಿತೋ, ಅಲ್ಲಿ ಹಿಂದೂಗಳು ಮತಾಂತರವಾದರು. ಕಾಶ್ಮೀರ, ಬಂಗಾಲ, ಕೇರಳ, ಈಶಾನ್ಯ ಭಾರತದ ರಾಜ್ಯಗಳು ಇದಕ್ಕೆ ಉದಾಹರಣೆಗಳಾಗಿದ್ದು, ಅಲ್ಲಿ ಭಯೋತ್ಪಾದಕ ಚಟುವಟಿಕೆಗಳು, ಜಿಹಾದಿ ದಾಳಿಗಳು ಹೆಚ್ಚಾಗಿವೆ ಮತ್ತು ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಮತಾಂತರ ತಡೆಯಲು ಅನೇಕ ಸಾಧು- ಸಂತರು ಬಲಿದಾನ ಮಾಡಿದ್ದಾರೆ. ಒಡಿಶಾದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರು ಮತಾಂತರವನ್ನು ತಡೆಯುವ ಮತ್ತು ಹಿಂದೂಗಳ ಘರವಾಪಸಿಯ ಮಹತ್ತರವಾದ ಕಾರ್ಯ ಮಾಡುತ್ತಾ ತಮ್ಮ ಪ್ರಾಣದ ಬಲಿ ನೀಡಿದರು. ಮತಾಂತರವನ್ನು ನಿಲ್ಲಿಸುವುದು ಬಹಳ ಮುಖ್ಯವಾಗಿದೆ.

ಮತಾಂತರ ನಿಷೇಧ ಕಾನೂನು ಇಂದಿನ ಕಾಲಕ್ಕೆ ಅಗತ್ಯ ! – ಶ್ರೀ. ಆನಂದ ಜಾಖೋಟಿಯಾ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಮನ್ವಯಕರು,  ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಆನಂದ ಜಾಖೋಟಿಯಾ

‘ಯಾವಾಗ ಒಬ್ಬ ವ್ಯಕ್ತಿ ಮತಾಂತರಗೊಳ್ಳುತ್ತಾನೆಯೋ ಆಗ ಆತನು ಕೇವಲ ಮತಾಂತರಗೊಳ್ಳುವುದು ಮಾತ್ರವಲ್ಲ, ತನ್ನ ಧರ್ಮದ ವಿರುದ್ಧ ಶತ್ರುವಾಗಿ ನಿಲ್ಲುತ್ತಾನೆ’, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಹಿಂದೆ ಅಖಂಡವಾಗಿದ್ದ ಭಾರತ ಈಗ ಇಬ್ಭಾಗವಾಗಿದೆ. ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ. ಮತಾಂತರದ ಸಮಸ್ಯೆಯು ಈಗ ವಿಶಾಲ ಸ್ವರೂಪ ಪಡೆದುಕೊಂಡಿದೆ. ಹಿಂದೂಗಳನ್ನು ಮತಾಂತರಗೊಳಿಸಲು ವಿದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ನೀಡಲಾಗುತ್ತಿದೆ. ಮತಾಂತರ ನಿಷೇಧ ಕಾನೂನನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಯಾರೂ ಮತಾಂತರ ಮಾಡಲು ಧೈರ್ಯ ಮಾಡಬಾರದು. ಮತಾಂತರ ನಿಷೇಧ ಕಾನೂನು ಇಂದಿನ ಕಾಲಕ್ಕೆ ಅಗತ್ಯವಾಗಿದೆ.