ಕಾವಡ ಯಾತ್ರೆಯ ಸಮಯದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಿದ್ದರಿಂದ, ಬರೇಲಿ(ಉತ್ತರ ಪ್ರದೇಶ) ಇಲ್ಲಿನ ಹಿಂದೂಗಳಿಂದ ತಕ್ಕ ಪ್ರತ್ಯುತ್ತರ !
ಬರೇಲಿ (ಉತ್ತರ ಪ್ರದೇಶ) – ಇಲ್ಲಿ ಸೆಪ್ಟೆಂಬರ್ 15 ರ ತಡರಾತ್ರಿ, ಜೋಗಿ ನವಾದಾ ಪ್ರದೇಶದಲ್ಲಿ ಮುಸ್ಲಿಮರು ‘ಜುಲೂಸ್-ಎ-ಮಹಮ್ಮದಿ’ ಹೆಸರಿನಲ್ಲಿ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯು 4 ಅಂಜುಮಾನ್‌ಗಳು (ಸಣ್ಣ ಮೆರವಣಿಗೆಗಳು) ಒಟ್ಟಾಗಿ ದೊಡ್ಡದಾಯಿತು. ಇದರಲ್ಲಿ ಎಂದಿಗೂ ಹಾಕದ ‘ಡಿಜೆ’ (ದೊಡ್ಡ ಧ್ವನಿವರ್ಧಕ ವ್ಯವಸ್ಥೆ) ಅನ್ನು ಹಚ್ಚಿದ್ದರು. 500ಕ್ಕೂ ಹೆಚ್ಚು ಮುಸ್ಲಿಮರ ಈ ಮೆರವಣಿಗೆ ಮೌರ್ಯ ಓಣಿಯಲ್ಲಿ ಸಾಗಿದಾಗ ಹಿಂದೂಗಳು ಅದನ್ನು ಬಲವಾಗಿ ವಿರೋಧಿಸಿದರು. ಪೊಲೀಸರು ಡಿಜೆಯನ್ನು ಮೆರವಣಿಗೆಯಿಂದ ತೆಗೆದುಹಾಕಿದರು. ಆದರೂ ಹಿಂದೂಗಳು ಮೆರವಣಿಗೆಯನ್ನು ‘ಅಸಾಂಪ್ರದಾಯಿಕ’ ಎಂದು ವಿರೋಧಿಸಿದರು. ಹಿಂದೂಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪೊಲೀಸರು ಮೆರವಣಿಗೆಯಲ್ಲಿನ ಮುಸ್ಲಿಮರ ಸಂಖ್ಯೆಯನ್ನು ಕಡಿಮೆ ಮಾಡಲು ಆದೇಶಿಸಿದರು. ಇದನ್ನು ಮುಸ್ಲಿಮರು ಪ್ರತಿಭಟಿಸಿದರು. ಇದಾದ ನಂತರ ಹಿಂದೂಗಳು ಕಟ್ಟಡಗಳ ಮೇಲ್ಛಾವಣಿಯಿಂದ ಪೊಲೀಸರ ಮೇಲೆ ನೀರು ಎರಚಿದರು. ಈ ವೇಳೆ ಎರಡೂ ಗುಂಪುಗಳಿಂದ ಧಾರ್ಮಿಕ ಘೋಷಣೆಗಳನ್ನು ಕೂಗಿದರು. ರಾತ್ರಿ 2.15ರ ವರೆಗೆ ಮುಸ್ಲಿಮರ ಮೆರವಣಿಗೆ ಮುಂದೆ ಸಾಗಲಿಲ್ಲ.
ಪ್ರತಿ ವರ್ಷ ಈದ್ ಸಮಯದಲ್ಲಿ ಈ ಮೆರವಣಿಗೆ ನಡೆಯುತ್ತದೆ; ಆದರೆ ಅವರ ಸಂಖ್ಯೆ ಸೀಮಿತವಾಗಿರುತ್ತದೆ ಮತ್ತು ಡಿಜೆ ಹಚ್ಚುವ ಸಂಪ್ರದಾಯವಿಲ್ಲ. ಕವಾಡ್ ಯಾತ್ರೆಯ ಸಂದರ್ಭದಲ್ಲಿ, ಹಿಂದೂಗಳು ಡಿಜೆ ಬಳಕೆಯನ್ನು ‘ಅಸಾಂಪ್ರದಾಯಿಕ’ ಎಂದು ತೀವ್ರವಾಗಿ ಆಕ್ಷೇಪಿಸಿದ್ದರು. ಹಾಗಾಗಿಯೇ ಈಗ ಹಿಂದೂಗಳು ‘ಇದ್ದಂತೆ’ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಂಪಾದಕೀಯ ನಿಲುವುಹಿಂದೂಗಳು ತಮಗಾದ ಅನ್ಯಾಯದ ವಿರುದ್ಧ ಮಾತನಾಡುವುದು ತುಂಬಾ ಅಗತ್ಯವಾಗಿದ್ದು, ಭಾರತದಾದ್ಯಂತ ಇರುವ ಹಿಂದೂಗಳು ಈ ಘಟನೆಯಿಂದ ಪಾಠ ಕಲಿಯಬೇಕು. ಹಿಂದೂಗಳಿಗೆ ಇಂತಹ ನಿಲುವು ತೆಗೆದು ಕೊಳ್ಳುವ ಸಮಯ ಏಕೆ ಬಂದಿದೆ ? ಜಾತ್ಯಾತೀತವಾದಿಗಳಿಗೆ ಮಾತ್ರ ಇದು ಇಷ್ಟವಾಗದ ಕಾರಣ ಅವರು ಹಿಂದೂಗಳನ್ನು ‘ಅಸಹಿಷ್ಣು’ ಎಂದು ಹೀಯಾಳಿಸಿ ನುಡಿಮುತ್ತು ನೀಡಿದರೆ ಆಶ್ಚರ್ಯವಿಲ್ಲ ! |