ದೇಶವಾಸಿಗಳಲ್ಲಿ ಜಾಗೃತಿ !

ಸಂಪಾದಕೀಯ

Remove term: ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾRemove term: ಕನ್ನಡ ಸಾಪ್ತಾಹಿಕ ವರ್ಷ 23 ಸಂಚಿಕೆ 18 ಕನ್ನಡ ಸಾಪ್ತಾ

ನಟ ಅಮೀರ್ ಖಾನ್‌ರ ‘ಲಾಲ ಸಿಂಗ್ ಚಢ್ಢಾ’ ಈ ಚಲನಚಿತ್ರವು ಅಪೇಕ್ಷಿತ ಗಲ್ಲಾಪೆಟ್ಟಿಗೆ ತುಂಬಿಸಲು ವಿಫಲವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ‘ಅದು ನೆಲಕಚ್ಚಿದೆ ಅಥವಾ ವಿಫಲವಾಗಿದೆ’ ಎಂದು ಹೇಳಬಹುದು. ‘ಆಮೀರ್ ಖಾನ್‌’ರು ಈ ಚಲನಚಿತ್ರಕ್ಕಾಗಿ ಬಹಳ ಶ್ರಮಿಸಿದ್ದರು, ನೂರಾರು ಜನರು ಅದಕ್ಕಾಗಿ ಕಾರ್ಯನಿರತರಾಗಿದ್ದರು, ‘೧೮೦ ಕೋಟಿ ರೂಪಾಯಿಗಳ ಬಜೆಟ್ ಇರುವ ಈ ಚಲನಚಿತ್ರವು ಒಂದೂವರೆ ವರ್ಷದ ಕಾಲಾವಧಿಯ ನಂತರ ಪ್ರದರ್ಶಿತವಾಯಿತು’ ಎಂದು ಈ ಚಲನಚಿತ್ರದ ಮಾಹಿತಿಯನ್ನು ಪ್ರಸಾರ ಮಾಡಲಾಯಿತು. ‘ಅಮೀರ್ ಖಾನರ ಈ ಬಹುಚರ್ಚಿತ ಚಲನಚಿತ್ರದ ಪ್ರದರ್ಶನದ ಮೊದಲೇ ಅದರ ದೊಡ್ಡ ಪ್ರಮಾಣದಲ್ಲಿ ಜಾಹೀರಾತುಗಳನ್ನು ಮಾಡಲಾಗಿತ್ತು. ಅದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಲನಚಿತ್ರದ ವಿರೋಧಿ ವಾತಾವರಣವನ್ನು ಸೃಷ್ಟಿಸಲಾಯಿತು ಮತ್ತು ಚಲನಚಿತ್ರದ ಪ್ರದರ್ಶನದ  ಸಮಯದಲ್ಲಿ ಈ ಚಲನಚಿತ್ರವನ್ನು ಬಹಿಷ್ಕರಿಸಲು ಟ್ವಿಟರ್‌ನಲ್ಲಿ ‘ಟ್ರೆಂಡ್’ ಮಾಡಲಾಯಿತು. ಈ ಟ್ರೆಂಡ ಯಶಸ್ವಿ ಕೂಡ ಆಯಿತು; ಏಕೆಂದರೆ ಚಲನಚಿತ್ರವು ಪ್ರದರ್ಶನಗೊಂಡ ನಂತರ ಈ ಚಲನಚಿತ್ರದ ಬಗ್ಗೆ ಜನರಲ್ಲಿ ಎಷ್ಟು ಉತ್ಸುಕತೆಯನ್ನು ನಿರ್ಮಿಸಲಾಗಿತ್ತೋ ಆ ತುಲನೆಯಲ್ಲಿ ಚಲನಚಿತ್ರಕ್ಕೆ ಜನರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರಮಂದಿರಗಳು ನಿರ್ಜನವಾಗಿದ್ದವು ಮತ್ತು ಕೆಲವು ಅರ್ಧ ತುಂಬಿದ್ದವು. ಸ್ವತಃ ಅಮೀರ್ ಖಾನ್ ಉಪಸ್ಥಿತರಿದ್ದ ಪ್ರದರ್ಶನಕ್ಕೂ ಜನರ ಭಾಗವಹಿಸುವಿಕೆ ವಿರಳವಾಗಿತ್ತು.

ಚಲನಚಿತ್ರಗಳಲ್ಲಿ ಹಿಂದೂ ಧರ್ಮದ ಅವಮಾನ

ಅಮೀರ್ ಖಾನ್‌ರ ಚಲನಚಿತ್ರಗಳು ಬಹಳ ಜನಪ್ರಿಯವಾಗುತ್ತವೆ, ಹಾಗೆಯೇ ಅವರು ಅದರಿಂದ ಕೋಟಿಗಟ್ಟಲೆ ರೂಪಾಯಿಗಳನ್ನು ಗಳಿಸುತ್ತಾರೆ. ಇದೇ ಚಲನಚಿತ್ರಗಳಲ್ಲಿ ಕೆಲವೊಮ್ಮೆ ಹಿಂದೂ ದೇವತೆಗಳನ್ನು ಟೀಕಿಸಲಾಗುತ್ತದೆ, ಮತ್ತು ಕೆಲವೊಮ್ಮೆ ಅವರನ್ನು ಹೀಯಾಳಿಸಲಾಗುತ್ತದೆ. ‘ಪಿಕೆ’ ಚಲನಚಿತ್ರದಲ್ಲಿ ‘ಶಿವಲಿಂಗದ ಮೇಲೆ ಹಾಲನ್ನು ಹಾಕಿ ವ್ಯರ್ಥಗೊಳಿಸುವ ಬದಲು ಅದನ್ನು ಬಡವರಿಗೆ ನೀಡಬೇಕು’ ಎಂಬ ಸಲಹೆಯನ್ನು ಅಮೀರ ಖಾನ್ ಇವರು ಹಿಂದೂಗಳಿಗೆ ನೀಡಿದ್ದರು. ಹಿಂದೂಗಳ ಪೂಜಾಪದ್ಧತಿಯ ಮೇಲೆಯೂ ಚಲನಚಿತ್ರದ ಮಾಧ್ಯಮದಿಂದಲೂ ಟೀಕಿಸಿದ್ದರು. ಆದರೂ ಬಹುಸಂಖ್ಯಾತ ಹಿಂದೂವಾಗಿರುವ ದೇಶವಾಸಿಗಳು ಈ ಚಲನಚಿತ್ರವನ್ನು ತಲೆಯ ಮೇಲೆ ಕೂರಿಸಿಕೊಂಡರು; ಆದರೆ ಆ ತಪ್ಪನ್ನು ಅವರು ‘ಲಾಲ ಸಿಂಗ್ ಚಢ್ಢಾ’ ಈ ಚಲನಚಿತ್ರದ ಸಮಯದಲ್ಲಿ ಸುಧಾರಿಸಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧಿಸುವುರೊಂದಿಗೆ ಅಮೀರ್ ಖಾನ್‌ರ ಹಿಂದಿನ ಚಲನಚಿತ್ರ ಗಳಲ್ಲಿನ ಹೇಳಿಕೆಗಳ ಸಣ್ಣ ವಿಡಿಯೋ ತಯಾರಿಸಿ ಅದನ್ನು ‘ಲಾಲ ಸಿಂಗ್ ಚಢ್ಢಾ’ ಮೇಲೆ ಬಹಿಷ್ಕಾರಕ್ಕಾಗಿ ಬಳಸಿದರು. ‘ಈ ಚಲನಚಿತ್ರಕ್ಕಾಗಿ ೧೮೦ ರೂಪಾಯಿಗಳ ಟಿಕೀಟುಗಳನ್ನು ಖರೀದಿಸುವ ಬದಲು ಬಡವರಿಗಾಗಿ ಹಾಲು ಖರೀದಿಸಲು ಅದನ್ನು ಬಳಸಿ’, ‘ಯಾರಿಗೆ ದೇಶದಲ್ಲಿ ಅಸುರಕ್ಷತೆ ಅನಿಸುತ್ತದೋ, ಅವರ ಚಲನಚಿತ್ರ ಏಕೆ ನೋಡಬೇಕು ?’, ಎಂಬ ಹೇಳಿಕೆಗಳನ್ನು ಜನರು ತಮ್ಮ ಧ್ವನಿಯಲ್ಲಿ ಧ್ವನಿಮುದ್ರಿಸಿ ಅದನ್ನು ಪ್ರಚಾರ ಮಾಡಿ ದರು. ಅಮೀರ್ ಖಾನ್‌ರ ತುರ್ಕಿ ದೇಶದ ರಾಷ್ಟ್ರಪತಿಗಳ ಪತ್ನಿಯೊಂದಿಗಿನ ಛಾಯಾಚಿತ್ರಗಳನ್ನು, ಅವರ ಹೇಳಿಕೆಗಳ ವಾರ್ತಾ ಪತ್ರಿಕೆಗಳಲ್ಲಿ ಮುದ್ರಿತ ಕಟ್ಟಿಂಗ್ಸ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಯಿತು. ಈ ಚಲನಚಿತ್ರವನ್ನು ವಿರೋಧಿಸುವವರ ನೇತೃತ್ವವನ್ನು ಯಾರೂ ವಹಿಸಿರಲಿಲ್ಲ ಅಥವಾ ಅವರ ವಿರೋಧಕ್ಕೆ ಸಂಘಟನಾತ್ಮಕ ಸ್ವರೂಪವಿರಲಿಲ್ಲ. ಜನರು ಸ್ವಯಂಪ್ರೇರಣೆಯಿಂದ ವಿರೋಧಿಸಿದರು ಮತ್ತು ಅದರಿಂದ ಪ್ರಭಾವಶಾಲಿ ಪರಿಣಾಮವಾಯಿತು.

ಜನರು ಜಾಗವನ್ನು ತೋರಿಸಿದರು !

ಈ ಚಲನಚಿತ್ರದ ನಟಿ ಕರೀನಾ ಕಪೂರ ಇವರು ‘ಈ ಚಲನಚಿತ್ರ ನೋಡುವುದು ಬಿಡುವುದು ಜನರಿಗೆ ಬಿಟ್ಟ ಪ್ರಶ್ನೆಯಾಗಿದೆ’, ಎಂಬ ರೀತಿಯಲ್ಲಿ ಹೇಳಿದ್ದರು. ಚಲನಚಿತ್ರಕ್ಕೆ ಜನರ ಬೆಂಬಲ ಕಡಿಮೆಯಾಗತೊಡಗಿದಾಗ ಅವರು ದಡಬಡಿಸಿ ಎದ್ದರು ಮತ್ತು ‘ಈ ಚಲನಚಿತ್ರ ತಯಾರಿಸಲು ನೂರಾರು ಜನರು ಶ್ರಮಿಸಿದ್ದಾರೆ, ಆದುದರಿಂದ ಜನರು ಚಲನಚಿತ್ರ ವೀಕ್ಷಿಸಬೇಕು’ ಎಂಬ ಹೇಳಿಕೆ ನೀಡಿದರು. ನಟ ಅರ್ಜುನ ಕಪೂರ ಇವರು ಈ ಚಲನಚಿತ್ರಕ್ಕೆ ಸಮರ್ಥನೆ ನೀಡುತ್ತಾ ಚಲನಚಿತ್ರವನ್ನು ವಿರೋಧಿಸುವವರ ಬಗ್ಗೆ, ಜನರು ಮೌನದ ಲಾಭ ಪಡೆಯುತ್ತಿದ್ದಾರೆ, ಇದರ ವಿರುದ್ಧ ಮಾತನಾಡಲೇ ಬೇಕು’, ಎಂಬ ಹೇಳಿಕೆ ನೀಡಿದಾಗ ಜನರು ಅದಕ್ಕೆ ‘ಬಾಲಿವುಡ್ ಚಲನಚಿತ್ರಗಳು ನಮ್ಮಿಂದಾಗಿಯೇ ನಡೆಯುತ್ತವೆ ಎಂದು ಅರ್ಜುನ ಕಪೂರ ಇವರು ಗಮನದಲ್ಲಿಡಬೇಕು’, ಎಂಬ ಉತ್ತರವನ್ನು ನೀಡಿದರು, ಹಾಗೆಯೇ ‘ಇಲ್ಲದಿದ್ದರೂ ನಿಮ್ಮ ಚಲನಚಿತ್ರಗಳು ಫ್ಲಾಪ್ ಆಗುತ್ತವೆ (ನೆಲಕಚ್ಚುತ್ತವೆ), ನಾವು ಬೇರೆ ಏನೂ ಮಾಡುವ ಆವಶ್ಯಕತೆ ಇಲ್ಲ’, ಎಂಬ ಉತ್ತರಗಳನ್ನು ನೀಡಿದರು. ಕೆಲವರು ನಟ ‘ಶಾರುಖ ಖಾನರ ೨೦೨೩ ರಲ್ಲಿ ಪ್ರದರ್ಶನಗೊಳ್ಳಲಿರುವ ‘ಪಠಾಣ’ ಈ ಚಲನಚಿತ್ರವನ್ನು ಬಹಿಷ್ಕರಿಸಲು ಸಿದ್ಧತೆಯನ್ನು ಮಾಡೋಣ’, ಎಂಬ ಚರ್ಚೆಯನ್ನು ಆರಂಭಿಸಿದ್ದಾರೆ. ‘ಕೌನ ಬನೆಗಾ ಕರೋಡಪತಿ’ ಎಂಬ ಅಮಿತಾಭ ಬಚ್ಚನರ ಜನಪ್ರಿಯ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಇವರು ತಮ್ಮ ಚಲನಚಿತ್ರದ ಪ್ರಚಾರಕ್ಕಾಗಿ ಪ್ರಯತ್ನಿಸಿದಾಗ ‘ಈಗ ಅಮಿತಾಭ ಬಚ್ಚನ ಇವರ ಕಾರ್ಯಕ್ರಮವನ್ನೇ ಬಹಿಷ್ಕರಿಸಲು ಕರೆ ನೀಡಬೇಕಾಗುವುದು’, ಎಂಬ ‘ಪೋಸ್ಟ್’ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರು. ಅಮೀರ ಖಾನ್ ಬಗ್ಗೆ ಮತ್ತು ಅವರ ವೈಭವೀಕರಣವನ್ನು ಮಾಡುವ ಪ್ರತಿಯೊಂದು ವಿಷಯದ ಬಗ್ಗೆ ಜನರ ಮನಸ್ಸಿನಲ್ಲಿ ತೀವ್ರ ಆಕ್ರೋಶವಿದೆ, ಎಂಬುದು ಈ ನಿಮಿತ್ತ ಕಂಡು ಬಂದಿತು. ನಟ ಅಕ್ಷಯ ಕುಮಾರ ಇವರು ಗುಟ್ಖಾದ ಜಾಹೀರಾತಿನಲ್ಲಿ ಪಾಲ್ಗೊಂಡಾಗ ಅವರ ಮೇಲೆ ವ್ಯಾಪಕ ಸ್ತರದಲ್ಲಿ ಟೀಕೆಯಾದ ನಂತರ ಅವರು ಕ್ಷಮೆ ಯಾಚಿಸಿದರು ಮತ್ತು ಅದರ ಹೊಡೆತ ‘ರಕ್ಷಾಬಂಧನ’ ಈ ಚಲನಚಿತ್ರಕ್ಕೆ ಬಿದ್ದಿರುವುದು ಕಂಡಿತು. ಈ ಚಲನಚಿತ್ರವೂ ಚೆನ್ನಾಗಿಯೇ ಸೋಲುಂಡಿತು.

ಬಾಲಿವುಡ್‌ನ ಚಲನಚಿತ್ರಗಳು ಕೆಲವು ಚಲನಚಿತ್ರ ಮತ್ತು ನಟ – ನಟಿಯರವನ್ನು ಹೊರತುಪಡಿಸಿ ಬಹಳ ಮೆರೆಯುತ್ತವೆ. ರಾತ್ರೋ ರಾತ್ರಿ ಸಂಬಂಧಿತರಿಗೆ ಅಪಾರ ಪ್ರಸಿದ್ಧಿ ದೊರಕುತ್ತದೆ ಮತ್ತು ಹಣ ಸಿಗುತ್ತದೆ. ಅವರ ಚಲನಚಿತ್ರಗಳನ್ನು ಜನರು ನೋಡುತ್ತಾರೆಂದು ಅವರು ಜನಪ್ರಿಯರಾಗುತ್ತಾರೆ; ಆದರೆ ಯಾವಾಗ ಈ ಚಲನಚಿತ್ರವನ್ನು ನಡೆಸಿಕೊಡುವುದಿಲ್ಲ ಎಂದು ಜನತೆಯೇ ನಿಶ್ಚಯಿಸುತ್ತದೆಯೋ ಆಗ ಯಾರೇನು ಮಾಡಬಲ್ಲರು ? ಬಾಲಿವುಡ್‌ನ ಕೆಲವು ನಟ-ನಟಿಯರು ಅನೇಕ ಗಂಭೀರ ಅಪರಾಧಗಳಲ್ಲಿ ಪಾಲ್ಗೊಂಡ ಬಗ್ಗೆ ವಾರ್ತೆಗಳು ನಡುನಡುವೆ ಬರುತ್ತವೆ, ಕೆಲವು ಜನರು ಸಮಾಜವಿರೋಧಿ ಜಾಹಿರಾತುಗಳಲ್ಲಿ ಪಾಲ್ಗೊಂಡಿರುತ್ತಾರೆ. ಹೀಗಿದ್ದರೂ ಅವರು ಮತ್ತು ಅವರ ಚಲನಚಿತ್ರಗಳು ಪ್ರಸಿದ್ಧಿಯಲ್ಲಿರುವುದು ಅಯೋಗ್ಯವಾಗಿದೆ. ಈಗ ಕಾಲವು ಬದಲಾಗಿದೆ. ಮೊದಲು ಹೆಚ್ಚು ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳು ಲಭ್ಯವಿರಲಿಲ್ಲ ಮತ್ತು ಅವುಗಳ ಬಳಕೆಗೂ ಮಿತಿಯಿತ್ತು. ಈಗ ಸಾಮಾಜಿಕ ಮಾಧ್ಯಮಗಳಿಂದ ಜನರಿಗೆ ಕೆಲವು ನಟರ ಅಂದರೆ ಹಿಂದೂ ಧರ್ಮವಿರೋಧಿ, ಭಾರತವಿರೋಧಿಸ್ವರೂಪವು ಗಮನಕ್ಕೆ ಬರತೊಡಗಿದೆ. ಅವರನ್ನು ವಿರೋಧಿಸಲು ಅವರು ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ‘ನಾವೇನೇ ತೋರಿಸಿದರೂ ಭಾರತೀಯ ಜನತೆ ನಮ್ಮನ್ನು ತಲೆಯ ಮೇಲೆ ಕೂರಿಸುತ್ತದೆ’ ಎಂಬ ತಿಳುವಳಿಕೆಯನ್ನು ಈಗ ಬಾಲಿವುಡ್ ದೂರ ಮಾಡಬೇಕು. ಭಾರತೀಯರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮ ಈಗ ಜಾಗೃತವಾಗುತ್ತಿದೆ. ೨೦೦ ರಿಂದ ೫೦೦ ರೂಪಾಯಿಗಳನ್ನು ನೀಡಿ ಏನನ್ನಾದರೂ ನೋಡುವುದಕ್ಕಿಂತ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ನಮ್ಮ ಚಿಕ್ಕದಾದರೂ ಅಡ್ಡಿಯಿಲ್ಲ ಕೊಡುಗೆಯನ್ನು ನೀಡಲು ಅವರು ಪ್ರಯತ್ನಿಸುತ್ತಿದ್ದಾರೆ. ಇದು ಭಾರತ ಮತ್ತು ಹಿಂದೂ ಧರ್ಮಕ್ಕಾಗಿ ಖಂಡಿತವಾಗಿಯೂ ಆಶಾಕಿರಣವಾಗಿದೆ !