೧೯೯೦ ರಲ್ಲಿ ಕಾಶ್ಮೀರದಲ್ಲಿ ಏನು ನಡೆಯಿತೋ ಅದು ರಾಜಸ್ಥಾನದ ಕರೌಲಿ, ಮಧ್ಯಪ್ರದೇಶದ ಖರ್ಗೋನ್ ಮತ್ತು ದೇಶದಾದ್ಯಂತ ನಡೆಯುತ್ತಿದೆ. ಹಿಂದೂ ಸಮಾಜವು ಜಾಗೃತವಾಗುವುದು ಆವಶ್ಯಕವಾಗಿದೆ. ನಮ್ಮ ತೇಜಸ್ವಿ ರಾಷ್ಟ್ರಪುರುಷರ ಮತ್ತು ಪರಾಕ್ರಮಿ ರಾಜರ ಇತಿಹಾಸವನ್ನು ನಾವು ನೆನಪಿಸಿ ಕೊಳ್ಳಬೇಕು. ಪಲಾಯನವಲ್ಲ; ಪ್ರತಿರೋಧವೊಂದೇ ಪರಿಹಾರ ವಾಗಿದೆ. ಎಲ್ಲಿಯ ತನಕ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲವೋ, ಅಲ್ಲಿಯ ತನಕ ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂಬುದು ಇಲ್ಲಿಯವರೆಗಿನ ಅನುಭವವಾಗಿದೆ. ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ದೂರು, ಪತ್ರವ್ಯವಹಾರ, ಮಾಹಿತಿ ಹಕ್ಕು, ನ್ಯಾಯಾಂಗ ಹೋರಾಟ ಇತ್ಯಾದಿಗಳ ಮೂಲಕ ಒತ್ತಡ ಹೇರಬೇಕು. – ನ್ಯಾಯವಾದಿ ನೀಲೇಶ ಸಾಂಗೋಲಕರ