ತಮಿಳುನಾಡಿನ ಪ್ರಸಿದ್ಧ ಪಳನಿ ದೇವಾಲಯದ ಸಂಪತ್ತಿನ ಪ್ರಕರಣ
ಇಂದು ದೇಶದಲ್ಲಿ ಸಾವಿರಾರು ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ಇದೆ ಹಾಗೂ ಇದರ ಸಂಪತ್ತನ್ನು ಹಿಂದೂ ಧರ್ಮಕ್ಕಾಗಿ ಉಪಯೋಗಿಸುವ ಬದಲು ಇತರ ಕೆಲಸಕ್ಕಾಗಿ ಮಾಡಲಾಗುತ್ತಿದೆ. ಅದಕ್ಕಾಗಿ ಮಾನ್ಯ ನ್ಯಾಯಾಲಯವು ಈ ವಿಷಯದತ್ತಲೂ ಗಮನ ಹರಿಸಿ ಈ ಸಂಪತ್ತನ್ನು ಹಿಂದೂ ಧರ್ಮಕ್ಕಾಗಿ ವ್ಯಯಿಸುವಂತಾಗಲು ಪ್ರಯತ್ನಿಸಬೇಕು, ಎಂದು ಹಿಂದೂ ಭಕ್ತರಿಗೆ ಅನಿಸುತ್ತದೆ !
ಚೆನ್ನೈ (ತಮಿಳನಾಡು) – ಕಾನೂನಿನ ಪ್ರಕಾರ ದೇವಾಲಯಗಳ ಮೂರ್ತಿ ಒಂದು ಸಣ್ಣ ಮಗುವಿನಂತಿವೆ. ಸಣ್ಣ ಮಕ್ಕಳ ಸಂಪತ್ತಿನ ರಕ್ಷಣೆಯನ್ನು ನ್ಯಾಯಾಲಯವೇ ಮಾಡಬೇಕು, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ರಾಜ್ಯದ ಪ್ರಸಿದ್ಧ ಪಳನಿ ದೇವಸ್ಥಾನದ ಭೂ ವಿವಾದದ ಬಗೆಗಿನ ಅರ್ಜಿಯ ವಿಚಾರಣೆಯ ಸಮಯದಲ್ಲಿ ಹೇಳಿದೆ. ಈ ಭೂಮಿಯ ಮೇಲೆ ಕೆಲವು ಕುಟುಂಬದವರು ಅಕ್ರಮವಾಗಿ ನಿಯಂತ್ರಣ ಸಾಧಿಸಿದ್ದರು. ಅವರನ್ನು ಅಲ್ಲಿಂದ ತೆಗೆಯುವಂತೆ ನ್ಯಾಯಾಲಯವು ಆದೇಶ ನೀಡಿದೆ. ಕಳೆದ ಅನೇಕ ವರ್ಷಗಳಿಂದ ದೇವಸ್ಥಾನದ ಸಂಪತ್ತನ್ನು ಈ ಕುಟುಂಬದವರು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ನ್ಯಾಯಾಲಯವು ಅಧಿಕಾರಿಗಳಿಗೆ ೪ ವಾರಗಳಲ್ಲಿ ದೇವಸ್ಥಾನದ ಸಂಪತ್ತನ್ನು ಖಾಲಿ ಮಾಡಬೇಕು ಎಂದು ಆದೇಶ ನೀಡಿದೆ.
“Idol of temple is akin to minor child; court has to protect properties of idol:” Madras High Court restores property to Tamil Nadu Palani Temple
report by @SuryamShagun #MadrasHighCourt #Palani
Read story and judgment: https://t.co/PJ5K9JPyxe pic.twitter.com/SfoyQXHdIb
— Bar & Bench (@barandbench) June 29, 2021
೧. ನ್ಯಾಯಾಲಯವು ಯಾವ ಸಂಪತ್ತಿನ ಬಗ್ಗೆ ನಿರ್ಣಯ ನೀಡಿತೋ, ಆ ಸಂಪತ್ತನ್ನು ಬ್ರಿಟಿಷರು ೧೮೬೩ ರಲ್ಲಿ ಬಳುವಳಿ ಎಂದು ಕೆಲವು ಜನರಿಗೆ ನೀಡಿತ್ತು. ‘ಈ ಭೂಮಿಯ ಮೇಲೆ ನಮ್ಮ ಅನೇಕ ಪೀಳಿಗೆಯಿಂದ ಅಧಿಕಾರವಿದೆ’, ಎಂದು ಕುಟುಂಬದವರು ನ್ಯಾಯಾಲಯದಲ್ಲಿ ಹೇಳಿದ್ದರು. ಅದೇರೀತಿ ಈ ಭೂಮಿಯ ಬಾಡಿಗೆಯನ್ನೂ ಕೂಡಾ ದೇವಸ್ಥಾನಕ್ಕೆ ನೀಡುತ್ತಿದ್ದೆವು ಎಂದು ಹೇಳಿದ್ದರು. ಇದಕ್ಕೆ ನ್ಯಾಯಾಲಯವು, ನೀವು ಈ ಭೂಮಿಯ ಮಾಲಿಕತ್ವವನ್ನು ಹೊಂದಿಲ್ಲ, ಬಾಡಿಗೆದಾರರಾಗಿದ್ದೀರಿ. ಆದ್ದರಿಂದ ಸಂಪತ್ತಿನ ಮೇಲೆ ಯಾವುದೇ ಭಾಗದ ಮೇಲೆ ಮಾಲಿಕತ್ವವನ್ನು ಹೊಂದಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
೨. ಆಯುಕ್ತರಿಗೆ ಈ ಸಂಪೂರ್ಣ ಪ್ರಕ್ರಿಯೆಯ ಮೇಲೆ ನಿಗಾ ಇಡುವಂತೆ ಹೇಳಲಾಗಿದೆ. ಈ ಭೂಮಿ ೬೦ ಎಕರೆಗಿಂತ ಹೆಚ್ಚು ವಿಸ್ತಾರವಾಗಿದೆ. ತಿರುಪುರದ ಧಾರಾಪುರದಲ್ಲಿ ಪೆರಿಯಾಕುಮಾರಾಪಲಯಮಂ ಗ್ರಾಮದಲ್ಲಿ ಈ ಭೂಮಿ ಇದೆ. ಈ ಸಂಪತ್ತಿನ ಮೇಲೆ ಮುರುಗನ ದೇವರ ಅಧಿಕಾರವಿದೆ, ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದರು. ಈ ದೇವಸ್ಥಾನದ ಸಂಪೂರ್ಣ ಹೆಸರು ‘ಪಳನಿ ಅರುಲ್‍ಮಿಗು ದಂಡಾಯುಧಪಾಣಿ ಸ್ವಾಮಿ ದೇವಸ್ಥಾನ’ ಎಂದಾಗಿದೆ. ತಮಿಳುನಾಡಿನ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಇದು ಒಂದಾಗಿದೆ.