ಬಿಹಾರ; ಅಧಿಕಾರಕ್ಕೆ ಬಂದರೆ, ಒಂದೇ ಗಂಟೆಯಲ್ಲಿ ಮದ್ಯ ನಿಷೇಧವನ್ನು ತೆರವು !

  • ಜನ ಸುರಾಜ್ಯ ಪಕ್ಷದ ಅಧ್ಯಕ್ಷ ಪ್ರಶಾಂತ ಕಿಶೋರ್ ಅವರ ಜನತಾ ದ್ರೋಹಿ ಘೋಷಣೆ

  • ಮದ್ಯ ನಿಷೇಧದಿಂದಾಗಿ ಬಿಹಾರಕ್ಕೆ 20 ಸಾವಿರ ಕೋಟಿ ರೂಪಾಯಿ ನಷ್ಟ !

ಪಾಟಲಿಪುತ್ರ (ಬಿಹಾರ) – ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜನ ಸುರಾಜ್ಯ ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯಲ್ಲಿ ಮದ್ಯ ನಿಷೇಧವನ್ನು ರದ್ದುಗೊಳಿಸುತ್ತೇವೆ ಎಂಬ ಜನತಾ ದ್ರೋಹಿ ಘೋಷಣೆಯನ್ನು ರಾಜಕೀಯ ತಂತ್ರಜ್ಞ ಹಾಗೂ ಜನ ಸುರಾಜ್ಯ ಪಕ್ಷದ ಮುಖ್ಯಸ್ಥ ಪ್ರಶಾಂತ ಕಿಶೋರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಮಾಡಿದ್ದಾರೆ. ಮದ್ಯ ನಿಷೇಧದಿಂದ ಬಿಹಾರ ರಾಜ್ಯಕ್ಕೆ 20 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 2 ರಂದು, ಪ್ರಶಾಂತ್ ಕಿಶೋರ್ ಅವರು ತಮ್ಮ ಜನ ಸುರಾಜ್ಯ ಪಕ್ಷದ ಅಧಿಕೃತ ಘೋಷಣೆ ಮಾಡಲಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಹಾರದ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಅವರು ಹೇಳಿದರು. ಅವರು ತಮ್ಮ ಮಾತನ್ನು ಮುಂದುವರಿಸಿ,’ ನಿತೀಶ್ ಕುಮಾರ್ ಜಾರಿಗೊಳಿಸಿರುವ ಮದ್ಯ ನಿಷೇಧ ಕೇವಲ ತೋರಿಕೆಯದ್ದಾಗಿದೆ. ಈ ಮದ್ಯ ನಿಷೇಧದಿಂದಾಗಿ ಅಕ್ರಮ ಮದ್ಯ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಕೆಲ ರಾಜಕೀಯ ಮುಖಂಡರು, ಅಧಿಕಾರಿಗಳು ಇದರ ಲಾಭ ಪಡೆಯುತ್ತಿದ್ದು, ಸರಕಾರಕ್ಕೆ ಹಾನಿಯಾಗುತ್ತಿದೆ. ಬಿಹಾರದ ಇಂದಿನ ಪರಿಸ್ಥಿತಿಗೆ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಎಷ್ಟು ಕಾರಣರಾಗಿದ್ದಾರೆಯೋ ಅಷ್ಟೇ ಕಾಂಗ್ರೆಸ್ ಮತ್ತು ಭಾಜಪ ಕೂಡ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಸಂಪಾದಕೀಯ ನಿಲುವು

  • ಹಣ ಗಳಿಸಲು ಜನರನ್ನು ಕುಡುಕರನ್ನಾಗಿ ಮಾಡುವ ಜನ ಪ್ರತಿನಿಧಿಗಳು! ಇಂತಹವರನ್ನು ಮತ್ತು ಅವರ ಪಕ್ಷವನ್ನು ಚುನಾವಣೆ ಸ್ಪರ್ಧಿಸದಂತೆ ಶಾಶ್ವತವಾಗಿ ನಿಷೇಧಿಸಬೇಕು ಮತ್ತು ಇಂತಹ ಜನತಾ ದ್ರೋಹಿ ಜನಪ್ರತಿನಿಧಿಗಳನ್ನು ಜೈಲಿಗೆ ಹಾಕಬೇಕು!
  • ಇಂತಹ ಜನತಾ ದ್ರೋಹಿ ಘೋಷಣೆ ಮಾಡಿದ ಬಳಿಕವೂ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಯಾರು ಕೂಗುತ್ತಿಲ್ಲ ಏಕೆ?