ಬಾಂಗ್ಲಾದೇಶದ ಕಟ್ಟರವಾದಿ ನಾಯಕ ಮುಫ್ತಿ ಜುಬೇರ ರಹಮಾನಿ ಭಾರತದಲ್ಲಿ ಪ್ರತ್ಯಕ್ಷ !

ರಹಮಾನಿ ಭಾರತಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ತನಿಖೆ ಪ್ರಾರಂಭ

ನವದೆಹಲಿ – ಬಾಂಗ್ಲಾದೇಶದ ಮೂಲಭೂತವಾದಿ ನಾಯಕ ಮುಫ್ತಿ ಮಹಮ್ಮದುಲ್ ಹಸನ್ ಜುಬೈರ್ ಉರ್ಫ ಮುಫ್ತಿ ಜುಬೇರ್ ರಹಮಾನಿ ಇತ್ತೀಚೆಗೆ ಬಂಗಾಳದ ಹರಿದಾಸ್‌ಪುರ ಗಡಿಯಿಂದ ಭಾರತವನ್ನು ತಲುಪಿದ್ದಾನೆ . ರಹಮಾನಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಮತ್ತು ಅನ್ಸಾರುಲ್ಲಾ ‘ಬಾಂಗ್ಲಾ ಟೀಮ’ ಎಂಬ ಜಿಹಾದಿ ಸಂಘಟನೆ ನಾಯಕರೊಂದಿಗೆ ಸಂಬಂಧ ಹೊಂದಿರುವ ಶಂಕೆ ಇದೆ. ಅವನು ಭಾರತಕ್ಕೆ ಹೇಗೆ ಬಂದನು ಮತ್ತು ಅವನು ಇಲ್ಲಿ ಯಾವ ಕೃತ್ಯವನ್ನು ನಡೆಸುತ್ತಿದ್ದಾನೆ? ಎಂದು ಭಾರತೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಹಮಾನಿ ಪ್ರಕರಣದಲ್ಲಿ ಸರಕಾರದ ನಿಲುವಿನ ಬಗ್ಗೆ ಎಲ್ಲರ ಗಮನ ನಿಟ್ಟಿದೆ. ರಹಮಾನಿ ದೆಹಲಿಯ ಇಸ್ಲಾಮಿ ಸಂಸ್ಥೆ ಮತ್ತು ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವಬಂದ್ ಗೆ ಭೇಟಿ ನೀಡಿದನು. (ಭಾರತಕ್ಕೆ ಅಪಾಯಕಾರಿಯಾದ ರಹಮಾನಿಯನ್ನು ಬಂಧಿಸಿ ಅವನ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನು ಭಾರತ ಸರಕಾರ ತೋರುವುದೇ ? – ಸಂಪಾದಕರು)

ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರಹಮಾನಿ

ರಹಮಾನಿ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತ ವಿರೋಧಿ ಪ್ರಚಾರವನ್ನು ಮಾಡುತ್ತಿದ್ದಾನೆ ಮತ್ತು ಭಾರತ ವಿರೋಧಿ ಅಂಶಗಳು, ಭಯೋತ್ಪಾದಕರು ಮತ್ತು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿದ್ದಾನೆಂಬ ಆರೋಪವಿದೆ. ಭಾರತದ ಈಶಾನ್ಯ ರಾಜ್ಯಗಳ ಪ್ರತ್ಯೇಕತೆಯ ಬೇಡಿಕೆಯನ್ನು ಅವನು ಬೆಂಬಲಿಸುತ್ತಿದ್ದಾನೆ ಎನ್ನುವ ಆರೋಪವೂ ಇದೆ.

ಕಳೆದ ತಿಂಗಳು ಮಹಮ್ಮದ್ ಯೂನಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ರಚನೆಯಾಗಿತ್ತು. ಈ ಸರಕಾರ ನಿಷೇಧಿತ ಜಮಾತ್-ಎ-ಇಸ್ಲಾಮಿ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿದು ಭಯೋತ್ಪಾದಕ ನಾಯಕರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ರಹಮಾನಿಯನ್ನು ಕೂಡ ಅದೇ ವೇಳೆ ಕಾಶಿಂಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು. ಜಮಾತ್-ಎ-ಇಸ್ಲಾಮಿ ಎಂಬ ರಾಜಕೀಯ ಸಂಘಟನೆಯನ್ನು ಹಿಂದಿನ ಶೇಖ್ ಹಸೀನಾ ಸರಕಾರ ಅನಧಿಕೃತ ಸಂಘಟನೆ ಎಂದು ಘೋಷಿಸಿತ್ತು.

ಸಂಪಾದಕೀಯ ನಿಲುವು

ರಹಮಾನಿ ಭಾರತಕ್ಕೆ ಬಂದಿರುವುದರಿಂದ ಭಾರತೀಯ ಭದ್ರತಾ ವ್ಯವಸ್ಥೆಯ ದಕ್ಷತೆಯ ಬಗ್ಗೆ ಪ್ರಶ್ನಚಿಹ್ನೆ ಎದ್ದಿರುವುದು ಖಚಿತವಾಗಿದೆ. ಭಾರತದ ಶತ್ರು ಎಂದೇ ಗುರುತಿಸಿಕೊಳ್ಳುವ ರೆಹಮಾನಿ ಭಾರತ ತಲುಪಿದ್ದು ನಮ್ಮ ಸರ್ಕಾರಕ್ಕೆ ಅದರ ಮಾಹಿತಿಯೇ ಸಿಗದಿರುವುದು ಖೇದಕರ !