ಎರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ! – ಕೇಜ್ರಿವಾಲ್

ನವದೆಹಲಿ – ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಘೋಷಿಸಿದರು.

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಸೆಪ್ಟೆಂಬರ್ 13 ರಂದು ಕೇಜ್ರಿವಾಲ್‌ಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅವರು ಕಳೆದ 177 ದಿನಗಳಿಂದ ಕಾರಾಗೃಹದಲ್ಲಿದ್ದರು. ಕಾರಾಗೃಹದಿಂದ ಹೊರಬಂದ ನಂತರ ಅವರು ಈ ಘೋಷಣೆ ಮಾಡಿದರು. ಕೇಜ್ರಿವಾಲ್ ಮಾತನಾಡಿ, ” ಸರ್ವೋಚ್ಚ ನ್ಯಾಯಾಲಯವು ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಿದೆ. ಅದರಿಂದ ನಾನು ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲವೆಂದು ಕೆಲವರು ಹೇಳುತ್ತಿದ್ದಾರೆ ಹಿಂದಿನ ವರ್ಷ ಕೇಂದ್ರ ಸರಕಾರವೇನು ಕಡಿಮೆ ಷರತ್ತುಗಳನ್ನು ವಿಧಿಸಿತ್ತೆ? ಕೇಂದ್ರ ಸರಕಾರವು ಕಾನೂನುಗಳ ಮೇಲೆ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ನಮ್ಮ ಹಕ್ಕುಗಳು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸಲು ಪ್ರಯತ್ನಿಸಿತು. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಾನು ಮತ್ತು ಮನೀಶ್ ಸಿಸೋಡಿಯಾ ಇಬ್ಬರೂ ದೆಹಲಿಯ ಜನರ ಬಳಿಗೆ ಹೋಗಿ ಸಂವಾದ ನಡೆಸಲಿದ್ದೇವೆ. ಅದರ ನಂತರ, ನಾವು ಪ್ರಾಮಾಣಿಕರು ಎಂದು ಜನರು ಭಾವಿಸಿದರೆ, ಅವರು ನಮ್ಮನ್ನು ಮತ್ತೆ ಆಯ್ಕೆ ಮಾಡುವರು. ಇನ್ನೆರಡು ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಸಭೆಯಲ್ಲಿ ನನ್ನ ಬದಲು ಆಮ್ ಆದ್ಮಿ ಪಕ್ಷದಿಂದ ಮತ್ತೊಬ್ಬ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗುವುದು. ಈಗ ದೆಹಲಿ ಜನರ ತೀರ್ಮಾನ ಬರುವವರೆಗೂ ನಾನು ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಈ ಮೂಲಕ ಕೇಜ್ರಿವಾಲ್ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಭ್ರಷ್ಟರು, ಗೂಂಡಾಗಳಿಂದಲೇ ತುಂಬಿರುವ ಆಪ್ ಪಕ್ಷವನ್ನು ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧಿಸಬೇಕು!