#Datta Datta, #ShriDatta ShriDatta #mahalaya mahalaya, #pitrupaksha pitrupaksha, #shraddha shraddha, #ShraddhaRituals Shraddha rituals, #Shraddhavidhi Shraddha vidhi
ಸಾಧಕರಿಗೆ ಸೂಚನೆ

೧. ದತ್ತನ ನಾಮಜಪ ಮಾಡುವುದು
‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೧೦ ರಿಂದ ೨೫, ೨೦೨೨) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ |’ ಈ ಜಪವನ್ನು ಕಡಿಮೆ ಪಕ್ಷ ೧ ಗಂಟೆ ಮಾಡಬೇಕು.
ತಮಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಲು ಆಧ್ಯಾತ್ಮಿಕ ಉಪಾಯ ಮಾಡುವ ಸಾಧಕರು ತಮ್ಮ ಉಪಾಯದ ಜಪಗಳನ್ನು ಮಾಡಿ ಹೆಚ್ಚುವರಿಯಾಗಿ ಕಡಿಮೆ ಪಕ್ಷ ೧ ಗಂಟೆ ದತ್ತನ ಜಪವನ್ನು ಮಾಡಬೇಕು. ದತ್ತನ ಜಪ ಮಾಡುವಾಗ ಕೈಯ ಐದೂ ಬೆರಳುಗಳ ತುದಿಗಳನ್ನು ಜೋಡಿಸಿ ಅನಾಹತಚಕ್ರ ಮತ್ತು ಮಣಿಪುರಚಕ್ರಗಳ ಸ್ಥಾನದಲ್ಲಿ ನ್ಯಾಸ ಮಾಡಬೇಕು.
ಉಪಾಯ ಮಾಡದ ಸಾಧಕರು ವೈಯಕ್ತಿಕ ತಯಾರಿ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ವೇಳೆ ದತ್ತನ ಜಪವನ್ನು ಕಡಿಮೆಪಕ್ಷ ೧ ಗಂಟೆ ಆಗುವಂತೆ ನೋಡಬೇಕು; ಆದರೆ ತೊಂದರೆಯ ಅರಿವಾದರೆ ಅವರೂ ಕುಳಿತು ಮತ್ತು ಮುದ್ರೆ ಮಾಡಿ ದತ್ತನ ಜಪ ಮಾಡಬೇಕು.
೨. ಪಿತೃಪಕ್ಷದ ಕಾಲಾವಧಿಯಲ್ಲಿ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದತ್ತನಿಗೆ ದಿನದಲ್ಲಿ ನಡು ನಡುವೆ ಪ್ರಾರ್ಥನೆ ಮಾಡಬೇಕು.
೩. ಸಾಧ್ಯವಿರುವ ಸಾಧಕರು ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಅವಶ್ಯ ಮಾಡಬೇಕು. ಹೀಗೆ ಮಾಡುವುದರಿಂದ ಪೂರ್ವಜರ ತೊಂದರೆ ದೂರವಾಗಿ ಸಾಧನೆಗಾಗಿ ಅವರ ಆಶೀರ್ವಾದವೂ ಲಭಿಸುವುದು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩.೯.೨೦೨೦)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !