ವಿವಾಹಿತ ಮತ್ತು ಅವಿವಾಹಿತ ಜೋಡಿಗಳು ‘ಲಿವ್ ಇನ್ ರಿಲೇಶನ್’ನಲ್ಲಿ ಒಟ್ಟಿಗೆ ಇರಲು ಸಾಧ್ಯವಿಲ್ಲ ! – ರಾಜಸ್ಥಾನ ಉಚ್ಚನ್ಯಾಯಾಲಯ

‘ಲಿವ್ ಇನ ರಿಲೇಶನ್’ ಎಂಬುದು ಪಾಶ್ಚಿಮಾತ್ಯರ ಸಂಸ್ಕೃತಿಯಾಗಿದೆ. ಭಾರತದಲ್ಲಿ ಯಾರಾದರೂ ಅದನ್ನು ಅನುಕರಿಸುತ್ತಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸಬೇಕು. ಭಾರತೀಯ ಸಂಸ್ಕೃತಿಯನ್ನು ರಕ್ಷಿಸಲು ಸರಕಾರವು ಪ್ರಯತ್ನಿಸಬೇಕು !

ಜೈಪುರ (ರಾಜಸ್ಥಾನ) – ವಿವಾಹಿತ ಮತ್ತು ಅವಿವಾಹಿತ ಜೋಡಿಗಳು ಒಟ್ಟಿಗೆ ‘ಲಿವ್ ಇನ್ ರಿಲೇಶನ್’ನಲ್ಲಿ ಒಟ್ಟಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಅರ್ಜಿಯ ವಿಚಾರಣೆಯ ವೇಳೆ ರಾಜಸ್ಥಾನ ಉಚ್ಚನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿ ೨೯ ವರ್ಷದ ಅವಿವಾಹಿತ ಮಹಿಳೆ ಮತ್ತು ೩೧ ವರ್ಷದ ವಿವಾಹಿತ ವ್ಯಕ್ತಿ ತಮ್ಮ ಕುಟುಂಬಗಳಿಂದ ಅಪಾಯವಿರುವುದರಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಸರ್ವೋಚ್ಚನ್ಯಾಯಾಲಯದ ಒಂದು ತೀರ್ಪನ್ನು ಉಲ್ಲೇಖಿಸುತ್ತಾ, ಉಚ್ಚನ್ಯಾಯಾಲಯವು ಪ್ರೇಮಿ ಜೋಡಿಯು ಗಂಡ ಮತ್ತು ಹೆಂಡತಿಯಾಗಿ ಬದುಕುವುದು ಮಾತ್ರವಲ್ಲ, ಮದುವೆಯಾಗುವ ಅರ್ಹತೆಯೂ ಅವರಲ್ಲಿರಬೇಕು. ಅಂತಹ ಅರ್ಹತೆಯು ವಿವಾಹಿತ ಮತ್ತು ಅವಿವಾಹಿತ ಪ್ರೇಮಿಗಳ ನಡುವೆ ಇರಲು ಸಾಧ್ಯವಿಲ್ಲ ಎಂದು ಹೇಳಿದೆ.