6 ತಿಂಗಳಲ್ಲಿ 11 ಕೋಟಿ ಭಕ್ತರಿಂದ ಶ್ರೀ ರಾಮಲಲ್ಲಾನ ದರ್ಶನ !

ಅಯೋಧ್ಯೆ – ಜನವರಿ 2024 ರಿಂದ ಜೂನ್ 2024 ರವರೆಗಿನ 6 ತಿಂಗಳ ಅವಧಿಯಲ್ಲಿ, 11 ಕೋಟಿ ಭಕ್ತರು ಶ್ರೀ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಈ ಅಂಕಿ ಅಂಶವನ್ನು ಪ್ರಕಟಿಸಿದೆ. ಕುತೂಹಲಕಾರಿ ಅಂಶವೆಂದರೆ, ಈ 6 ತಿಂಗಳ ಅವಧಿಯಲ್ಲಿ ಬಂದಿರುವ ಪ್ರವಾಸಿಗರ ಸಂಖ್ಯೆಯು 2023 ರಲ್ಲಿ ಉತ್ತರ ಪ್ರದೇಶಕ್ಕೆ ಬಂದ ಒಟ್ಟೂ ಪ್ರವಾಸಿಗರ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯು ತಿಳಿಸಿದೆ.

1. ಉತ್ತರ ಪ್ರದೇಶದಲ್ಲಿ 2024 ರ ಮೊದಲ 6 ತಿಂಗಳಲ್ಲಿ 32 ಕೋಟಿ 98 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 19 ಕೋಟಿ 60 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು.

2. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲ 6 ತಿಂಗಳಲ್ಲಿ 13 ಕೋಟಿ 38 ಲಕ್ಷ ಹೆಚ್ಚು ಪ್ರವಾಸಿಗರು ಬಂದಿದ್ದಾರೆ. ವಾರಣಾಸಿ ಮತ್ತು ಆಗ್ರಾದ ತಾಜ್ ಮಹಲ್ ಗೆ ವಿದೇಶಿ ಪ್ರವಾಸಿಗರು ವಿಶೇಷ ಆದ್ಯತೆ ನೀಡಿರುವುದು ಕೂಡ ಬೆಳಕಿಗೆ ಬಂದಿದೆ.

3. ಈ ವರ್ಷ ಆಗ್ರಾದ ತಾಜ್ ಮಹಲ್‌ಗೆ 7 ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ, ಆದರೆ ವಾರಣಾಸಿ ನಗರಕ್ಕೆ 1 ಲಕ್ಷ 33 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ.

4. ಒಟ್ಟು 48 ಕೋಟಿ ಪ್ರವಾಸಿಗರು ಉತ್ತರ ಪ್ರದೇಶದಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜಯವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.