HC Slammed Pinarayi Vijayan: ಪಿಣರಾಯಿ ವಿಜಯನ್ ಸರಕಾರಕ್ಕೆ ಕೇರಳ ಹೈಕೋರ್ಟ್ ನಿಂದ ಛೀಮಾರಿ !

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ಪ್ರಕರಣ

ತಿರುವನಂತಪುರಂ – ಕೇರಳದ ಕಮ್ಯುನಿಸ್ಟ್ ಪಿಣರಾಯಿ ವಿಜಯನ್ ಸರಕಾರಕ್ಕೆ ಅದರ ನಿಷ್ಕ್ರಿಯತೆಗಾಗಿ ಹೈಕೋರ್ಟ್ ಛೀಮಾರಿ ಹಾಕಿದ ನಂತರ, ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ‘ಪೋಕ್ಸೋ’ ಸಂಬಂಧಿತ ಆರೋಪಗಳ ಪಟ್ಟಿಯನ್ನು ಕೇರಳ ಪೊಲೀಸರು ದಾಖಲಿಸಲಿದೆ. ಇತ್ತೀಚಿನ ಹೈಕೋರ್ಟ್ ನ ಆದೇಶದ ನಂತರ ಸಮಿತಿಯ ವರದಿಯ ಸಂಪೂರ್ಣ ಆವೃತ್ತಿಯನ್ನು ಪೊಲೀಸರು ಸ್ವೀಕರಿಸಿದ್ದಾರೆ; ಆದರೆ ಇನ್ನೂ ಸಾಕ್ಷಿಗಳ ಪ್ರತಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಬೇಕಾಗಿದೆ. ಈ ಪ್ರಕರಣದ ಪ್ರಮುಖ ಸಾಕ್ಷ್ಯವು ಪ್ರಸ್ತುತ ಗೃಹ ಸಚಿವಾಲಯದ ಬಳಿಯಿದೆ. ಅದನ್ನು ಸೆಪ್ಟೆಂಬರ್ 17 ರೊಳಗೆ ತನಿಖಾ ತಂಡಕ್ಕೆ ಹಸ್ತಾಂತರಿಸುವ ನಿರೀಕ್ಷೆಯಿದೆ.

1. ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಆರೋಪದ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ನಂತರ ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿಗಳ ವಿರುದ್ಧ ಸುಮಾರು 23 ಪ್ರಕರಣಗಳನ್ನು ದಾಖಲಿಸಲಾಗಿದೆ.

2. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳ ಕುರಿತು ಕೇರಳ ಹೈಕೋರ್ಟ್, ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿಯಲ್ಲಿ ಬಹಿರಂಗವಾಗಿರುವ ಲೈಂಗಿಕ ದೌರ್ಜನ್ಯದ ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಕೇರಳದ ಕಮ್ಯುನಿಸ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

3. ನ್ಯಾಯಾಧೀಶರ ಖಂಡಪೀಠವು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, 2019ರಲ್ಲಿ ಹೇಮಾ ಸಮಿತಿಯು ತನ್ನ ಮೊದಲ ವರದಿಯನ್ನು ಸಲ್ಲಿಸಿದ್ದರೂ, ಕಳೆದ 5 ವರ್ಷಗಳಲ್ಲಿ ಸರಕಾರ ಏನನ್ನೂ ಮಾಡಿಲ್ಲ. ರಾಜ್ಯ ಸರಕಾರವನ್ನು ಟೀಕಿಸುತ್ತಾ ಹೈಕೋರ್ಟ್, ‘ಮೌನ ಇದು ಪರ್ಯಾಯವಲ್ಲ’ ಎಂದು ಹೇಳಿದೆ.

4. ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಲೈಂಗಿಕ ಕಿರುಕುಳ, ಅಕ್ರಮ ನಿಷೇಧಗಳು, ತಾರತಮ್ಯ, ಮಾದಕ ವಸ್ತು ಮತ್ತು ಮದ್ಯದ ದುರ್ಬಳಕೆ, ವೇತನ ಅಸಮಾನತೆ ಮತ್ತು ಅಮಾನವೀಯ ಕೆಲಸದ ಪರಿಸ್ಥಿತಿಗಳು, ವಿಶೇಷವಾಗಿ ಮಹಿಳೆಯರ ಭಯಾನಕ ಅಂಶಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇಂತಹ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು !

ಕೇರಳ ಸರಕಾರದ ಈ ನಿಷ್ಕ್ರಿಯತೆಯ ಬಗ್ಗೆ ಮಹಿಳಾ ಆಯೋಗ ಮೌನವೇಕೆ ?