ಸೂಕ್ಷ್ಮ ಸ್ತರದಲ್ಲಿ ಅಗಾಧ ಕಾರ್ಯ ಮಾಡುವ ಅದ್ವಿತೀಯ ಕ್ಷಮತೆ ಇರುವ ಏಕಮೇವಾದ್ವಿತೀಯ ಸದ್ಗುರು (ಡಾ.) ಮುಕುಲ ಗಾಡಗೀಳ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದದಿಂದ ಸನಾತನದ ಕಾರ್ಯವು ವಿವಿಧ ಅಂಗಗಳಿಂದ ಹೆಚ್ಚುತ್ತಿದೆ. ಮೊದಲಿಗೆ ಈ ಕಾರ್ಯದಲ್ಲಿ ನಾನು ಕೆಲವು ಸೇವೆಗಳನ್ನು ಮಾಡಿದೆನು. ಅನಂತರ ಆ ಸೇವೆಗಳನ್ನು ಅನೇಕ ಸಾಧಕರು ಕಲಿತುಕೊಂಡರು ಮತ್ತು ಇಂದು ಆ ಸಾಧಕರು ಜವಾಬ್ದಾರಿ ವಹಿಸಿ ಆ ಸೇವೆಗಳನ್ನು ಮಾಡುತ್ತಿದ್ದಾರೆ, ಉದಾ. ಅಧ್ಯಾತ್ಮಪ್ರಸಾರದ ಕಾರ್ಯ, ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ! ಇದರ ಒಂದು ಭಾಗವೆಂದು ಸಪ್ತರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ನನ್ನ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ಗಳೆಂದು ಘೋಷಿಸಿದರು. ಇವರಿಬ್ಬರು ನನ್ನ ಸಾಧಕರಿಗೆ ಸಾಧನೆಯ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಇದೇ ರೀತಿ ‘ಸೂಕ್ಷ್ಮದಿಂದಾಗುವ ಆಕ್ರಮಣಗಳಿಗಾಗಿ ಮಾಡುವ ಆಧ್ಯಾತ್ಮಿಕ ಸ್ತರದ ಉಪಾಯ’, ಇದೊಂದು ದೊಡ್ಡ ಸೇವೆಯನ್ನು ಸದ್ಯ ಸದ್ಗುರು (ಡಾ.) ಮುಕುಲ ಗಾಡಗೀಳ ಇವರು ಮಾಡುತ್ತಿದ್ದಾರೆ.

ಸದ್ಗುರು ಡಾ. ಮುಕುಲ ಗಾಡಗೀಳ

ಸಾಧಕರಿಗೆ ಅವರ ತೊಂದರೆಗಳಿಗನುಸಾರ ಆವಶ್ಯಕವಾಗಿರುವ ನಾಮಜಪ ಮುಂತಾದ ಉಪಾಯಗಳನ್ನು ಹುಡುಕಿ ಹೇಳುವುದು, ಅವರಿಗಾಗಿ ನಾಮಜಪ ಮುಂತಾದ ಉಪಾಯಗಳನ್ನು ಮಾಡುವುದು, ಸಮಷ್ಟಿಗಾಗಿ ಆವಶ್ಯಕವಾಗಿರುವ ಜಪವನ್ನು ಹುಡುಕಿ ಹೇಳುವುದು, ಸತ್ಸಂಗ, ಧರ್ಮ ಸಭೆಗಳಂತಹ ಸಮಷ್ಟಿ ಕಾರ್ಯದಲ್ಲಿ ಸೂಕ್ಷ್ಮದಿಂದ ನಿರ್ಮಾಣವಾಗುವ ಅಡೆತಡೆಗಳನ್ನು ದೂರಗೊಳಿಸಲು ನಾಮಜಪವನ್ನು ಮಾಡುವುದು, ಈ ಸೇವೆಗಳನ್ನು ಅವರು ನಿಯಮಿತವಾಗಿ ಮಾಡುತ್ತಿದ್ದಾರೆ. ಅವರು ವಿವಿಧ ಕಾಯಿಲೆಗಳಿಗಾಗಿ ಉಪಯೋಗವಾಗಲು, ವಿವಿಧ ದೇವತೆಗಳ ನಾಮಜಪಗಳನ್ನೂ ಸ್ವತಃ ಹುಡುಕಿದ್ದಾರೆ ಮತ್ತು ಅನೇಕ ಸಾಧಕರಿಗೆ ಅದರ ಲಾಭವಾಗುತ್ತಿದೆ.

ಅವರು ಕೊರೊನಾ ಮಹಾಮಾರಿಯ ಮೇಲೆಯೂ ನಾಮಜಪವನ್ನು ಶೋಧಿಸಿದ್ದರು. ಅನೇಕರಿಗೆ ಅದರ ಲಾಭವಾಯಿತು. ಸಮಾಜದಲ್ಲಿನ ಜನರಿಗೂ ಈ ನಾಮಜಪದ ಪರಿಣಾಮವಾಗಬೇಕೆಂದು ಈ ನಾಮಜಪವನ್ನು ಧ್ವನಿಮುದ್ರಿಸಿ ಕೊರೊನಾಕ್ಕೆ ಸಂಬಂಧಪಟ್ಟ ಅನೇಕ ಆಸ್ಪತ್ರೆಗಳಲ್ಲಿ ಹಚ್ಚಲಾಗುತ್ತಿತ್ತು. ಈ ಮಹಾಮಾರಿಯ ಅವಧಿಯಲ್ಲಿ ಆಧ್ಯಾತ್ಮಿಕ ಸ್ತರದಲ್ಲಿನ ಹೋರಾಟದಲ್ಲಿ ಅವರು ಪ್ರತಿದಿನ ಅನೇಕ ಸಾಧಕರಿಗೆ ಅವರ ಅವಶ್ಯಕತೆಗನುಸಾರ ನಾಮಜಪ ಮುಂತಾದ ಉಪಾಯಗಳನ್ನು ಹುಡುಕಿ ಹೇಳಿದರು. ಈ ನಾಮಜಪ ಮುಂತಾದ ಉಪಾಯಗಳ ಮಾಧ್ಯಮದಿಂದ ಅವರು ಅನೇಕ ಸಾಧಕರನ್ನು ಅಕ್ಷರಶಃ ಸಾವಿನ ದವಡೆಯಿಂದ ಹೊರಗೆ ತೆಗೆದರು. ಸದ್ಗುರು ಕಾಕಾರವರು ನಾಮಜಪ ಮುಂತಾದ ಉಪಾಯಗಳನ್ನು ಹೇಳಿದ ನಂತರ ಅಥವಾ ಅವರು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಿದ ನಂತರ ಪರಿಣಾಮವಾಗಲಿಲ್ಲ, ಹೀಗೆ ಎಂದಿಗೂ ಆಗಲಿಲ್ಲ. ಇದನ್ನು ಇದುವರೆಗೆ ಅನೇಕ ಸಾಧಕರು ಅನುಭವಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನನ್ನ ಮಹಾಮೃತ್ಯುಯೋಗವು ನಡೆಯುತ್ತಿದೆ. ಆದುದರಿಂದ ನನ್ನ ಮೇಲೆ ಸತತವಾಗಿ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ತೀವ್ರ ಆಕ್ರಮಣ ಮಾಡುತ್ತಿವೆ. ಈ ಆಕ್ರಮಣಗಳಿಂದ ಕಾಲದ ಮೊದಲು ನನ್ನ ಯಾವುದೇ ವಸ್ತುಗಳನ್ನು ಇತರ ಸಾಧಕರು ಕೈಯಲ್ಲಿ ಹಿಡಿದರೆ, ಅವರಿಗೆ ‘ತಲೆ ಭಾರವಾಗುವುದು, ಉಸಿರುಗಟ್ಟಿದಂತಾಗುವುದು’, ಇಂತಹ ತೊಂದರೆಗಳ ಅರಿವಾಗುತ್ತಿತ್ತು. ನಾನು ನಿಯಮಿತವಾಗಿ ಬಳಸುವ ವಸ್ತುಗಳ ಯು.ಎ.ಎಸ್. ಮೂಲಕ ಸಂಶೋಧನೆ ಮಾಡಿದ ನಂತರವೂ ಆ ವಸ್ತುಗಳ ಮೇಲೆ ೧೦ ರಿಂದ ೧೫ ಮೀಟರ್‌ವರೆಗೆ ನಕಾರಾತ್ಮಕ ಊರ್ಜೆಯ ಆವರಣವು ಬರುತ್ತಿತ್ತು. ಇಂತಹ ತೀವ್ರ ನಕಾರಾತ್ಮಕವಾಗಿರುವ ನನ್ನ ವಸ್ತುಗಳ ಮೇಲೆ ಸದ್ಗುರು ಕಾಕಾರವರು ಕೆಲವು ಕಾಲ ಉಪಾಯಗಳನ್ನು ಮಾಡಿದ ನಂತರ ಅವುಗಳು ತಕ್ಷಣ ಸಕಾರಾತ್ಮಕವಾಗುತ್ತಿದ್ದವು.

ಸೂಕ್ಷ್ಮದಿಂದಾಗುವ ತೀವ್ರ ಆಕ್ರಮಣಗಳಿಂದ ನನಗೆ ಗ್ಲಾನಿ ಬರುವುದು, ಪ್ರಾಣಶಕ್ತಿ ಕಡಿಮೆಯಾಗುವುದು, ಇಂತಹ ತೊಂದರೆಗಳು ಮೇಲಿಂದ ಮೇಲೆ ಆಗುತ್ತಿವೆ. ನನ್ನ ಇಂತಹ ಸ್ಥಿತಿಯಲ್ಲಿ ಸದ್ಗುರು ಡಾ. ಗಾಡಗೀಳ ಕಾಕಾರವರು ಅನೇಕ ಬಾರಿ ನನ್ನ ಮೇಲೆ ಉಪಾಯವನ್ನು ಮಾಡಿ ಈ ಕೆಟ್ಟ ಶಕ್ತಿಗಳ ಆಕ್ರಮಣದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ. ಅವರು ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ತೆಂಗಿನಕಾಯಿಯಿಂದ ನನ್ನ ದೃಷ್ಟಿಯನ್ನು ತೆಗೆಯುತ್ತಾರೆ. ಅವರು ದೃಷ್ಟಿಯನ್ನು ತೆಗೆಯುವಾಗ ನನ್ನ ಸುತ್ತಲು ತಿರುಗುತ್ತಿರುವಾಗ ನನಗೆ ಅವರ ಸ್ಪಂದನಗಳ ಅರಿವಾಗುತ್ತದೆ. ಅವರಲ್ಲಿ ಇಷ್ಟೊಂದು ಶಕ್ತಿಯಿದೆ.

ಇದುವರೆಗೆ ಗುರು-ಶಿಷ್ಯರ ಇತಿಹಾಸದಲ್ಲಿ ಶಿಷ್ಯನು ಗುರುಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಸಹಾಯ ಮಾಡಿದ ಉದಾಹರಣೆಗಳು ಕಂಡು ಬಂದಿಲ್ಲ. ಆದುದರಿಂದ ನನಗೆ, ಸಪ್ತರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ನನ್ನ ಆಧ್ಯಾತ್ಮಿಕ ಉತ್ತರಾಧಿಕಾರಿಗಳೆಂದು ಹೇಗೆ ಹೇಳಿದ್ದಾರೆಯೋ, ಹಾಗೆಯೇ ‘ಸೂಕ್ಷ್ಮದಲ್ಲಿನ ಉಪಾಯಗಳ ಉತ್ತರಾಧಿಕಾರಿ ಸದ್ಗುರು ಗಾಡಗೀಳಕಾಕಾ ಆಗಿದ್ದಾರೆ’, ಎಂದು ಹೇಳಬಹುದು, ಎಂದೆನಿಸುತ್ತದೆ. ಅವರ ಹುಟ್ಟುಹಬ್ಬದ ನಿಮಿತ್ತ ಅನೇಕ ಶುಭಾಶಯಗಳನ್ನು ಇಲ್ಲಿ ವ್ಯಕ್ತಪಡಿಸುತ್ತೇನೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (೨೭.೮.೨೦೨೨)