ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಜ್ಞಾನವಾಪಿಯು ಸಾಕ್ಷಾತ ಶ್ರೀ ವಿಶ್ವನಾಥನ ನಿವಾಸವಾಗಿದೆ. ಹಿಗಿರುವಾಗ ಜ್ಞಾನವಾಪಿಯನ್ನು ‘ಮಸೀದಿ’ ಎಂದು ಕರೆಯುವುದು ದುರದೃಷ್ಟಕರ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜ್ಞಾನವಾಪಿಯ ನೆಲಮಾಳಿಗೆಯನ್ನು ದುರುಸ್ತಿಗೊಳಿಸಲು ಮತ್ತು ಅಲ್ಲಿನ ವ್ಯಾಸ ನೆಲಮಾಳಿಗೆಯ ಮೇಲೆ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ನೀಡದಂತೆ ಕೋರಿದ್ದ ಹಿಂದೂಗಳ ಮನವಿಯನ್ನು ವಾರಣಾಸಿಯ ಸಿವಿಲ್ ಕೋರ್ಟ್ ಸೆಪ್ಟೆಂಬರ್ 13 ರಂದು ತಿರಸ್ಕರಿಸಿತು. ಅಲ್ಲದೆ ಜ್ಞಾನವಾಪಿ ನೆಲಮಾಳಿಗೆಯಲ್ಲಿ ನಡೆಯುತ್ತಿರುವ ಪೂಜೆ ಎಂದಿನಂತೆ ಮುಂದುವರಿಯಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಈ ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಸ್ವಾಗತರ್ಹ ! – ವಕೀಲ ಮದನ್ ಮೋಹನ್ ಯಾದವ್
ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷವನ್ನು ಪ್ರತಿನಿಧಿಸಿದ್ದ ವಕೀಲ ಮದನ್ ಮೋಹನ್ ಯಾದವ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು , ”ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಈಗ ವಿಧಾನಮಂಡಲವೂ ಕೂಡ ಜ್ಞಾನವಾಪಿಯನ್ನು ಆದಿ ವಿಶ್ವೇಶ್ವರ ಕಾಶಿ ವಿಶ್ವನಾಥನ ಜನ್ಮಸ್ಥಳ ಎಂದು ಗುರುತಿಸಿದೆ. ಕಲ್ಯಾಣ್ ಸಿಂಗ್ ನಂತರ ಈ ರೀತಿಯ ಸ್ಪಷ್ಟ ಹೇಳಿಕೆಯನ್ನು ಕೇಳುವುದೇ ಅಪರೂಪವಾಗಿತ್ತು” ಎಂದವರು ಹೇಳಿದರು.