ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ! – ಉತ್ತರಾಖಂಡದಲ್ಲಿ ಬಿಜೆಪಿ ಸರಕಾರದಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ

ಚಾರಧಾಮ್ ಮತ್ತು ೫೧ ದೇವಸ್ಥಾನಗಳ ಸರಕಾರಿಕರಣ ಯೋಗ್ಯವೇ ಆಗಿದೆ ಎಂದು ಉತ್ತರಾಖಂಡದ ಭಾಜಪ ಸರಕಾರವು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರ ಸಲ್ಲಿಸಿದೆ. ಭಾಜಪದ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ಈ ಸರಕಾರಿಕರಣದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ನ್ಯಾಯಾಲಯವು ಸರಕಾರದ ಬಳಿ ತಮ್ಮ ಅಭಿಪ್ರಾಯವ ಕೋರಿತ್ತು.

ಸಂಚಾರ ನಿಷೇಧದ ಸಮಯದಲ್ಲಿ ಧ್ವನಿವರ್ಧಕದಿಂದ ಅಜಾನ್ ಕೂಗುವುದರ ನಿಷೇಧ ಸೂಕ್ತ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಧ್ವನಿವರ್ಧಕ ಮೇಲಿನ ನಿಷೇಧವನ್ನು ಗಾಜಿಪುರದ ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ವಿರೋಧಿಸಿದ್ದರು. “ರಂಜಾನ್ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಅಜಾನ್ ಕೊಡದಿರುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಇದರಲ್ಲಿ ಹಸ್ತಕ್ಷೇಪವನ್ನು ಮಾಡಬೇಕೆಂದು ಆಗ್ರಹಿಸಿದ್ದರು.