ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ

ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ.

‘ಗಂಗಾಜಲ’ದಿಂದ ಕೊರೊನಾ ಸೋಂಕಿಗೆ ಉಪಚರಿಸಲು ಮಾನ್ಯತೆ ನೀಡಿರಿ!- ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಮನವಿ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕ ವಿಜಯ ನಾಥ ಮಿಶ್ರಾ ಇವರು ಮಾತನಾಡುತ್ತಾ, ವರ್ಷ ೧೮೯೬ ರಲ್ಲಿ ಕಾಲರಾ ಮಹಾಮಾರಿಯ ಸಮಯದಲ್ಲಿ ಡಾ. ಹ್ಯಾಕಿಂಗ ಇವರು ಒಂದು ಸಂಶೋಧನೆಯನ್ನು ನಡೆಸಿದ್ದರು. ಅದರಲ್ಲಿ ಗಂಗಾನದಿಯ ನೀರನ್ನು ಕುಡಿಯುವ ಜನರಿಗೆ ಕಾಲರಾ ಬರುವುದಿಲ್ಲ ಎಂದು ಕಂಡು ಬಂದಿತ್ತು.

ದೇವಾಲಯದ ಮೂರ್ತಿಯು ಸಣ್ಣ ಮಗುವಿನಂತೆ ಇರುವುದರಿಂದ ನ್ಯಾಯಾಲಯವೇ ಅದರ ಸಂಪತ್ತಿನ ರಕ್ಷಣೆಯನ್ನು ಮಾಡಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಯಾವ ಸಂಪತ್ತಿನ ಬಗ್ಗೆ ನಿರ್ಐಯ ನೀಡಿತೋ, ಆ ಸಂಪತ್ತನ್ನು ಬ್ರಿಟಿಷರು ೧೮೬೩ ರಲ್ಲಿ ಬಳುವಳಿ ಎಂದು ಕೆಲವು ಜನರಿಗೆ ನೀಡಿತ್ತು. ‘ಈ ಭೂಮಿಯ ಮೇಲೆ ನಮ್ಮ ಅನೇಕ ಪೀಳಿಗೆಯಿಂದ ಅಧಿಕಾರವಿದೆ’, ಎಂದು ಕುಟುಂಬದವರು ನ್ಯಾಯಾಲಯದಲ್ಲಿ ಹೇಳಿದ್ದರು. ಅದೇರೀತಿ ಈ ಭೂಮಿಯ ಬಾಡಿಗೆಯನ್ನೂ ಕೂಡಾ ದೇವಸ್ಥಾನಕ್ಕೆ ನೀಡುತ್ತಿದ್ದೆವು ಎಂದು ಹೇಳಿದ್ದರು.

ಆರೋಪಿಯ ವಿರೋಧದ ‘ಕೊಕಾ’ವನ್ನು ರದ್ದು ಪಡಿಸಿದ ಉಚ್ಚ ನ್ಯಾಯಾಲಯದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು !

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ೬ ನೇ ಆರೋಪಿ ಮೊಹನ ನಾಯಕ್ ಇವರ ಮೇಲಿನ ‘ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜ್ಡ್ ಕ್ರೈಮ್ ಆಕ್ಟ'(ಕೊಕಾ) ಅಡಿಯಲ್ಲಿನ ಅಪರಾಧವನ್ನು ರದ್ದುಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.

ಹಿಂದೂಗಳಿಗೆ ಪ್ರೇರಣಾದಾಯಕವಾಗಿರುವ ಮದ್ರಾಸ ಉಚ್ಚ ನ್ಯಾಯಾಲಯದ ತೀರ್ಪು ಮತ್ತು ಅದರ ಹಿಂದಿನ ಸಂಘರ್ಷದ ಇತಿಹಾಸ !

ವಿ ಕಲಾಥುರದಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದರು, ಹೀಗಿರುವಾಗ ಅವರಿಗೆ ಹಿಂದೂಗಳ ಹಬ್ಬ-ಉತ್ಸವಗಳು ಹೇಗೆ ಇಷ್ಟವಾಗುವವು ? ಅವರ ಮನಸ್ಸಿನಲ್ಲಿ ಹಿಂದೂದ್ವೇಷ ತುಂಬಿ ತುಳುಕುವುದರಿಂದ ಅವರು ಹಿಂದೂಗಳ ಉತ್ಸವ ಮತ್ತು ಮೆರವಣಿಗೆಗಳನ್ನು ವಿರೋಧಿಸಿದರು; ಆದರೆ ಮಾನ್ಯ ನ್ಯಾಯಾಲಯವು ಹಿಂದೂಗಳಿಗೆ ನ್ಯಾಯ ನೀಡಿತು.

ಬೆಂಗಳೂರಿನ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಜಾಮೀನು

ಕಳೆದ ವರ್ಷ ಆಗಸ್ಟ್‍ನಲ್ಲಿ ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರದೇಶದಲ್ಲಿ ಮತಾಂಧರು ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ಚಾರ್ಜ್‍ಶೀಟ್‍ಅನ್ನು ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಗಲಭೆಕೋರರಿಗೆ ನ್ಯಾಯಾಲಯವು ಜಾಮೀನು ನೀಡಿತು.

ಐ.ಎಂ.ಎ.ನ ಅಧ್ಯಕ್ಷ ಡಾ. ಜಾನ್‍ರೋಜ ಜಯಲಾಲ್ ಅವರ ಮನವಿಯನ್ನು ತಿರಸ್ಕರಿಸಿದ ದೆಹಲಿ ಉಚ್ಚನ್ಯಾಯಾಲಯ

ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐ.ಎಂ.ಎ.ನ) ಅಧ್ಯಕ್ಷ ಡಾ. ಜಾನ್‍ರೋಜ ಆಸ್ಟಿನ್ ಜಯಲಾಲ್ ಅವರಿಗೆ ಯಾವುದೇ ಧರ್ಮದ ಪ್ರಚಾರ ಮಾಡಲು ತಮ್ಮ ಸಂಘಟನೆಯ ವೇದಿಕೆಯನ್ನು ಬಳಸದಂತೆ ಕನಿಷ್ಠ ನ್ಯಾಯಾಲಯವು ಇತ್ತಿಚೆಗೆ ಆದೇಶಿಸಿತ್ತು.

ಎಫ್.ಐ.ಆರ್. ದಾಖಲಿಸುವ ಮೊದಲು ಪೊಲೀಸರು ಯಾರನ್ನೂ ವಿಚಾರಣೆಗಾಗಿ ಕರೆಯಲು ಸಾಧ್ಯವಿಲ್ಲ ! – ಛತ್ತೀಸ್‍ಗಡ ಉಚ್ಚ ನ್ಯಾಯಾಲಯ

ಎಫ್.ಐ.ಆರ್. ದಾಖಲಿಸುವ ಮೊದಲು ಪೊಲೀಸರು ಯಾರನ್ನೂ ವಿಚಾರಣೆಗೆ ಕರೆಸಲು ಸಾಧ್ಯವಿಲ್ಲ ಎಂದು ಛತ್ತೀಸ್‍ಗಡ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಬಿಲಾಸಪುರ ಜಿಲ್ಲೆಯ ಸರಕಂಡಾ ಪೊಲೀಸ್ ಠಾಣೆಯಲ್ಲಿ ‘ಛತ್ತೀಸಗಡ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಬೋರ್ಡ್’ನ ನಿರ್ದೇಶಕ ರಾಜೇಶ್ವರ ಶರ್ಮಾ ಅವರು ನೀಡಿದ ದೂರಿನ ವಿಚಾರಣೆಯ ವೇಳೆ ನ್ಯಾಯಾಲಯವು ಈ ತೀರ್ಪು ನೀಡಿತು.

ವಿವಾಹಿತ ಮತ್ತು ಅವಿವಾಹಿತ ಜೋಡಿಗಳು ‘ಲಿವ್ ಇನ್ ರಿಲೇಶನ್’ನಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

‘ಲಿವ್ ಇನ ರಿಲೇಶನ್’ ಎಂಬುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಭಾರತದಲ್ಲಿ ಯಾರಾದರೂ ಅದನ್ನು ಅನುಕರಿಸುತ್ತಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸಬೇಕು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಲು ಸರಕಾರವು ಪ್ರಯತ್ನಿಸಬೇಕು !

ದೇವಾಲಯಗಳ ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ ! – ಮದ್ರಾಸ್ ಉಚ್ಚನ್ಯಾಯಾಲಯದ ಐತಿಹಾಸಿಕ ಆದೇಶ

ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ.