ದೇಶದ ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಗಲಭೆಯಂತಹ ಸ್ಥಿತಿಯನ್ನು ಸೃಷ್ಟಿಸುವುದರ ಇದು ಪೂರ್ವಾಭ್ಯಾಸವೇ ?

ಇದು, ದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಅಶಾಂತಿ ಮತ್ತು ಸಂಘರ್ಷವನ್ನು ಸೃಷ್ಟಿಸಿ ೨೦೨೪ ರ ಲೋಕಸಭಾ ಚುನಾವಣೆಯ ಮೊದಲು ದೇಶದ ಪ್ರಮುಖ ನಗರಗಳಲ್ಲಿ ಏಕಕಾಲದಲ್ಲಿ ಗಲಭೆಗಳನ್ನು ಅಥವಾ ಸಂಘರ್ಷದ ಸ್ಥಿತಿಯನ್ನು ಸೃಷ್ಟಿಸುವ ಪೂರ್ವಾಭ್ಯಾಸ ಅಲ್ಲವಲ್ಲ ? ಇದರ ವಿಚಾರವಾಗುವುದು ಆವಶ್ಯಕ.

೧. ಸ್ವೀಡನ್‌ನಲ್ಲಿ ಶರಣಾರ್ಥಿಗಳು ಗಲಭೆಗಳನ್ನು ಮಾಡಿ ಅಶಾಂತಿಯನ್ನು ಸೃಷ್ಟಿಸುವುದು ಮತ್ತು ಈಗ ಯುರೋಪಿನ ರಾಷ್ಟ್ರಗಳಿಗೆ ಭಸ್ಮಾಸುರನಿಗೆ ಜನ್ಮ ನೀಡಿದ ಬಗ್ಗೆ ಅರಿವಾಗುವುದು

 

ಯುರೋಪಿನ ಅತ್ಯಂತ ಪ್ರಗತ, ಶಾಂತ, ಶ್ರೀಮಂತ, ಮಾನವಾಧಿಕಾರದ ಕಾಳಜಿ ವಹಿಸುವ, ಶರಣಾರ್ಥಿಗಳಿಗಾಗಿ ತಮ್ಮ ದೇಶದ ಬಾಗಿಲುಗಳನ್ನು ಸದಾ ತೆರೆದಿಡುವ ಸ್ವೀಡನ್‌ನ ನಗರಗಳು ಸದ್ಯ ಗಲಭೆಗಳಿಂದ ಸುತ್ತುವರಿದಿವೆ. ಅತ್ಯಾಧುನಿಕ ಸಾಧನಗಳು ಮತ್ತು ತಂತ್ರಜ್ಞಾನಯುಕ್ತ ಸ್ವೀಡನ್ ಪೊಲೀಸರಿಗೆ ಈ ಗಲಭೆಗಳನ್ನು ತಡೆಯುವುದು ಅಸಾಧ್ಯವಾಗಿದೆ. ವಿವಿಧ ನಗರಗಳಲ್ಲಿ ನಡೆಯುವ ಈ ಗಲಭೆಗಳು ಮತ್ತು ಗಲಭೆಕೋರರು ಹಚ್ಚಿದ ಬೆಂಕಿಯಲ್ಲಿ ಅನೇಕ ಪೊಲೀಸ್ ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಸಾರ್ವಜನಿಕವಾಗಿರುವ ಅನೇಕ ವಿಡಿಯೋಗಳಲ್ಲಿ ಗಲಭೆಕೋರರು ‘ಅಲ್ಲಾಹು ಅಕಬರ’ ಎಂದು ಘೋಷಣೆ ಕೂಗುತ್ತಾ ಹಿಂಸಾಚಾರ ಮಾಡುತ್ತಿರುವುದು ಕಾಣಿಸುತ್ತದೆ. ವಿಶೇಷವೆಂದರೆ ಈ ಹಿಂಸಾಚಾರವನ್ನು ಮಾಡುವ ಜನರು ಇಸ್ಲಾಮೀ ದೇಶಗಳಲ್ಲಿನ ಅತ್ಯಾಚಾರಗಳಿಗೆ ಬೇಸತ್ತು  ಬೇಸರಿಸಿ ಯುರೋಪ್ ದೇಶಗಳಲ್ಲಿ ಆಶ್ರಯ ಪಡೆದಿರುವ ಶರಣಾರ್ಥಿಗಳೇ ಆಗಿದ್ದಾರೆ. ಕೇವಲ ಒಂದು ವರ್ಷದ ಹಿಂದೆ ಯುರೋಪ್ ರಾಷ್ಟ್ರಗಳು ‘ಇಂತಹ ಶರಣಾರ್ಥಿಗಳಿಗೆ ಆಶ್ರಯ ನೀಡುವುದು ಹೇಗೆ ಮಾನವತಾವಾದವಾಗಿದೆ’, ಎಂದು ಬೊಬ್ಬೆ ಹೊಡೆದು ಹೇಳುತ್ತಿದ್ದವು. ಅವು ಭಾರತವೂ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನ ಶರಣಾರ್ಥಿಗಳಿಗೆ ಔದಾರ್ಯದಿಂದ ಆಶ್ರಯ ನೀಡುವುದು ಏಕೆ ಅಗತ್ಯವಿದೆ ಎಂಬುದರ ಉಪದೇಶವನ್ನೂ ಮಾಡುತ್ತಿದ್ದವು; ಆದರೆ ಕೇವಲ ಒಂದು ವರ್ಷದಲ್ಲಿಯೇ ಯುರೋಪ್ ರಾಷ್ಟ್ರಗಳಿಗೆ ನಾವು ಭಸ್ಮಾಸುರನಿಗೆ ಜನ್ಮ ನೀಡಿದ್ದೇವೆ ಎಂಬುದು ಅರಿವಾಗಿದೆ.

ಯುರೋಪಿನ ರಾಷ್ಟ್ರಗಳಿಗೆ ಇದೊಂದು ಆಘಾತವಾಗಿದೆ. ಸದ್ಯ ಅವರಿಗೆ ಅದರಿಂದ ಸಾವರಿಸಿಕೊಳ್ಳುವುದು ತುಂಬಾ ಕಠಿಣವಾಗಿದೆ. ಇದರಲ್ಲಿ ಇನ್ನೂ ಒಂದು ಮಹತ್ವದ ವಿಷಯವೆಂದರೆ ಸ್ವೀಡನ್‌ನಲ್ಲಿ ಹಿಂದೂ ನವವರ್ಷವನ್ನು ಆಚರಿಸುವುದಿಲ್ಲ, ರಾಮನವಮಿ ಮತ್ತು ಹನುಮಂತ ಜಯಂತಿಯ ಶೋಭಾಯಾತ್ರೆಗಳನ್ನೂ ತೆಗೆಯುವುದಿಲ್ಲ. ಅಲ್ಲಿ ರಾ.ಸ್ವ. ಸಂಘ, ವಿಶ್ವ ಹಿಂದೂ ಪರಿಷತ್ತು ಅಥವಾ ಬಜರಂಗದಳ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳು ಕೂಡ ಇಲ್ಲ. ಆದರೂ ಅಲ್ಲಿ ವಲಸೆ ಬಂದಿರುವ ಮತಾಂಧರು ಹಿಂಸಾಚಾರ ಮಾಡುತ್ತಿದ್ದಾರೆ. ಯುರೋಪಿನ ರಾಷ್ಟ್ರಗಳಿಗೆ ಈ ಗಲಭೆಗಳ ಅನುಭವ ಹೊಸದಾಗಿದೆ; ಭಾರತ, ಭಾರತೀಯರು ಮತ್ತು ಹಿಂದೂಗಳಿಗೆ ಇಂತಹ ಗಲಭೆಗಳು ಹೊಸತೇನಲ್ಲ.

೨. ನಮ್ಮ ದೇಶದ ರಾಜಧಾನಿಯು ನಿರಂತರ ೩ ವರ್ಷಗಳಿಂದ ಹಿಂಸಾಚಾರದಲ್ಲಿ ಬೇಯುತ್ತಿದೆ

ಕೆಲವು ದಿನಗಳ ಹಿಂದೆ ಹಿಂದೂ ಹೊಸವರ್ಷ, ರಾಮನವಮಿ ಮತ್ತು ಹನುಮಂತ ಜಯಂತಿಯ ಸಮಯದಲ್ಲಿ ಆಯೋಜಿಸಿದ ಶೋಭಾಯಾತ್ರೆಗಳ ಮೇಲೆ ಹಿಂಸಾತ್ಮಕ ಆಕ್ರಮಣಗಳಾದವು. ಅವುಗಳಲ್ಲಿ ದೇಶದ ರಾಜಧಾನಿ ದೆಹಲಿಯ ಜಹಾಂಗೀರಪುರಿಯ ಪರಿಸರದಲ್ಲಿ ೧೬ ಏಪ್ರಿಲ್ ೨೦೨೨ ರಂದು ಸ್ಥಳೀಯ ಹಿಂದೂ ಸಮಾಜವು ಹನುಮಂತ ಜಯಂತಿಯ ನಿಮಿತ್ತ ಶೋಭಾಯಾತ್ರೆಯನ್ನು ಆಯೋಜಿಸಿತ್ತು. ಆ ಶೋಭಾಯಾತ್ರೆಯ ಮೇಲೆ ಮತಾಂಧರು ಮಾಡಿದ ಆಕ್ರಮಣವು ಗಲಭೆಯಲ್ಲಿ ರೂಪಾಂತರವಾಯಿತು. ಇದರಲ್ಲಿ ಹಿಂದೂಗಳೊಂದಿಗೆ ಪೊಲೀಸರೂ ಗಾಯಗೊಂಡಿದ್ದಾರೆ. ದೆಹಲಿಯಲ್ಲಿ ಸುಮಾರು ೨೦೨೦ ನೇ ವರ್ಷದಿಂದ ಪ್ರತಿವರ್ಷ ಗಲಭೆಯನ್ನು ನಡೆಸುವ ಒಂದು ‘ಪ್ಯಾಟರ್ನ್’ (ಮಾದರಿ) ತಯಾರಾಗಿದೆ. ೨೦೧೯ ನೇ ಇಸ್ವಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ನಡೆದ ಶಾಹೀನಬಾಗ್ ಆಂದೋಲನ ಮತ್ತು ಅನಂತರ ೨೦೨೦ ರಲ್ಲಿ ನಡೆದ ಗಲಭೆ, ನಂತರ ಅದೇ ವರ್ಷ ಕೃಷಿ ತಿದ್ದುಪಡಿ ಕಾಯಿದೆಯ ವಿರೋಧದಲ್ಲಿ ತಥಾಕಥಿತ ರೈತ ಆಂದೋಲನ ಮತ್ತು ೨೬ ಜನವರಿ ೨೦೨೧ ರಂದು ಕೆಂಪು ಕೋಟೆಯಲ್ಲಿ ನಡೆದ ಗಲಭೆ ಮತ್ತು ಈಗ ೨೦೨೨ ನೇ ಇಸ್ವಿಯಲ್ಲಿ ಜಹಾಂಗೀರಪುರಿಯಲ್ಲಿ ನಡೆದ ಗಲಭೆ ಹೀಗೆ ನಿರಂತರವಾಗಿ ೩ ವರ್ಷಗಳಿಂದ ದೇಶದ ರಾಜಧಾನಿಯು ಪ್ರತಿ ವರ್ಷ ಹಿಂಸಾಚಾರದ ಬಿಸಿಯನ್ನು ಅನುಭವಿಸುತ್ತಿದೆ. ಅವುಗಳಲ್ಲಿ ೨೦೨೦ ಮತ್ತು ೨೦೨೨ ನೇ ಇಸ್ವಿಯಲ್ಲಿ ನಡೆಸಿರುವ ಗಲಭೆಗಳಲ್ಲಿ ಅನೇಕ ಸಮಾನ ಸ್ಥಳಗಳು ಕಂಡುಬರುತ್ತವೆ. ಆದ್ದರಿಂದ ಈ ಹಿಂಸಾಚಾರದ ಎರಡೂ ಘಟನೆಗಳು ಭವಿಷ್ಯದಲ್ಲಿ ನಡೆಸಬಹುದಾದ ದೊಡ್ಡ ಘಟನೆಗಳ ‘ಅಲಾರಾಂ’ ಆಗಿಲ್ಲವಲ್ಲ ? ಎಂಬ ಪ್ರಶ್ನೆ ಮೂಡುತ್ತದೆ.

೩. ೨೦೨೦ ನೇ ಇಸ್ವಿಯಲ್ಲಿ ದೆಹಲಿಯಲ್ಲಾದ ಗಲಭೆ

೩ ಅ. ಮತಾಂಧರು ಗಲಭೆಯ ಪೂರ್ವಸಿದ್ಧತೆಯನ್ನು ಮಾಡುವುದು, ಪೊಲೀಸರಿಗೆ ಅದರ ಸುಳಿವು ಇಲ್ಲದಿರುವುದು ಮತ್ತು ಮತಾಂಧರು ಗೃಹಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸುವುದು

ಅಲ್ಪಸಂಖ್ಯಾತರು ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ದೆಹಲಿಯ ಶಾಹೀನಬಾಗ್ ಪರಿಸರದಲ್ಲಿ ಆಂದೋಲನವನ್ನು ಮಾಡಿದರು. ‘ಈ ಕಾನೂನಿನ ಮೂಲಕ ದೇಶದಲ್ಲಿನ ಮುಸಲ್ಮಾನರ ಪೌರತ್ವವನ್ನು ರದ್ದುಪಡಿಸಲಾಗುವುದು’, ಎಂಬ ಗಾಳಿಸುದ್ದಿಯನ್ನು ಹಬ್ಬಿಸಲಾಯಿತು. ಆ ಮೂಲಕ ಇಡೀ ದೇಶದಲ್ಲಿ ಮತಾಂಧರನ್ನು ಉದ್ರೇಕಿಸುತ್ತಾ ಹಿಂಸೆಗಾಗಿ ಪ್ರವೃತ್ತಗೊಳಿಸಲಾಯಿತು. ಆ ಸಮಯದಲ್ಲಿ ಅಮೇರಿಕಾದ ಆಗಿನ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಇವರು ಭಾರತದ ಪ್ರವಾಸದಲ್ಲಿದ್ದರು. ಟ್ರಂಪ್ ಇವರು ಭಾರತಕ್ಕೆ ಬಂದ ದಿನದಿಂದ ಹಿಡಿದು ಮುಂದಿನ ೪ ದಿನಗಳ ಕಾಲ ದೆಹಲಿಯ ಪೂರ್ವಭಾಗದಲ್ಲಿ ಗಲಭೆಗೆ ಕುಮ್ಮಕ್ಕು ಕೊಡಲಾಯಿತು. ಅದರಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿನ ಹಿಂದೂ ಸಮಾಜವನ್ನು ಗುರಿಪಡಿಸಲಾಗಿತ್ತು. ವಿಶೇಷವೆಂದರೆ ಒಂದೆಡೆಗೆ ಗಲಭೆ ನಡೆಯುತ್ತಿರುವಾಗಲೂ ಪೂರ್ವ ದೆಹಲಿಯ ಶಾಹೀನ ಬಾಗ್ ಪರಿಸರದಲ್ಲಿ ಆಂದೋಲನ ನಡೆಯುತ್ತಿತ್ತು. ಈ ಗಲಭೆಗಾಗಿ ಮತಾಂಧರ ಮನೆಗಳಲ್ಲಿ ಮತ್ತು ಮನೆಗಳ ಟೆರೆಸಗಳ ಮೇಲೆ ‘ಸೋಡಾವಾಟರ್ ಬಾಟ್ಲಿಗಳು, ಕಲ್ಲುಗಳು, ಖಡ್ಗ ಇತ್ಯಾದಿಗಳನ್ನು ಸಂಗ್ರಹಿಸಿಡಲಾಗಿತ್ತು. ಮನೆಗಳ ಮೇಲೆ ಅಳವಡಿಸಿದ ದೊಡ್ಡ ಚಾಟಿಬಿಲ್ಲು (ಕಲ್ಲುಗಳನ್ನು ದೂರದ ವರೆಗೆ ಎಸೆಯಲು ರಬ್ಬರಿನಿಂದ ತಯಾರಿಸಿದ ಒಂದು ಸಾಧನ) ಮೂಲಕ ಕಲ್ಲುಗಳನ್ನು, ಸೋಡವಾಟರ್ ಮತ್ತು ಎಸಿಡ್‌ನ ಬಾಟ್ಲಿಗಳನ್ನು ಎಸೆಯಲಾಯಿತು. ಇದರಲ್ಲಿ ಮಹಿಳೆಯರೂ ದೊಡ್ಡ ಪ್ರಮಾಣದಲ್ಲಿ ತೊಡಗಿದ್ದರು.

ಈ ಗಲಭೆಯಲ್ಲಿ ಒಂದು ಮಹತ್ವದ ಅಂಶವೆಂದರೆ ಪೊಲೀಸರು ಪ್ರಾರಂಭದಲ್ಲಿಯೇ ಸ್ವಲ್ಪ ಸಮಯ ಸಂಪೂರ್ಣ ಹತಾಶರಾಗಿರುವುದು ಕಂಡುಬಂದಿತು; ಏಕೆಂದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಮಾಡಬಹುದು ಎಂಬುದರ ಕಲ್ಪನೆ ಪೊಲೀಸರಿಗಿರಲಿಲ್ಲ. ಆದ್ದರಿಂದ ಪೊಲೀಸರು ಕೂಡ ಗಲಭೆಕೋರರಿಗೆ ಬಲಿಯಾಗಿದ್ದರು. ಗಲಭೆಯ ಆರೋಪಿಗಳಿಗೆ ಮತ್ತು ಅಧಿಕಾರರೂಢ ‘ಆಮ ಆದಮಿ’ (ಆಪ್) ಪಕ್ಷಕ್ಕೆ ಸಂಬಂಧವಿತ್ತು. ‘ಆಪ್’ ಪಕ್ಷವು ತಾಹೀರ ಹುಸೇನ ಈ ಆರೋಪಿಯನ್ನು ಬೆಂಬಲಿಸಿತ್ತು. ಈ ಗಲಭೆಯಲ್ಲಿ ಆಯೋಜನಾಬದ್ಧ ಪದ್ಧತಿಯಿಂದ ಹಿಂದೂ ಸಮಾಜವನ್ನು ಗುರಿಯಾಗಿಟ್ಟು ಹಿಂದೂಗಳ ವಸತಿಗಳನ್ನು ಸರಿಯಾಗಿ ಗುರುತಿಸಿ ಅವುಗಳನ್ನು ಗುರಿ ಪಡಿಸಲಾಗಿತ್ತು. ಈ ಗಲಭೆಯ ಮೂಲಕ ‘ದೇಶಹಿತದ ಕಾನೂನನ್ನು ಅನ್ವಯಗೊಳಿಸಲು ಪ್ರಯತ್ನಿಸಿದರೆ ನಾವು ಗೃಹ ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿ ಅದನ್ನು (ದೇಶಹಿತದ ಕಾನೂನನ್ನು) ತಡೆಯುವೆವು’, ಎಂಬ ಸ್ಪಷ್ಟ ಸಂದೇಶ ನೀಡಲಾಗಿತ್ತು.

೪. ೨೦೨೨ ನೇ ಸಾಲಿನಲ್ಲಿ ದೆಹಲಿಯ ಗಲಭೆ

೪ ಅ. ಬಜರಂಗ ದಳದವರು ಆಯೋಜಿಸಿದ ಹನುಮಾನ ಚಾಲೀಸಾ ಪಠಣವನ್ನು ತಡೆಯಲು ಮತಾಂಧರು ಬೆದರಿಕೆಯೊಡ್ಡುವುದು ಮತ್ತು ಅವರು ಗಲಭೆಯ ಸಿದ್ಧತೆಯನ್ನು ೩ ತಿಂಗಳು ಮೊದಲೇ ಮಾಡುವುದು

ಉತ್ತರ-ಪಶ್ಚಿಮ ದೆಹಲಿಯ ಜಹಾಂಗೀರಪುರಿ ಪರಿಸರವನ್ನು ಮುಸಲ್ಮಾನ ಬಹುಸಂಖ್ಯಾತ ಪ್ರದೇಶವೆಂದು ಗುರುತಿಸಲಾಗುತ್ತದೆ. ಈ ಪರಿಸರದಲ್ಲಿ ಹನುಮಾನ ಜಯಂತಿಯ ನಿಮಿತ್ತ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಅದಕ್ಕೆ ಪೊಲೀಸರು ಮತ್ತು ಅಡಳಿತದಿಂದ ಕ್ರಮಬದ್ಧ ಅನುಮತಿಯನ್ನು ಪಡೆಯಲಾಗಿತ್ತು ಮತ್ತು ಶೋಭಾಯಾತ್ರೆಗೆ ಪೊಲೀಸರ ರಕ್ಷಣೆಯೂ ಇತ್ತು. ಶೋಭಾಯಾತ್ರೆಯು ಪರಿಸರದಲ್ಲಿನ ಮಸೀದಿಯ ಮುಂದಿನಿಂದ ಹೋಗುವಾಗ ಅನಿರೀಕ್ಷಿತವಾಗಿ ಕಲ್ಲುತೂರಾಟ ಆರಂಭವಾಯಿತು.

೨೦೨೦ ರ ಗಲಭೆಯಂತೆಯೇ ಈ ಗಲಭೆಯೂ ಆಯೋಜನಾಬದ್ಧವಾಗಿತ್ತು. ಸದ್ಯ ‘ರಾಸುಕಾ’ (ರಾಷ್ಟ್ರೀಯ ಸುರಕ್ಷಾ ಕಾನೂನಿನ) ದ ಅಂತರ್ಗತ ಬಂಧನದಲ್ಲಿದ್ದ ಆರೋಪಿ ಅನ್ಸಾರ ಎಂಬವನು ೩ ತಿಂಗಳ ಹಿಂದೆ ‘ಬಜರಂಗ ದಳ’ದ ವತಿಯಿಂದ ಆಯೋಜಿಸಿದ ಹನುಮಾನ ಚಾಲೀಸಾ ಪಠಣ ಸಪ್ತಾಹವನ್ನು ನಿಲ್ಲಿಸಲೇಬೇಕೆಂದು, ಬೆದರಿಕೆಯನ್ನು ಹಾಕಿದ್ದನು. ೧೬ ಎಪ್ರಿಲ್ ೨೦೨೨ ರಂದು ನಡೆದ ಗಲಭೆಯ ಚಿತಾವಣಿಯನ್ನೂ ಅವನೇ ಕೊಟ್ಟಿದ್ದನು. ಈ ಶೋಭಾಯಾತ್ರೆಯು ‘ಸಿ ಬ್ಲಾಕ್’ ಮಸೀದಿಯ ಮುಂದಿನಿಂದ ಹೋಗುವಾಗ ಅನಿರೀಕ್ಷಿತವಾಗಿ ಸುತ್ತಮುತ್ತಲಿನ ಕಟ್ಟಡಗಳಿಂದ ಕಲ್ಲು ಮತ್ತು ಸೋಡಾವಾಟರ್ ಬಾಟ್ಲಿಗಳನ್ನು ಎಸೆಯುವುದು ಆರಂಭವಾಯಿತು. ಆಗ ಅನ್ಸಾರನು ಆಕ್ರಮಣಕಾರರಿಗೆ ‘ಇನ್ಹೆ ಛೋಡನಾ ಮತ್, ಇನ್ಹೋನೆ ಜೋ ಕಿಯಾ ಹೈ, ಉಸಕಾ ಅನ್ಜಾಮ್ ಭುಗತ್ನಾ ಪಡೆಗಾ’ (ಇವರನ್ನು ಬಿಡಬೇಡಿ, ಇವರು ಏನು ಮಾಡಿದ್ದಾರೆಯೋ, ಅದರ ಪರಿಣಾಮವನ್ನು ಅವರು ಭೋಗಿಸಲೆಬೇಕು), ಹೀಗೆ ಉದ್ರೇಕಿಸುತ್ತಿದ್ದನು. ಅನಂತರ ಜನರ ಗುಂಪು ಹಿಂಸಾತ್ಮಕವಾಯಿತು ಮತ್ತು ಶೋಭಾಯಾತ್ರೆಯನ್ನು ನಾಲ್ಕೂ ಬದಿಗಳಿಂದ ಮುತ್ತಿಗೆ ಹಾಕಿ ದಂಗೆ ಆರಂಭವಾಯಿತು. ಇದರಲ್ಲಿ ಖಡ್ಗ, ಕಬ್ಬಿಣದ ಸರಳುಸಹಿತ ಗುಂಡುಹಾರಾಟವನ್ನೂ ಮಾಡಲಾಗಿತ್ತು. ಗಲಭೆಯಲ್ಲಿ ಗಾಯಗೊಂಡ ರಾಮಶರಣ ಸಿಂಹ ಇವರ ಹೇಳಿಕೆಗನುಸಾರ ಈ ಗಲಭೆಯ ಸಿದ್ಧತೆಯನ್ನು ಕೆಲವು ತಿಂಗಳುಗಳ ಮೊದಲೇ ಮಾಡಲಾಗಿತ್ತು. ಅದಕ್ಕಾಗಿ ಆವಶ್ಯಕವಿರುವ ಸಾಹಿತ್ಯಗಳನ್ನು ಆಸುಪಾಸಿನ ಮನೆಗಳಲ್ಲಿ ಸಂಗ್ರಹಿಸಿಡಲಾಗಿತ್ತು.

೫. ೨೦೨೦ ಮತ್ತು ೨೦೨೨ ರ ದಂಗೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಹಭಾಗವಿತ್ತು

ಜಹಾಂಗೀರಪುರಿಯಲ್ಲಿ ನಡೆದ ಗಲಭೆಯ ಪ್ರಮುಖ ಸ್ಥಳ ‘ಸೀ ಬ್ಲಾಕ್’, ಕುಶಲ ಚೌಕ ಆಗಿತ್ತು.  ಈ ‘ಸೀ ಬ್ಲಾಕ್’ನ ಸಂಬಂಧ ೨೦೨೦ ರ ಹಿಂಸಾಚಾರದಲ್ಲಿಯೂ ಇತ್ತು.  ಇದನ್ನು ಆ ಪ್ರಕರಣದ ದೋಷಾರೋಪಪತ್ರದಲ್ಲಿ ನಮೂದಿಸಲಾಗಿದೆ. ಅದರಲ್ಲಿ ನಮೂದಿಸಿದ ಮಾಹಿತಿಗನುಸಾರ ಪೌರತ್ವ ಸುಧಾರಣೆಯ ಕಾನೂನಿನ (‘ಸಿಎಎ’ಯ) ವಿರೋಧದಲ್ಲಿ ಶಾಹೀನಬಾಗ್‌ನಲ್ಲಿ ನಡೆಸಿದ ಆಂದೋಲನದಲ್ಲಿ ‘ಸೀ ಬ್ಲಾಕ್’, ಕುಶಲ ಚೌಕದಿಂದಲೇ ಭಾರತದಲ್ಲಿ ಅನಧಿಕೃತವಾಗಿ ವಾಸಿಸುವ ಸುಮಾರು ೩೦೦ ಬಾಂಗ್ಲಾದೇಶಿ ಮಹಿಳೆಯರು, ಮಕ್ಕಳು ಮತ್ತು ಪುರುಷರನ್ನು ಕರೆದುಕೊಂಡು ಹೋಗಲಾಗಿತ್ತು. ಈ ಬಾರಿಯೂ ಆ ಪರಿಸರದಿಂದಲೇ ಆಕ್ರಮಣ ಪ್ರಾರಂಭವಾಗಿತ್ತು.

೬. ‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಆಗುತ್ತದೆ’, ಎಂಬುದನ್ನು ತೋರಿಸಲು ಅಂತರರಾಷ್ಟ್ರೀಯ ಸ್ತರದಲ್ಲಿ ವಾತಾವರಣವನ್ನು ನಿರ್ಮಾಣ ಮಾಡುವುದು

ಇನ್ನೂ ಒಂದು ಯೋಗಾಯೋಗವೆಂದರೆ, ಬ್ರಿಟನ್‌ನ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಇವರ ಭಾರತ ಪ್ರವಾಸವು ಅದೇ ಸಮಯದಲ್ಲಿ ಇತ್ತು. ಅವರು ಭಾರತಕ್ಕೆ ಬರುವ ಮೊದಲು ಯುರೋಪಿನ ಮಾಧ್ಯಮಗಳು ಅನಿರೀಕ್ಷಿತವಾಗಿ ಭಾರತದಲ್ಲಿನ ಕೋಮು ಉದ್ವಿಗ್ನದ ವಿಷಯದಲ್ಲಿ ವಿವಾದವನ್ನು ಎಬ್ಬಿಸುವ ಪ್ರಯತ್ನಿಸಿದ್ದವು. ಇಂತಹ ಚರ್ಚೆಯನ್ನೇ ೨೦೨೦ ರಲ್ಲಿಯೂ ಅಮೇರಿಕಾದ ಆಗಿನ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಇವರ ಪ್ರವಾಸದ ಸಮಯದಲ್ಲಿಯೂ ಮಾಡಲಾಗಿತ್ತು. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರವಾಗುತ್ತದೆ ಎಂಬುದನ್ನು ಬಿಂಬಿಸಲು, ವಿದೇಶಗಳಲ್ಲಿನ ಪ್ರಮುಖರು ಭಾರತದ ಪ್ರವಾಸದಲ್ಲಿರುವಾಗ ಇಂತಹ ಘಟನೆಗಳನ್ನು ಘಟಿಸಲಾಗುತ್ತದೆ. ಆ ಅತ್ಯಾಚಾರಕ್ಕೆ ಬೇಸತ್ತು ಅಲ್ಪಸಂಖ್ಯಾತ ಸಮಾಜ ಪ್ರತಿಕಾರ ಮಾಡುತ್ತದೆ ಎಂಬುದನ್ನೂ ಬಿಂಬಿಸಲಾಗುತ್ತದೆ. ಆದ್ದರಿಂದ ‘ಈಗ ಯಾವ ಹಿಂಸಾಚಾರಗಳು ನಡೆಯುತ್ತವೆಯೋ, ಅದಕ್ಕೆ ದೇಶದಲ್ಲಿನ ಹಿಂದೂ ಸಮಾಜವೇ ಕಾರಣವಾಗಿದೆ’, ಇಂತಹ ತಿಳುವಳಿಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವುದು ಮತ್ತು ಅನಂತರ ಮಾನವಾಧಿಕಾರದ ಹೆಸರಿನಲ್ಲಿ ಭಾರತದ ಮೇಲೆ ಅಂತರರಾಷ್ಟ್ರೀಯ ಒತ್ತಡವನ್ನು ನಿರ್ಮಾಣಮಾಡಲು ಪ್ರಯತ್ನಿಸಲಾಗುತ್ತದೆ.

೭. ಇದು ದೊಡ್ಡ ಸಂಘರ್ಷದ ನಾಂದಿ ಅಲ್ಲವಲ್ಲ ?

ದೇಶದಲ್ಲಿ ನಡೆಯುವ ಇಂತಹ ಸಂಘರ್ಷಗಳು ಭವಿಷ್ಯದಲ್ಲಿನ (೨೦೨೪ ರ ಲೋಕಸಭಾ ಚುನಾವಣೆಯ ಮೊದಲು) ದೊಡ್ಡ ಸಂಘರ್ಷದ ಪೂರ್ವಾಭ್ಯಾಸವಾಗಿದೆಯೇ  ? ಎಂಬ ಪ್ರಶ್ನೆ ಮೂಡುತ್ತದೆ; ಏಕೆಂದರೆ ಈಗಿನ ಕೇಂದ್ರ ಸರಕಾರವನ್ನು ಚುನಾವಣೆಯ ಮೂಲಕ ಸೋಲಿಸಲು ಅಸಾಧ್ಯ ಎಂಬುದು ವಿರೋಧಿಗಳ ಮತ್ತು ಅವರ ‘ಇಕೋಸಿಸ್ಟಮ್’ ಇವರ ಗಮನಕ್ಕೆ ಬಂದಿದೆ. ಅದಕ್ಕಾಗಿ ಮೊದಲು ಮತದಾನ ಯಂತ್ರಗಳ ಹ್ಯಾಕಿಂಗ್‌ನ ವಿಷಯವನ್ನು ಮುಂದಿಟ್ಟು ಚುನಾವಣೆಯ ವಿಷಯದಲ್ಲಿ ಸಂಶಯವನ್ನುಂಟು ಮಾಡಲು ಪ್ರಯತ್ನಿಸಲಾಯಿತು. ಆ ವಿಷಯವನ್ನು ಜನರು ಸಂಪೂರ್ಣ ನಿರಾಕರಿಸಿದರು. ಆದುದರಿಂದ ದೇಶದಲ್ಲಿ ವಿವಿಧ ವಿವಾದಗಳನ್ನು ಹುಟ್ಟಿಸಿ ಅವುಗಳ ಮೂಲಕ ನಿರಂತರವಾಗಿ ಚಿಕ್ಕ-ದೊಡ್ಡ ಸಂಘರ್ಷಗಳನ್ನು ನಡೆಸುತ್ತಿರುವ ಪ್ರಯತ್ನ ನಡೆದಿದೆ. ಪೌರತ್ವ ಸುಧಾರಣೆಯ ಕಾನೂನಿನ ನಂತರ ಕೆಂಪು ಕೋಟೆಯ ಮೇಲೆ ಆಕ್ರಮಣ ಮಾಡಿ ದಂಗೆ ಮಾಡುವ ಕಥಿತ ಕೃಷಿಕರು, ಕರ್ನಾಟಕದಲ್ಲಿ ನಿರ್ಮಾಣ ಮಾಡಿದ ‘ಹಿಜಾಬ್’ನ ವಿವಾದವನ್ನು ದೇಶದಾದ್ಯಂತ ಕ್ರಮೇಣವಾಗಿ ಹರಡುವ ಪ್ರಯತ್ನ ಮತ್ತು ಅನಂತರ ದೇಶದಾದ್ಯಂತದ ವಿವಿಧ ರಾಜ್ಯಗಳಲ್ಲಿ ಶೋಭಾಯಾತ್ರೆಗಳ ಮೇಲಾದ ಗಲಭೆಯ ಮೂಲಕ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಅಶಾಂತಿ ಮತ್ತು ಸಂಘರ್ಷವನ್ನು ಸೃಷ್ಟಿಸುವ ಪ್ರಯತ್ನವಾಗುತ್ತಿದೆಯೇ ? ಎಂಬುದರ ವಿಚಾರವಾಗುವುದು ಆವಶ್ಯಕವಾಗಿದೆ. – ಪಾರ್ಥ ಕಪೋಲೆ, (ಆಧಾರ : ‘ಮುಂಬಯಿ ತರುಣ ಭಾರತ’)